September 16, 2024

Bhavana Tv

Its Your Channel

ಮತದಾನ ಜಾಗೃತಿ ಅಭಿಯಾನ

ಕಮತಗಿ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಸುರೇಶ ಪಾಟೀಲ ನೇತೃತ್ವದಲ್ಲಿ ಕಮತಗಿ ಪಟ್ಟಣದಲ್ಲಿ ಮತದಾನ ಜಾಗೃತಿ ಅಭಿಯಾನ ಆಯೋಜನೆ ಮಾಡಲಾಗಿತ್ತು. ಪಟ್ಟಣದ ಹಳೆ ಗರಡಿ ಮನೆ ಹತ್ತಿರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸುರೇಶ ಪಾಟೀಲ ಅವರು 18 ವರ್ಷ ತುಂಬಿದ ಎಲ್ಲರೂ ಮತದಾನ ಮಾಡಬೇಕು. ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಪ್ರತಿ ಬಾರಿ ಕೇವಲ 75% ಮತದಾನ ಆಗುತ್ತಿದೆ. ಈ ಬಾರಿ ಯಾರೊಬ್ಬರೂ ಮತದಾನದಿಂದ ದೂರ ಉಳಿಯದೆ ಶೇಕಡಾ 100% ರಷ್ಟು ಮತದಾನ ಮಾಡಬೇಕು ಎಂದರು. ಈ ವೇಳೆ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಪೌರಕಾರ್ಮಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ವರದಿ : ನಿಂಗಪ್ಪ ಕೆ

error: