March 29, 2024

Bhavana Tv

Its Your Channel

ಬರದ ನಾಡಲ್ಲಿ ನೀರು ತಂದ ಆಧುನಿಕ ಭಗೀರಥ ಶಾಸಕ ಆನಂದ ನ್ಯಾಮಗೌಡ

ಕವಟಗಿ-ಗೋಠೆ ಪ್ರಾಯೋಗಿಕ ನೀರು ಹರಿಸುವ ಕಾರ್ಯಕ್ರಮಕ್ಕೆ ಚಾಲನೆ

ಜಮಖಂಡಿ: ಬರಪೀಡಿತ ಉತ್ತರ ಕರ್ನಾಟಕ ಭಾಗದಲ್ಲಿ ಕೆರೆ, ಬಾಂದಾರಗಳು, ಬ್ಯಾರೇಜಗಳನ್ನು ತುಂಬಿಸುವ ಈ ಮಹತ್ವದ ಯೋಜನೆ ತುಬಚಿ-ಬಬಲೇಶ್ವರ ಏತ ನೀರಾವರಿಯ ಎರಡನೇಯ ಹಂತದ ಕವಟಗಿ- ಗೋಠೆ ಏತ ನೀರಾವರಿಯು ಪೂರ್ಣಗೊಂಡಿದೆ ಇದಕ್ಕೆ ಕಾರಣಿಭೂತರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ. ಎಂ.ಬಿ.ಪಾಟೀಲ ಆಶಿರ್ವಾದ ಹಾಗೂ ದಿ.ಸಿದ್ದು ನ್ಯಾಮಗೌಡ ಇಚ್ಚಾಶಕ್ತಿಯೇ ಕಾರಣವೆಂದು ಶಾಸಕ ಆನಂದ ನ್ಯಾಮಗೌಡ ಅವರು ಹೇಳಿದರು
ಕವಟಗಿ-ಗೋಠೆ ಏತ ನೀರಾವರಿ ಯೋಜನೆ ಪ್ರಾಯೋಗಿಕವಾಗಿ ಚಾಲನೆ ನೀಡಿ ಮಾತನಾಡಿದ ಶಾಸಕ ಆನಂದ ನ್ಯಾಮಗೌಡ. ಈ ಎರಡು ನೀರಾವರಿ ಯೋಜನೆಯಿಂದ ೧,೩೦,೨೨೧ ಲಕ್ಷ ಎಕರೇ ನೀರಾವರಿಯಾಗಿದ್ದು. ನೀರಾವರಿ ಸಚಿವರಾಗಿ ಅತಿ ಹೆಚ್ಚು ಕೆರೆ, ಕಾಲುವೆ ಹಾಗೂ ಆಣೆಕಟ್ಟೆಗಳನ್ನು ಅಭಿವೃದ್ದಿಪಡಿಸಿ ಹೊಸ ಇತಿಹಾಸ ಸೃಷ್ಟಿಸಿದ ಸಾಧನೆ ಡಾ.ಎಂ.ಬಿ.ಪಾಟೀಲ ಅವರದ್ದು ಅವರ ಇಚ್ಚಾಶಕ್ತಿ ಕಾರಣದಿಂದ ಈ ಯೋಜನೆ ಸಹಕಾರವಾಗಿದೆ ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಯೋಜನೆಯು ಗೋಠೆ, ಕಲಬೀಳಗಿ, ಕಾಜಿಬೀಳಗಿ, ಕುರಗೋಡ, ಕನ್ನೋಳ್ಳಿ, ಗದ್ಯಾಳ, ಸಾವಳಗಿ, ತುಂಗಳ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಸಂಜೀವಿನಿಯಾಗಲಿದೆ. ಕೇವಲ ನಾಲ್ಕು ತಿಂಗಳಲ್ಲಿ ೧೫,೫೦೦ ಎಚ್.ಪಿ ಸಾಮಾರ್ಥ್ಯದ ಎರಡು ಮೋಟಾರಿನಿಂದ ೬.೩೦ ಟಿ.ಎಮ್.ಸಿ ನೀರನ್ನು ಎತ್ತುವ ಯೋಜನೆ ಇದಾಗಿದ್ದು ಈಗ ಕೇವಲ ಒಂದು ಮೋಟಾರು ಮಾತ್ರ ಪ್ರಾರಂಭವಾಗಿದೆ. ರೈತರಿಗೆ ಭರಪೂರ ನೀರು ಸಿಗುವ ಮೂಲಕ , ನದಿ-ಕಾಲುವೆಗಳು ಕೆರೆ-ಕುಂಟೆಗಳನ್ನು ತುಂಬುವದರಿAದ ಕೃಷಿಗೆ ನೀರು ನೆರವಾಗುತ್ತದೆ. ಈ ಯೋಜನೆ ನಮ್ಮ ತಂದೆಯವರಿದ್ದಾಗಲೆ ಪ್ರಾರಂಭವಾಗಿದ್ದರೆ ಮತ್ತಷ್ಟು ಖುಷಿ ವಿಚಾರವಾಗುತಿತ್ತು ಆದರೆ ದೇವರ ಆಟ ಬೇರೆಯಾಗಿತ್ತು ಆದರೆ ಎಲ್ಲಾ ಮತದಾರ ಪ್ರಭುಗಳು ನಮ್ಮ ತಂದೆಯವರAತೆ ನಾನು ಕೆಲಸ ಮಾಡುತ್ತೆನೆ ಎನ್ನುವ ವಿಶ್ವಾಸದಿಂದ ನನ್ನನ್ನು ಆಯ್ಕೆ ಮಾಡಿದ್ದು ಅವರ ಹೆಸರು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ.
ರೈತರಿಗೆ ಅನುಕೂಲವಾಗುವಂತಹ ಕೆಲಸ ಮಾಡುತ್ತಿದ್ದೇನೆ ನಿಮ್ಮ ಸಹಕಾರ ಬಹಳ ಮುಖ್ಯ ಎಂದರು.

ಇನ್ನೂ ಕಾರ್ಯಕ್ರಮದಲ್ಲಿ ಹೊಸ ಭರವಸೆಯನ್ನು ನೀಡಿದ್ದು ಸಾವಳಗಿ ಹೋಬಳಿಯಲ್ಲಿನ ಎಲ್ಲಾ ಕೆರೆಗಳನ್ನು ತುಂಬುವ ಯೋಜನೆಯನ್ನು ಸದ್ಯದಲ್ಲಿಯೇ ಪ್ರಾರಂಭ ಮಾಡಲಿದ್ದು ಸಂಬAಧಪಟ್ಟ ಅಧಿಕಾರಿಗಳನ್ನು ಸಭೆ ಕರೆದು ತೀರ್ಮಾನ ಮಾಡಲಾಗುವದು ಎಂದರು.
ಈ ನೀರಾವರಿ ಯೋಜನೆ ಮಾಡುವ ಸಂಧರ್ಭದಲ್ಲಿ ಕೆಲವು ರೈತರ ಜಮೀನ ಹೋಗಿದ್ದು ದುರದೃಷ್ಟವಶಾತ ಅವರಿಗೆ ಜಮೀನಿಗಳಿಗೆ ನೀರು ಹೋಗುವದಿಲ್ಲ ಎಂದರು. ಆದರೆ ಕೆಲವೇ ದಿನಗಳಲ್ಲಿ ಆ ಜಮೀನುಗಳಿಗೂ ನೀರಾವರಿ ವ್ಯವಸ್ಥೆಯನ್ನು ಮಾಡಿ ಜಮಖಂಡಿ ತಾಲೂಕುವನ್ನು ಸಂಪೂರ್ಣ ನೀರಾವರಿ ಕ್ಷೇತ್ರವನ್ನು ಮಾಡುವದಾಗಿ ಭರವಸೆ ನೀಡಿದರು.
ಸಾವಳಗಿ-ತುಂಗಳ ಏತ ನೀರಾವರಿಯಿಂದ ಬರುವ ನೀರನ್ನು ಅಥಣಿ ತಾಲೂಕಿನ ರೈತರು ಹೆಚ್ಚಾಗಿ ಬಳಸುವದರಿಂದ ನಮ್ಮ ಭಾಗದ ಹಳ್ಳಿಗಳಿಗೆ ಸರಿಯಾಗಿ ಸಾವಳಗಿ, ಕುರಗೋಡ, ಗದ್ಯಾಳ ಹಾಗೂ ಇನ್ನಿತರೇ ಗ್ರಾಮಗಳಿಗೆ ನೀರು ಬರುತ್ತಿಲ್ಲಾ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವದಲ್ಲದೆ ತುಬಚಿ ಮುಖಾಂತರ ಸಾವಳಗಿ ಗ್ರಾಮಕ್ಕೆ ನೇರವಾಗಿ ಹೊಸ ಲೈನ ತರುವ ಬಗ್ಗೆ ಯೋಜನಾ ವರದಿ ಸಿದ್ದಪಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದ್ದು ಅದರ ಬಗ್ಗೆ ಶೀಘ್ರದಲ್ಲಿ ಸಭೆ ಕರೆಯಲು ತಿಳಿಸಿದ್ದೇನೆ ಎಂದರು.
ಈಗಾಗಲೇ ರೈತರಿಗೆ ನೀರು ಕೊಟ್ಟಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಲು ಗೋಠೆ, ಶೂರ್ಪಾಲಿ ಹಾಗೂ ಆಲಗೂರ ಭಾಗದಲ್ಲಿ ೧೧೦ ಕೆ,ವಿ ಹೊಸ ವಿದ್ಯುತ ಸ್ಟೇಶನ್ ಹಾಗೂ ಸಾವಳಗಿಯಲ್ಲಿನ ೧೧೦ ಕೆ.ವಿ ವಿದ್ಯುತ ಸ್ಟೇಶನನನ್ನು ೨೨೦ ಕೆ,ವಿ ವಿದ್ಯುತ ಸ್ಟೇಶನನ್ನಾಗಿ ಪರಿವರ್ತಿಸಲಾಗುವದು ಎಂದರು.

ಈ ಗ್ರಾಮಸ್ಥರ ಬೇಡಿಕೆಯಂತೆ ಈಗಾಗಲೇ ಗ್ರಾಮದಲ್ಲಿ ರಸ್ತೆಗಳನ್ನು ಸುಧಾರಿಸಿದ್ದು, ಇನ್ನೂ ಹೊನವಾಡ ರಸ್ತೆ ಹಾಗೂ ಕುಮಟಗಿ ರಸ್ತೆಗಳನ್ನು ಸದ್ಯದಲ್ಲಿಯೇ ಮಾಡಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಜಮಖಂಡಿ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ವರ್ಧಮಾನ ನ್ಯಾಮಗೌಡ ಮಾತನಾಡಿ ಭಿನ್ನಮತದ ನಡುವೆಯೂ ರೈತರ ಶಾಸಕ ಆನಂದ ನ್ಯಾಮಗೌಡ ಅವರ ಒಂದು ಧೃಡ ನಿರ್ಧಾರ ಹಾಗೂ ಕಠಿಣ ಪ್ರಯತ್ನದ ಫಲವಾಗಿ ಅಡಿಗಲ್ಲು ಕಾರ್ಯಕ್ರಮ ಮಾಡಿದ ಎರಡೇ ವರ್ಷದಲ್ಲಿ ಇಂದು ಈ ಯೋಜನೆ ಪೂರ್ಣಗೊಂಡಿದ್ದು ಇದಕ್ಕೆ ಈ ಭಾಗದ ಜನರ ಪರವಾಗಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಜಮಖಂಡಿ ನಗರ ಸಭೆ ಅಧ್ಯಕ್ಷ ಸಿದ್ದು ಮೀಶಿ, ಅರ್ಜುನ ದಳವಾಯಿ, ಈಶ್ವರ ವಾಳೇನ್ನವರ, ಗೋಠೆ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರವ್ವ ಸಾಳುಂಕೆ, ಸುಭಾಷ ಪಾಟೋಳಿ, ಆಧಿನಾಥ ಸಕಳೆ, ಕಲ್ಲಪ್ಪ ತೇಲಿ, ಭೀಮಶಿ ಕದಂ ಅಬ್ದುಲ್ ಪಡಗಮ್, ಲಕ್ಷ್ಮಣ ಮೋಹಿತೆ ಹಾಗೂ ಅನೇಕರು ಇದ್ದರು. ಈ ಸಂಧರ್ಭದಲ್ಲಿ ಕಾಮಗಾರಿಯನ್ನು ತ್ವರೀತವಾಗಿ ಮಾಡಿದ ಎಸ್.ಎನ್,ಸಿ ಕಂಪನಿಯ ಇಂಜೀನಿಯರಗಳಿಗೆ ಹಾಗೂ ಪತ್ರಕರ್ತ ಮಿತ್ರರಿಗೆ ಗ್ರಾಮಸ್ಥರು ಸನ್ಮಾನಿಸಿದರು.

ವರದಿ: ಕಿರಣ ಸೂರಗೂಂಡ ಜಮಖಂಡಿ

error: