April 25, 2024

Bhavana Tv

Its Your Channel

ಆರ್ ಟಿ ಐ ಕಾರ್ಯಕರ್ತರ ಹಲ್ಲೆ ಮತ್ತು ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ.

ಸಾವಳಗಿ: ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಮಖಂಡಿ ತಾಲ್ಲೂಕು ಘಟಕದ ವತಿಯಿಂದ ಹರಪನಹಳ್ಳಿ ಆರ್ ಟಿ ಐ ಕಾರ್ಯಕರ್ತ ಟಿ ಶ್ರೀಧರ ಹತ್ಯೆ ಹಾಗೂ ರಾಮನಗರ ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ ಅವರ ಮೇಲೇ ಹಲ್ಲೆ ಖಂಡಿಸಿ ಉಪ ತಹಶಿಲ್ದಾರರ
ಮೂಲಕ ಮಾನ್ಯ ರಾಜ್ಯ ಪಾಲರಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ತಮ್ಮ ಜೀವದ ಹಂಗನ್ನು ತೊರೆದು ಹೋರಾಟ ಮಾಡುತ್ತಿರುವ ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಹಲ್ಲೆಯಾಗುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಈ ಹಿಂದೆ ಅನೇಕ ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಹಲ್ಲೆಗಳು ಆಗಿವೆ ಅದಕ್ಕಾಗಿ ಭ್ರಷ್ಟಾಚಾರದ ವಿರುದ್ದ, ಕಳಪೆ ಕಾಮಗಾರಿಗಳ ವಿರುದ್ದ, ಭೂ ಒತ್ತುವರಿ, ಅಕ್ರಮ ಗಣಿಗಾರಿಕೆ, ಅಕ್ರಮ ಮರಳು ದಂಧೆ, ಹೀಗೆ ಹಲವಾರು ವಿಷಯಗಳ ಬಗ್ಗೆ ಧ್ವನಿ ಎತ್ತುವ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ರಕ್ಷಣೆ ನೀಡುವ ಸಲುವಾಗಿ ವಿಶೇಷ ಕಾನೂನು ರಚನೆ ಮಾಡಬೇಕು ಮತ್ತು ಹತ್ಯೆ ಹಾಗೂ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೂಳ್ಳದಿದ್ದರೆ ರಾಜ್ಯಾದ್ಯಂತ ಮಾಹಿತಿ ಹಕ್ಕು ಕಾರ್ಯಕರ್ತರು ಒಂದುಗೂಡಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಈ ಮೂಲಕ ಎಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರು ಗೃಹ ಸಚಿವರಿಗೆ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಸಿದ್ದು ಬಂಡಿವಡ್ಡರ, ಜಿಲಾ ಕಾರ್ಯದರ್ಶಿ ಕಿರಣ ಸೂರಗೂಂಡ, ಉಮೇಶ ಜಾಧವ, ಮಲ್ಲು ಕೂಷ್ಠಿ, ಕುಮಾರ ಜಾಧವ, ಸಾಗರ ಕಾಂಬಳೆ ಇತರರು ಇದ್ದರು.

ವರದಿ : ಕಿರಣ ಸೂರಗೂಂಡ ಸಾವಳಗಿ

error: