April 19, 2024

Bhavana Tv

Its Your Channel

ಕರ್ನಾಟಕ ಪ್ರದೇಶ ಜಾತ್ಯಾತೀತ ಜನತಾದಳ ಹುನಗುಂದ ತಾಲೂಕ ಘಟಕದಿಂದ ಪ್ರತಿಭಟನೆ

ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಗ್ಗೆ ಮದುಗಿರಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಮತ್ತು ರಾಜಸ್ಥಾನದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕನ್ಹಯ್ಯಾಲಾಲ ಹತ್ಯೆಯನ್ನು ಖಂಡಿಸಿ ಸೋಮವಾರ ಕರ್ನಾಟಕ ಪ್ರದೇಶ ಜಾತ್ಯಾತೀತ ಜನತಾದಳ ತಾಲೂಕ ಘಟಕದಿಂದ ತಹಶೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ ಬಸಲಿಂಗಪ್ಪ ನೈಕೋಡಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಕರ್ನಾಟಕ ಪ್ರದೇಶ ಜಾತ್ಯಾತೀತ ಜನತಾದಳದ ಬೆಳಗಾವಿ ವಿಭಾಗೀಯ ಯುವ ಜನತಾದಳದ ಕಾರ್ಯಾಧ್ಯಕ್ಷ ಶಿವಪ್ರಸಾದ ಗದ್ದೆ ಮಾತನಾಡಿ ಈ ದೇಶ ಮತ್ತು ರಾಜ್ಯ ಕಂಡ ಅಪರೂಪದ ಹಿರಿಯ ಮುತ್ಸದ್ದಿ ನಾಯಕರು ಹಾಗೂ ಜಾತ್ಯಾತೀತ ಜನತಾದಳ ಪಕ್ಷದ ರಾಷ್ಟಿçÃಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರನ್ನು ಸದ್ಯ ಇಬ್ಬರು ಕರೆದುಕೊಂಡು ಹೋಗುತ್ತಿದ್ದಾರೆ.ಅವರು ನಾಲ್ವರ ಮೇಲೆ ಹೋಗುವ ದಿನ ಹತ್ತರವಿದೆಂದು ನಾಲಿಗೆಯನ್ನು ಹರಿಬಿಟ್ಟ ತುಮಕೂರಿನ ಕಾಂಗ್ರೇಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಕೀಳು ಮಟ್ಟದ ಹೇಳಿಕೆ ಖಂಡನೀಯ.ಈ ಕೂಡಲೇ ಸಾರ್ವಜನಿಕವಾಗಿ ದೇವೇಗೌಡರಲ್ಲಿ ಮತ್ತು ರಾಜ್ಯದ ಜನತೆಯಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಮತ್ತು ಪ್ರವಾದಿ ಮಹಮ್ಮದರ ಕುರಿತು ಬಿಜೆಪಿ ಉಚ್ಛಾಟಿತ ನಾಯಕಿ ನೂಪರ್ ಶರ್ಮ ನೀಡಿರುವ ಪ್ರಚೋಧನ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ರಾಜಸ್ಥಾನ ಉದಯಪುರದ ಬಡ ಟೈಲರ್ ಕನ್ನಯ್ಯ ಲಾಲ್ ರನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರಕಳಿಸದಂತೆ ಆಡಳಿತರೂಢ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಶರಣಬಸಪ್ಪ ನೆಟೆಕಟ್ಟಿ, ಪ್ರಧಾನ ಕಾರ್ಯದರ್ಶಿ ಪಿಎಸ್.ಕಠಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ನದಾಫ್,ಕಾನೂನು ಘಟಕದ ಜಿಲ್ಲಾಧ್ಯಕ್ಷ ಎನ್.ಐ.ತಹಶೀಲ್ದಾರ,ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದನಾ ಪೂಜಾರಿ,ಉಮೇಶ ಶಿರೂರ,ಮುಖಂಡರಾದ ದುರಗಪ್ಪ ಮಾದರ,ಶಿವಯ್ಯ ಪೂಜಾರಿ,ನೂರಹ್ಮದ್ ಬ್ಯಾಡಗಿ,ಎಂ.ಎ.ಮಿರ್ಜಿ,ಮಹಾಬಳೇಶ ಬಡಿಗೇರ,ಆನಂದ ತತ್ರಾಣಿ,ಚಿದಾನಂದ ಚಲವಾದಿ,ಎಲ್.ಎಂ.ಬೆನಕಟ್ಟಿ,ಬಸವರಾಜ ಹುಸೂರ,ಎಸ್.ಎಸ್.ಕೂಡ್ಲೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವರದಿ ನಿಂಗಪ್ಪ ಕಡ್ಲಿಮಟ್ಟಿ

error: