April 22, 2021

Bhavana Tv

Its Your Channel

ಯರಗಟ್ಟಿ ಗ್ರಾಮಕ್ಕೆ ಬಸ್ ಸಂಚಾರ

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಬಸ್ ಸಂಚಾರವನ್ನು ಆರಂಭಿಸಲಾಯಿತು. ಆಧುನಿಕ ಕಾಲದಿಂದಲೂ ಕೂಡ ಗ್ರಾಮಕ್ಕೆ ಬಸ್
ಸಂಚಾರವಿಲ್ಲದೆ ಜನರು ಪರದಾಡುವಂತಾಗಿತ್ತು ಆದರೆ ಈಗ ಬಸ್ ಸಂಚಾರ ಆರಂಭವಾಗಿ ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಈ ಬಸ್ ಸಂಚಾರ ಆರಂಭಿಸುವಲ್ಲಿ ಊರಿನ ಹಿರಿಯರಾದ ಸಿದ್ದಪ್ಪ ಮೀಶೆನ್ನವರ, ಶ್ರೀಶೈಲ ಕೊಕಟನೂರ, ಪರಯ್ಯಾ ಮಠಪತಿ, ಬುಜಬಲಿ ಬಾಬನ್ನವರ, ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದಪ್ಪ ಸೋರಗಾಂವಿ, ಮಲ್ಲು ಅವಕ್ಕನವರ, ಕಿರಣ ಲೋಕಾಪುರ, ಮಹಾಂತೇಶ ಕಿಚಡಿ, ಅಶೋಕ ಅವಕ್ಕನವರ, ಮತ್ತು ಯುವಕರಾದ ಭೀಮಶೀ ಸೋರಗಾಂವಿ, ಶಂಕರ್ ಹಳ್ಳೂರ, ಪರಶುರಾಮ ಸಾಲಮನಿ, ಪ್ರಭು ಕಿಚಡಿ, ಪಾಯಪ್ಪ ಬಾಬನ್ನವರ, ಬಸು ಮಠಪತಿ, ಬಸಪ್ಪ ಕಂಕಣವಾಡಿ ಮತ್ತು ನಮ್ಮೂರಿನ ಶಾಲಾ ಶಿಕ್ಷಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಇನ್ನೂ ಅನೇಕ ಜನ ಭಾಗಿಯಾಗಿದ್ದರು.

ವರದಿ: ರಮೇಶ ಇಟಗೋಣಿ

error: