April 22, 2021

Bhavana Tv

Its Your Channel

ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟನೆ .

ಬಾಗಲಕೋಟೆ: ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ (ರಿ)ಬಾಗಲಕೋಟ ಬೀದಿ ಬದಿ ವ್ಯಾಪಾರಿಗಳ ಸಮಿತಿ ಇಲಕಲ್ಲ ಶಾಖೆ ಇವರ ವತಿಯಿಂದ ಇಂದು ಇಲಕಲ್ಲ ನಗರದ ಬಸ್ ನಿಲ್ದಾಣದಲ್ಲಿ ಕುಡಿಯುವ ಅರವಟಿಗೆಯನ್ನು ಉದ್ಘಾಟನೆ ಮಾಡಲಾಯಿತು. ಜಗತ್ತಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ,ಅಂಗಾಂಗ ದಾನ. ಎಷ್ಟು ಮುಖ್ಯವಾಗಿವಿಯೋ ಅಷ್ಟೇ ಧಾನಗಳಲ್ಲಿ ಶ್ರೇಷ್ಠಧಾನ ಅಂದರೆ ನೀರಿನ ದಾನ ಅದಕ್ಕೆ ಜೀವಜಲ ಅನ್ನೋದೋ ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ನೀರು ಅತ್ಯಾಮೂಲ್ಯವಾದದ್ದು. ಇಂತಹ ಮಹಾನ ಕಾರ್ಯವನ್ನು ಇಲಕಲ್ಲ ನಗರದಲ್ಲಿ ಕೈ ಗೊಂಡ ಬೀದಿ ಬದಿ ವ್ಯಾಪಾರಿ ಸಮೀತಿ ಇಲಕಲ್ಲ ಇವರಿಗೆ ನಮ್ಮ ಇಲಕಲ್ಲ
ಜನತೆಯ ಪರವಾಗಿ ಅಭಿನಂದನೆಗಳು. ಬೀದಿ ಬದಿ ವ್ಯಾಪಾರಿ ಸಮೀತಿಯವರು ಮಾಡಿರುವು ಕಾರ್ಯವನ್ನು ನೋಡಿ ಇಲಕಲ್ಲ ನಗರದಲ್ಲಿ ಇರುವ ಹಲವಾರು ಸಂಘ ಸಂಸ್ಥೆಗಳು ಹೆಚ್ಚೆತ್ತುಕೊಂಡು ಹಲವಾರು ಕಡೇ ನೀರಿನ ಅರೇವಟ್ಟಿಗೆಗಳನ್ನು ನಿರ್ಮಿಸಲಿ ಎ೦ಬುದೇ ನಮ್ಮ ಆಶಯ.

ಈ ಕಾರ್ಯಕ್ರಮದಲ್ಲಿ ಭಾಗಿಯಾದ ಬೀದಿ ಬದಿ ವ್ಯಾಪಾರಿ ಸಮೀತಿಯ ಬಾಗಲಕೋಟ ಜಿಲ್ಲಾಧ್ಯಕ್ಷರಾದ ರಿಯಾಜ್ ಮಕಾನದಾರ ಹಾಗೂ ಇಲಕಲ್ಲ ತಾಲೂಕ ಅಧ್ಯಕ್ಷರಾದ ಪವಾಡೆಪ್ಪ ಚಲವಾದಿ ಮತ್ತು ಬಾಗಲಕೋಟ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ದೊಡ್ಡಪ್ಪ ಹಡಪದ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ನಾಗರಾಜ್ ದಲವಾಯಿ ಹಾಗೂ ಜಿಲ್ಲಾ ಗೌರವಾಧ್ಯಕ್ಷರಾದ ಯಲ್ಲಪ್ಪ ಸಂಕೇನವರ ಇಲಕಲ್ಲ ನಗರದ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಮಹಮ್ಮದ್ ಗಡೆದ .ಹಾಗೂ ಇನ್ನು ಹಲವಾರು ಅತಿಥಿಗಳು ಭಾಗಿಯಾಗಿದ್ದರು.

error: