
ಬಾಗಲಕೋಟ್ ಜಿಲ್ಲೆ ಕಮತಗಿ ಪಟ್ಟಣದಲ್ಲಿ ಶುಕ್ರವಾರ ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಕಮತಗಿ ಹಾಗೂ ಶ್ರೀನಿವಾಸ ಶಿಕ್ಷಣ ಸಂವರ್ದನ ಸಮಿತಿ ಕಮತಗಿ ಇವರ ವತಿಯಿಂದ ಡಾ || ಪುನೀತ್ ರಾಜಕುಮಾರ್ ಜನ್ಮದಿನವನ್ನು ಆಚರಿಸಲಾಯಿತು
ವಿಶ್ವಚೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆವರಣದಲ್ಲಿ ಕರ್ನಾಟಕ ರತ್ನ ಅಭಿಮಾನಿಗಳ ದೇವರು ಡಾ || ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ, ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಶಾಲೆಯ ಮಕ್ಕಳೊಂದಿಗೆ ಕೇಕ್ ಕಟ್ ಮಾಡಿ ಮತ್ತು ಮಕ್ಕಳಿಗೆ ಸಿಹಿ ಹಂಚುವ ಮೂಲಕ ಅಪ್ಪು ಅವರ ಜನ್ಮದಿನವನ್ನು ಆಚರಿಸಲಾಯಿತು, ಇದೇ ಸಂದರ್ಭದಲ್ಲಿ ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಶಂಕರ್ ವನಕಿ ಪುನೀತ್ ಜೀವನ ಮತ್ತು ಸಾಧನೆ ಬಗ್ಗೆ ಹೇಳಿದರು, ವಿಶ್ವಚೇತನ ಪ್ರಾಥಮಿಕ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಮಹಾಂತೇಶ ಅಂಗಡಿಯವರು ಪನೀತ ಅವರು ಮಾಡಿದ ಸಾಧನೆಯನ್ನು ಕೊಂಡಾಡಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ರಾಮ ಕುನಿಬೆಂಚಿ ಅಪ್ಪು ಅವರ ಆದರ್ಶಗಳನ್ನ ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ನಾರಾಯಣ್ ದೇಶಪಾಂಡೆ ಅವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷರಾದ ಪಿ ಬಿ ಬ್ಯಾಳಿ, ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷರಾದ ಮಹಾಂತೇಶ ಅಂಗಡಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ದಾನೇಶ್ವರಿ ಅಂಗಡಿ ರವರು ವಹಿಸಿದ್ದರು ಹೆಜ್ಜೆ ಫೌಂಡೇಶನ್ ಅಧ್ಯಕ್ಷರಾದ ವೀರಭದ್ರಪ್ಪ ಮುರಾಳ ಕಾರ್ಯದರ್ಶಿ ಶಂಕರ ವನಕಿ ಸಂಚಾಲಕ ನಾಗಪ್ಪ ಅಚನೂರ ಉಪಸ್ಥಿತರಿದ್ದರು ಶಾಲೆಯ ಶಿಕ್ಷಕಿಯರಾದ ವಿದ್ಯಾ ಕ್ಯಾದಿಗ್ಗೇರಿ ಮತ್ತು ಜಯಶ್ರೀ ಹುನಗುಂದ ನಿರೂಪಿಸಿದರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್ ರಾಥೋಡ ಸ್ವಾಗತಿಸಿದರು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರಾಮ ಕುಣಿಬೆಂಚಿ ವಂದಿಸಿದರು
ವರದಿ: ನಿಂಗಪ್ಪ ಕೆ ಬಾಗಲಕೋಟೆ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ