April 25, 2024

Bhavana Tv

Its Your Channel

ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣದಲ್ಲಿ ಹುಚ್ಚೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮತದಾರರ ದಿನಾಚರಣೆಯ ಕಾರ್ಯಕ್ರಮ ಆಚರಿಸಲಾಯಿತು

ಬಿ.ವಿ ಬೀರಕಬ್ಬಿ ಉಪನ್ಯಾಸಕರು ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿ ಮಾತನಾಡಿದರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯು ಅತಿ ಮಹತ್ವದ ಸ್ಥಾನವನ್ನು ಪಡೆದಿದೆ ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಎರಡು ವಿಷಯಗಳಿಗೆ ಗಮನಹರಿಸಬೇಕು ಒಂದು ಕಡ್ಡಾಯ ಮತದಾನ ಇನ್ನೊಂದು ಪ್ರಮಾಣಿಕರಾಗಿ ಯಾವುದೇ ಆಶೆ ಆಕಾಂಕ್ಷೆಗಳಿಗೆ ಒಳಗಾಗದೆ ಮತದಾನ ಮಾಡುವದು ಅವಶ್ಯ ಎಂದು ಭಾವಿ ಮತದಾರರಾಗಲಿರುವ ವಿದ್ಯಾರ್ಥಿಗಳಿಗೆ ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಎಸ್ ವಿ ಬಾಗೇವಾಡಿ ವಹಿಸಿ ಮಾತನಾಡಿ ಪ್ರತಿಯೊಬ್ಬರು ನೈತಿಕ ಪ್ರಜ್ಞೆಯೊಂದಿಗೆ ಕಡ್ಡಾಯವಾಗಿ ಮತದಾನ ಮಾಡಬೇಕು, ದೇಶದ ಅಭಿವೃದ್ಧಿಗೆ ನಾವೆಲ್ಲರೂ ಪಾಲುದಾರರಾಗುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ, ಮುಂಬರುವ ಚುನಾವಣೆಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಜೊತೆಗೆ ಬೇರೆಯವರಿಗೆ ಮತ ಹಾಕಲು ಪ್ರೇರೇಪಣೆ ನಿಡುವದರ ಮೂಲಕ ನಿಮ್ಮ ನಿಮ್ಮ ಗ್ರಾಮದಲ್ಲಿ ಶೇಕಡಾ 100ರಷ್ಟು ಮತದಾನ ಆಗಬೇಕು ಎಂದು ಹೇಳಿದರು
,ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಆರ್ ಎಂ ಗೌಡರ, ಎನ್ ಪಿ ಹುಲಮನಿಗೌಢರ, ಎಂ ಎಸ್ ಶೆಟ್ಟರ್, ಸಿ ಎಸ್ ಬಾಪ್ರೀ ಉಪಸ್ಥಿತರಿದ್ದರು.

error: