April 20, 2024

Bhavana Tv

Its Your Channel

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ

ಬಾಗಲಕೋಟ ಜಿಲ್ಲೆಯ ಕಮತಗಿ ಪಟ್ಟಣದಲ್ಲಿ ಹುನಗುಂದ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಹುನಗುಂದ್ ಮತ್ತು ಕಾರ್ಮಿಕ ಇಲಾಖೆ ಹಾಗೂ ವಿವಿಧ ಕಟ್ಟಡ ಕಾರ್ಮಿಕರ ಸಂಘಗಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಅಪರ ದಿವಾನಿ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ ಚೇತನಾ ಆರೀಕಟ್ಟಿಅವರು ಸಸಿಗೆ ನೀರು ಹನಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳನ್ನು ಯಾವುದೇ ಕಾರಣಕ್ಕೂ ಚಿಕ್ಕ ವಯಸ್ಸಿನಲ್ಲಿ ದುಡಿಯಲಿಕ್ಕೆ ಹಾಗೂ ಕಟ್ಟಡ ಮೇಸ್ತ್ರಿ ಗಳಲ್ಲಿ ಕೆಲಸಕ್ಕೆ ಕಳುಹಿಸಬಾರದು ಅವರನ್ನು ಶಾಲೆಗೆ ಕಳುಹಿಸಿ ಕೊಡಬೇಕು ಚಿಕ್ಕ ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡುವುದು ತಂದೆ-ತಾಯಿಯರ ಕರ್ತವ್ಯ ಎಂದು ಸಂಕ್ಷಿಪ್ತವಾಗಿ ಹೇಳಿದರು
ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ವಕೀಲರ ಸಂಘ ಅಧ್ಯಕ್ಷರ ಎಂ ಬಿ ದೇಶಪಾಂಡೆ ಅವರು ಮಾತನಾಡಿ ಈಗಿನ ಜನಸಾಮಾನ್ಯರಲ್ಲಿ ಕಾನೂನು ಅರಿವು ಬಹಳ ಮುಖ್ಯ ಹಾಗೂ ಮಕ್ಕಳನ್ನು ಮತ್ತು ತಂದೆ-ತಾಯಿಯರನ್ನು ಈಗಿನ ಜನಸಾಮಾನ್ಯರು ಸರಿಯಾಗಿ ನೋಡಿಕೊಳ್ಳುವುದಿಲ್ಲ ಇದರಿಂದ ತಂದೆ-ತಾಯಿಗಳು ರೋಸಿ ಹೋಗಿರುತ್ತಾರೆ ರೋಸಿಹೋದ ತಂದೆತಾಯಿಗಳಿಗೆ ಕಾನೂನು ಅರಿವು ಇರುವುದಿಲ್ಲ ಇದರಿಂದ ತಂದೆ-ತಾಯಿಗಳು ಕಾನೂನು ತಜ್ಞರನ್ನು ಸಂಪರ್ಕ ಪಡೆದಲ್ಲಿ ಅವರಿಗೂ ನ್ಯಾಯ ಒದಗಿಸಿಕೊಡಬಹುದು ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಶಂಕರ ಎನ್ ಮಾಡಬಾಳವಿಶ್ವನಾಥ್ ಕಡ್ಲಿಮಟ್ಟಿ ಮತ್ತು ಭೀಮಸಿ ಹೂ ಬಿಳಗಿ (ವಡ್ಡರ) ಗಣೇಶ್ ವಂದಗನೂರ, ಸುರೇಶ್ ಕಡ್ಲಿಮಟ್ಟಿಹಾಗೂ ,ರಾಜಶೇಖರ್ ಕುರಡಿಕೇರಿ, ಕಾರ್ಮಿಕರ ನಿರೀಕ್ಷಕರು ಮತ್ತು ಉಪನ್ಯಾಸಕರು ಸುಧಾಕರ್ ಬಡಿಗೇರ್ ಉಪಸ್ಥಿತರಿದ್ದರು ಯೋಜನಾ ನಿರ್ದೇಶಕರು ಜಿಲ್ಲಾ ಕಾರ್ಮಿಕ ಯೋಜನೆ ಬಾಗಲಕೋಟ್ ಅವರು ನಿರೂಪಿಸಿ ವಂದಿಸಿದರು ಈ ಕಾರ್ಯಕ್ರಮದಲ್ಲಿ ಸಮಸ್ತ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು
ವರದಿ ನಿಂಗಪ್ಪ ಕಡ್ಲಿಮಟ್ಟಿ ಕಮತಗಿ

error: