May 11, 2021

Bhavana Tv

Its Your Channel

ಕರೋನಾ ಎರಡನೇ ಅಲೆ ಹಿನ್ನಲೆ ಕೋವಿಡ್ ಲಸಿಕೆ ಪಡೆಯಲು ಮುಂದಾದ ಇಳಕಲ್ ಜನತೆ.

ಇಳಕಲ್: ಕರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಜನರು ಕೋವಿಡ್ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ. ಅದೇ ರೀತಿ ಇಳಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಇಳಕಲ್ ಜನತೆ ಕೋವಿಡ್ ವ್ಯಾಕ್ಸಿನ್ ಪಡೆಯಲು ಮುಂದಾದರು.

ಮೊದಮೊದಲು ಕೋವಿಡ್ ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿದ್ದ ಜನ ಎರಡನೇ ಅಲೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ತಾವೇ ಸರತಿ ಸಾಲಿನಲ್ಲಿ ನಿಂತು ವ್ಯಾಕ್ಸಿನ್ ಪಡೆದುಕೊಳ್ಳುವ ದೃಶ್ಯ ಕಂಡುಬAದಿತು.

ಇಳಕಲ್ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ವಿನೋದ ಬಾರಿಗಿಡದ ಮತ್ತು ಸತ್ಯಂ ಸತ್ಯಂ ವಾಹಿನಿಯ ವರದಿಗಾರರಾದ ದಾವಲ್. ಶೇಡಂ ರವರು ಕೂಡ ಲಸಿಕೆಯನ್ನು ಹಾಕಿಸಿಕೊಂಡರು .

ಅದೇ ರೀತಿ ಇಳಕಲ್ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಿಬ್ಬಂದಿಗಳು ಬಂದAತಹ ಜನರಿಗೆ ಲಸಿಕೆ ನೀಡುವುದರ ಜೊತೆಗೆ ಕರೋನಾ ರೋಗದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

error: