April 24, 2024

Bhavana Tv

Its Your Channel

ಚಾಲುಕ್ಯರ ಸಾಮ್ರಾಜ್ಯವಾಗಿದ್ದ ಬಾದಾಮಿ ಮೂಲಭೂತ ಸೌಕರ್ಯ ಅಭಿವೃದ್ಧಿ ವಿಷಯದಲ್ಲಿ ಮತ್ತೊಂದು ಮೈಲಿಗಲ್ಲು.

ಬಾದಾಮಿ ; ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಪ್ರಯತ್ನದ ಫಲವಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ೨೬೫ ಕೋಟಿ ರೂ.ಗಳ ಯೋಜನೆ ಮಂಜೂರಾಗಿದೆ.

ಯೋಜನೆ ಮಂಜೂರು ಮಾಡಿರುವ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಸಿದ್ದರಾಮಯ್ಯ ಅವರು ಧನ್ಯವಾದ ತಿಳಿಸಿದ್ದಾರೆ. ಯೋಜನೆ ಸಂಬAಧ ಸಿದ್ದರಾಮಯ್ಯ ಅವರು ಗಡ್ಕರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಬಾದಾಮಿ ವಿಶ್ವಖ್ಯಾತ ಪ್ರವಾಸಿ ತಾಣ. ಬಾದಾಮಿ, ಪಟ್ಟದಕಲ್ಲು, ಐಹೊಳೆಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ದೇಶ, ವಿದೇಶದ ಪ್ರವಾಸಿಗರು ಭೇಟಿ ನೀಡುತ್ತಾರೆ. ಉತ್ತಮವಾದ ರಸ್ತೆ ಸೌಲಭ್ಯ ಇಲ್ಲದೇ ಇದ್ದುದು ಅವರಿಗೆ ಸಮಸ್ಯೆಯಾಗಿತ್ತು. ಈಗ ಇರುವ ರಸ್ತೆ ಕಿರಿದಾಗಿರುವುದರಿಂದ ವಾಹನಗಳ ಓಡಾಟಕ್ಕೂ ತೊಂದರೆಯಾಗಿತ್ತು.

ಬಾದಾಮಿ, ಪಟ್ಟದಕಲ್ಲು ಗುಳೇದಗುಡ್ಡ, ಶಿರೂರು, ಗದ್ದನಕೇರಿ ಕ್ರಾಸ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮತ್ತು ಉನ್ನತೀಕರಣಕ್ಕೆ ೨೬೫ ಕೋಟಿ ರೂ.ಗಳ ಯೋಜನೆ ಮಂಜೂರಾಗಿದ್ದು ಕಾಮಗಾರಿಗೆ ಶೀಘ್ರವೇ ಆರಂಭವಾಗಿ ವರ್ಷದೊಳಗೆ ಪೂರ್ಣಗೊಳ್ಳಲಿದೆ.

ಯೋಜನೆಯ ಒಂದನೇ ಪ್ಯಾಕೇಜ್ ನಲ್ಲಿ ೨೪ ಕಿ.ಮೀ. ಬಾದಾಮಿಯಲ್ಲಿ ಹಾದು ಹೋಗಲಿದೆ. ಎರಡನೇ ಪ್ಯಾಕೇಜ್ ನಲ್ಲಿ ಶಿರೂರು ವರೆಗೆ ೧೫. ಕಿ.ಮೀ. ರಸ್ತೆ ಅಭಿವೃದ್ಧಿ ಆಗಲಿದೆ.

ಇದರಿಂದ ಹುಬ್ಬಳ್ಳಿ ಮೂಲಕ ಬಾದಾಮಿ, ಪಟ್ಟದಕಲ್ಲು ಮತ್ತಿತರ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶ, ವಿದೇಶದ ಪ್ರವಾಸಿಗರಿಗೆ ಅನುಕೂಲವಾಗಲಿದ್ದು ರಸ್ತೆ ಪ್ರಯಾಣ ಸುಖಕರವಾಗಿರಲಿದೆ.

ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ೩೬೭ ಹಾಗೂ ೨೧೮ಕ್ಕೆ ಸಂಪರ್ಕ ಕಲ್ಪಿಸಲಿದೆ. ಹೆದ್ದಾರಿ ೧೦ ಮೀಟರ್ ವಿಸ್ತರಣೆಯಾಗಲಿದೆ.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: