February 1, 2023

Bhavana Tv

Its Your Channel

ಮತದಾರರ ದಿನಾಚರಣೆ ಅಂಗವಾಗಿ ಕನ್ನಡ ಇಂಗ್ಲಿಷ್ ಪ್ರಬಂಧ ಮತ್ತು ಭಿತ್ತಿ ಪತ್ರ ಸ್ಪರ್ಧೆ

ಬಾಗಲಕೋಟೆ:– ಮತದಾರರ ದಿನಾಚರಣೆ ಅಂಗವಾಗಿ ಬಾಗಲಕೋಟ ಜಿಲ್ಲೆ ಹುನಗುಂದ್ ತಾಲೂಕ ಮಟ್ಟದ ಪದವಿ ಪೂರ್ವ ಕಾಲೇಜುಗಳಿಗೆ ಕನ್ನಡ ಇಂಗ್ಲಿಷ್ ಮತ್ತು ಭಿತ್ತಿ ಪತ್ರ ಸ್ಪರ್ಧೆಗಳನ್ನು ಶ್ರೀ ಹುಚ್ಚೇಶ್ವರ ಪದವಿಪೂರ್ವ ಕಾಲೇಜ್ ಕಮತಗಿಯಲ್ಲಿ ಆಯೋಜಿಸಲಾಗಿತ್ತು

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವಿ ಬಾಗೇವಾಡಿ ಅವರು ವಹಿಸಿಕೊಂಡು ಸರಕಾರ ಮತದಾರರ ಪಟ್ಟಿಯ ಪರಿಷ್ಕರಣೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಬದಲಾವಣೆ, ರದ್ದು ಪಡಿಸುವುದು ಇತ್ಯಾದಿಗಳನ್ನು ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಎಲ್ಲ ವಿದ್ಯಾರ್ಥಿಗಳು ನಿಮ್ಮ ನಿಮ್ಮ ಊರಿನ ಎಲ್ಲಾ ಪ್ರಜೆಗಳಿಗೆ ಅದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಬೇಕೆಂದು ಹೇಳಿದರು

ಮುಖ್ಯ ಅತಿಥಿಗಳಾಗಿ ಉಪನ್ಯಾಸಕರು ಜಗದೀಶ್ ಹುನಗುಂದ್ ಅವರ ಮಾತನಾಡಿ ಭಾರತದ ಪ್ರಜಾಪ್ರಭುತ್ವ ದೊಡ್ಡದಾಗಿದೆ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು

ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಬಾಗಲಕೋಟ ಜಿಲ್ಲಾ ಮಟ್ಟಕ್ಕೆ ಆಯ್ಕೆ:- ಪ್ರಥಮ ಸ್ಥಾನ ನೇತ್ರಾ ನಿಡಶೇಸಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಸೂಲಿಬಾವಿ, ದ್ವಿತೀಯ ಸ್ಥಾನ ಸುಕನ್ಯ ಹುಣಶ್ಯಾಳ ಸರ್ಕಾರಿ ಪದವಿ ಪೂರ್ವ ಕಾಲೇಜ್ ದನ್ನೂರು, ತೃತೀಯ ಸ್ಥಾನ ನಿಕಿತಾ ಇಟಗಿ ಶ್ರೀ ಹುಚ್ಚೇಶ್ವರ ಪದವಿ ಪೂರ್ವ ಕಾಲೇಜ್ ಕಮತಗಿ, ಇಂಗ್ಲಿಷ್ ಪ್ರಬಂಧದಲ್ಲಿ ಪ್ರಥಮ ಸ್ಥಾನ ಕೈಸರಜಹಾ ಮಿಜಿ ಶ್ರೀ ಹುಚ್ಚೇಶ್ವರ ಪದವಿ ಪೂರ್ವ ಕಾಲೇಜ್ ಕಮತಗಿ. ದ್ವಿತೀಯ ಸ್ಥಾನ ದಾನೇಶ್ವರಿ ಆರ್ ಶ್ರೀ ಹುಚ್ಚೇಶ್ವರ ಪದವಿ ಪೂರ್ವ ಕಾಲೇಜ್ ಕಮತಗಿ, ಭಿತ್ತಿ ಪತ್ರ ಪ್ರಥಮ ಸ್ಥಾನ ರೇಣುಕಾ ಜಂಗಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಸೂಲಿಬಾವಿ, ದ್ವಿತೀಯ ಸ್ಥಾನ ಪೂಜಾ ಹಸಬಿ ಶ್ರೀ ಹುಚ್ಚೇಶ್ವರ ಪದವಿ ಪೂರ್ವ ಕಾಲೇಜ್ ಕಾಮತಗಿ, ತೃತೀಯ ಸ್ಥಾನ, ಕಾವ್ಯ ತೊಂಡಿಹಾಳ ಸರ್ಕಾರಿ ಪದವಿಪೂರ್ವ ಕಾಲೇಜ್ ಹುನಗುಂದ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶ್ರೀ ಹುಚ್ಚೇಶ್ವರ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ಜೆ ಎಚ್ ಧೂಪದ್ ,ಶಾಂತಾ ವಂದಾಲ್, ,ಎಮ್ ಎಚ್ ಸೇಬನ್ನವರ್, ಎನ್ ಪಿ ಹುಲಮನಿ ಗೌಡರ್ ಉಪಸ್ಥಿತರಿದ್ದರು. ಹುನಗುಂದ ತಾಲೂಕ ಮತದಾರರ ಸಂಘದ ನೋಡಲ್ ಅಧಿಕಾರಿಗಳಾದ ಬಿ ವಿ ಬೀರ ಕಬ್ಬಿ ಅವರು ಸ್ವಾಗತಿಸಿದರು ಶ್ರೀ ಆರ್ ಎಂ ಗೌಡರ್ ಕಾರ್ಯಕ್ರಮ ನಿರೂಪಿಸಿದರು ಎಂ ಎಸ್ ಶೆಟ್ಟರ್ ವಂದನಾರ್ಪಣೆ ಮಾಡಿದರು.

ವರದಿ: ನಿಂಗಪ್ಪ ಬಾಗಲಕೋಟೆ

About Post Author

error: