April 26, 2024

Bhavana Tv

Its Your Channel

ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ, ನವನಗರ, ಬಾಗಲಕೋಟೆಯಲ್ಲಿ ಐಟಿಐ ತಂತ್ರಜ್ಞರಿಗೆ ಸೌರ ಶಕ್ತಿ ಉಪಕರಣಗಳ ತಂತ್ರಜ್ಞಾನ, ರಿಪೇರಿ ಬಗ್ಗೆ ೩ ದಿನಗಳ ತರಬೇತಿ

ಬಾಗಲಕೋಟೆ : ಮಹಾತ್ಮಾಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮತ್ತು ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ನವನಗರ, ಬಾಗಲಕೋಟೆ ಇವರ ಜಂಟಿ ಆಶ್ರಯದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಸೋಲಾರ್ ಉಪಕರಣಗಳ ನಿರ್ವಹಣೆ ಮತ್ತು ರಿಪೇರಿ ಬಗ್ಗೆ ೩ ದಿನಗಳ ತರಬೇತಿ ಇತ್ತೀಚೆಗೆ ಬಾಗಲಕೋಟೆ ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಯಲ್ಲಿ ಆಯೋಜಿಸಲಾಗಿತ್ತು.

ಐಟಿಐ ಸಂಸ್ಥೆಯ ಪ್ರಾಂಶುಪಾಲ ವಿ.ಎಸ್ ಹಿರೇಮಠ್ ತರಬೇತಿಯನ್ನು ಉದ್ದಾಟಿಸಿ ಮಾತನಾಡಿ ಇತ್ತೀಚಿಗಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಮಳೆ ಸಮ ಪ್ರಮಾಣದಲ್ಲಿ ಬೀಳುತ್ತಿಲ್ಲ ಅದರಿಂದಾಗಿ ಸಾಂಪ್ರದಾಯಿಕ ರೀತಿಯ ಜಲವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಏರಿಳಿತ ಕಂಡುಬAದಿದ್ದು, ಸೋಲಾರ್ ವಿದ್ಯುತ್ತಿನ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. ಪರಿಣಾಮವಾಗಿ ಸೋಲಾರ್ ರೂಫ್ ಟಾಪ್ ಮತ್ತು ಸೋಲಾರ್ ಮನೆ ದೀಪಗಳಿಗೆ ಭಾರೀ ಬೇಡಿಕೆ ಕಂಡು ಬಂದಿದೆ. ಈ ಅವಕಾಶವನ್ನು ಐಟಿಐ ತಂತ್ರಜ್ಞರು ಉಪಯೋಗಿಸಿಕೊಳ್ಳಬೇಕು ಎಂದು ನುಡಿದರು. ಭಾರತೀಯ ವಿಕಾಸ ಟ್ರಸ್ಟಿನ ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ಮಾತನಾಡಿ ಸೋಲಾರ್ ಕ್ಷೇತ್ರದಲ್ಲಿ ಕ್ಷಿಪ್ರ ಅಭಿವೃದ್ಧಿಯಾಗಲು ತಂತ್ರಜ್ಞರ ಅಗತ್ಯವಿದೆ. ಇದನ್ನು ನೀಗಿಸಲು ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಈ ರೀತಿಯ ತರಬೇತಿಯನ್ನು ಮಹಾತ್ಮಾಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಈ ಕಲಿಕೆಯ ಅವಕಾಶವನ್ನು ಸದುಪಯೋಗಿಸುವಂತೆ ಕರೆ ನೀಡಿದರು.

ಸಂಸ್ಥೆಯ ತರಬೇತು ಅಧಿಕಾರಿ ವಿ ಎಸ್ ಲೋಣಿ ಮಾತನಾಡಿ ಬಹಳಷ್ಟು ಸಂಸ್ಥೆಗಳ ಪರಿಶ್ರಮದಿಂದ ನಡೆಯುತ್ತಿರುವ ಈ ಕಾರ್ಯಕ್ರಮದ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಂಡು ಆಸಕ್ತಿಯಿಂದ ಭಾಗವಹಿಸುವಂತೆ ಕರೆ ನೀಡಿದರು.. ಆರಂಭದಲ್ಲಿ ಬಿವಿಟಿಯ ಕಾರ್ಯಕ್ರಮ ಸಂಯೋಜಕ ಸುಮಂತ್ ಆರ್ ಭಟ್ಟ ತರಬೇತಿಯ ಧ್ಯೇಯೋದ್ಧೇಶಗಳ ಬಗ್ಗೆ ಮಾಹಿತಿ ಇತ್ತರು. ಬಾಗಲಕೋಟೆ ಸೆಲ್ಕೋ ಸೋಲಾರ್ ಸಂಸ್ಥೆಯ ಅಧಿಕಾರಿ ಉದಯ ಬಾಪುರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ೮೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮೂರು ದಿನಗಳ ತರಬೇತಿಯಲ್ಲಿ ಭಾಗವಹಿಸಿದ್ದರು.

error: