May 11, 2021

Bhavana Tv

Its Your Channel

ಲಾಕ್ ಡೌನ್ ಮಧ್ಯೆ ೨೪*೭ ನೀರಿ ಬಿಲ್ ಪಾವಿತಿಸಲು ಇಳಕಲ್ ಜನರ ಪರದಾಟ .

ಇಳಕಲ್: ಸರ್ಕಾರ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಹೀಗಾಗಿ ಜನರು ಹೊರಗಡೆ ಬರುವುದಕೆ ಹಿಂಜರಿಯುತ್ತಿದ್ದಾರೆ. ಆದರೆ ಸರ್ಕಾರದ ವಿವಿಧ ಟ್ಯಾಕ್ಸಗಳನ್ನು ಕಟ್ಟಲು ಸರ್ಕಾರಿ ಕಚೇರಿಗಳಿಗೆ ಬರಲೆಬೇಕು.
ಅದೇ ರೀತಿ ಇಳಕಲ್ ನಗರಸಭೆಯಲ್ಲಿ ಇನ್ನಿತರ ಬಿಲ್ ಪಾವತಿಸಲ್ಲು ಜನರು ಕರೋನಾ ಮಧ್ಯೆಯೇ ಬರಬೇಕಿದೆ.
ಆದರೆ ನಗರಸಭೆಯ ಬಿಲ್ ಪಾವತಿಯ ಕೌಂಟರ ಒಂದೇ ಇರುವದರಿಂದ ಗಂಟೆಗಟ್ಟಲೇ ನಿಲ್ಲಬೇಕಿದೆ.
ಅಲ್ಲದೆ ಯಾವುದೇ ನೆರಳು ಇಲ್ಲದಿರುವುದರಿಂದ ಬಿಸಿಲಲ್ಲೇ ಕಾದು ನಿಲ್ಲಬೇಕಾದ ಸ್ಥಿತಿ ಇದೆ. ಯುವಕರು ಹೇಗೋ ನಿಲ್ಲುತ್ತಾರೆ. ಆದರೆ ವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದೆ.


ಹೀಗಾಗಿ ಇನ್ನೊಂದು ಕೌಂಟರ್ ತೆರೆಯಬೇಕು ಹಾಗೂ ನೆರಳಿನ ವ್ಯವಸ್ಥೆ ಮಾಡಬೇಕು. ಮತ್ತು ೨೪೭ ನೀರಿನ ಬಿಲ್ ತುಂಬುವ ವಿಧಾನವನ್ನು ಆನ್ ಲೈನ್ ಮಾಡುವುದರಿಂದ ಮನೆಯಲ್ಲೇ ಕುಳಿತು ಬಿಲ್ ತುಂಬಬಹುದು ಹೀಗಾಗಿ ಜನರಿಗೆ ಸಹಾಯವಾಗುತ್ತದೆ ಎಂದು ಮಹಾಂತೇಶ ಸಜ್ಜನ ಅವರು ನಮ್ಮ ಭಾವನಾ ಟಿವಿ ಪ್ರತಿನಿಧಿಯೊಂದಿಗೆ ಹೇಳಿದರು. ಇದಕ್ಕೆ ಪ್ರತಿಕ್ರೀಯಿಸಿದ ನಗರಸಭೆ ಪೌರಾಯುಕ್ತರಾದ ಜಗದೀಶ ಹುಲಗೆಜ್ಜಿ ಯವರು ೨೪೭ ನೀರಿನ ಬಿಲ್ ತುಂಬಲು ಒಂದು ಕೌಂಟರ್ ಇದ್ದು ೮ ರಿಂದ ಪ್ರಾರಂಭವಾಗಿ ೧.೩೦ ವರೆಗವ ಸಮಯವಿದೆ ಆದರೆ ಜನರು ೯.೩೦ ರಿಂದ ಬರುತ್ತಿದ್ದರಿಂದ ಜನಜಂಗುಳಿ ಆಗುತ್ತಿದೆ . ಜನರ ಬೇಡಿಕೆ ಇನ್ನೂ ಒಂದು ಕೌಂಟರ್ ಅನ್ನು ಪ್ರಾರಂಭಿಸುತ್ತವೆ ಮತ್ತು ವೃದ್ಧರು ಬಿಸಿಲಿನಲ್ಲಿ ನಿಲ್ಲಲು ಅವರಿಗೆ ತೊಂದರೆಯಾಗುತ್ತಿದ್ದು ನಮ್ಮ ಗಮನಕ್ಕೆ ಬಂದಿದೆ ಅತಿ ಶೀಘ್ರದಲ್ಲಿ ಶಾಮಿಯಾನ ಹಾಕಿ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು .
ಕಡ್ಡಾಯವಾಗಿ ಮಾಸ್ಕ್ ಬಳಸಬೇಕು ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕೆಂದು ಸಾರ್ವಜನಿಕರಲ್ಲಿವಿನಂತಿಸಿಕೊoಡಿದ್ದಾರೆ .

ವರದಿಗಾರರು : ವಿನೋದ ಬಾರಿಗಿಡದ. ಇಳಕಲ್

error: