March 26, 2024

Bhavana Tv

Its Your Channel

ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಚಾಲನೆ

ಬಾಗಲಕೋಟೆ: ಬಾಗಲಕೋಟೆ ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಕಮತಗಿ ಪಟ್ಟಣದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4ರ ಅಡಿಯಲ್ಲಿನ ವಿವಿಧ ವಾರ್ಡ್ ಗಳಲ್ಲಿ ಸಿಸಿ ರಸ್ತೆ, ಡಾಂಬರೀಕರಣ, ಚರಂಡಿ, ಕುಡಿಯುವ ನೀರಿನ ಪೂರೈಕೆ, ಅಂದಾಜು 1.85 ಕೋಟಿ ರೂಪಾಯಿ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೀರಣ್ಣ ಚರಂತಿಮಠ, 4200 ಮನೆಗಳಿಗೆ 42 ಕಿ.ಮೀ ಪೈಪ್‌ಲೈನ್ ಮೂಲಕ ಮನೆಮನೆಗಳಿಗೆ ಶುದ್ಧ ಕುಡಿಯುವ ನೀರಿನ ನಲ್ಲಿ ಕೂಡಿಸಲಾಗುತ್ತದೆ. ಕಮತಗಿ ಪಟ್ಟಣಕ್ಕೆ 30.29 ಕೋಟಿ ರೂ. ಸರಕಾರದಿಂದ ಅನುಮತಿ ಸಿಕ್ಕಿದೆ. ಟೆಂಡರ್ ಆದ ಬಳಿಕ ಕಾಮಗಾರಿಗಳು ತ್ವರಿತಗತಿಯಲ್ಲಿ ಮಾಡಲಾಗುವುದು. 5 ಲಕ್ಷ ಲೀಟರನ 3 ಟ್ಯಾಂಕ್ ನೇಕಾರ ಕಾಲೋನಿಗೆ, ಎರಡು ಫಿಲ್ಟರ್ ಹೌಸಿಗೆ ನೀಡಲಾಗುತ್ತದೆ. ಒಟ್ಟು 4200 ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆಂದರು.

ಈ ಸಂದರ್ಭದಲ್ಲಿ ಪ ಪಂ ಸದಸ್ಯರಾದ ಸಂಗಣ್ಣ ಗಾಣಿಗೇರ, ಪ್ರಕಾಶ ಶಿನ್ನೂರ, ಹುಚ್ಚೇಶ ಮದ್ಲಿ, ಬಸವರಾಜ ಕುಂಬಳಾವತಿ, ಬಿಜೆಪಿಯ ಮುಖಂಡರಾದ ಮಂಜು ಸಿಂಗದ, ರಮೇಶ ಹಿರಾಳ, ಹುಚ್ಚೇಶ ಹಿರಾಳ, ಗಂಗಾಧರ ಕ್ಯಾದಿಗೆರಿ ಅಂಕುಶ್ ನಾಟಿಕರ್ ಮಾಂತೇಶ್ ಬಿಸನಾಳ ಹರ್ಷ ದೇಸಾಯಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುರೇಶ ಪಾಟೀಲ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಇತರರು ಉಪಸ್ಥಿತರಿದ್ದರು

ವರದಿ :- ನಿಂಗಪ್ಪ ಕಡ್ಲಿಮಟ್ಟಿ

error: