April 25, 2024

Bhavana Tv

Its Your Channel

ಟೆಂಡರ್ ಕರೆಯದೇ ತೆಂಗಿನಕಾಯಿ ರವಾನೆ ಮಾಡುತ್ತಿರುವ ತೋಟಗಾರಿಕೆ ಇಲಾಖೆ

ಬಾದಾಮಿ ತಾಲೂಕಿನ ಬನಶಂಕರಿ ತೋಟಗಾರಿಕೆ ಇಲಾಖೆ ಯಲ್ಲಿ ಟೆಂಡರ್ ಕರೆಯದೇ ತೆಂಗಿನಕಾಯಿ ರವಾನೆ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸುಕ್ಷೇತ್ರ ಬನಶಂಕರಿಯಲ್ಲಿನ ತೋಟಗಾರಿಕೆ ಯಲ್ಲಿನ ತೆಂಗಿನ ಮರಗಳನ್ನು ಟೆಂಡರ್ ಕರೆದು ಕಾಯಿಗಳನ್ನು ಟೆಂಡರ್ ಕೊಡುತ್ತಿದ್ದರು ಆದರೆ ಸುಮಾರು ಐದಾರು ವರ್ಷಗಳಿಂದ ಟೆಂಡರ್ ಕರೆಯದ ತಾವೇ ತೆಂಗಿನಕಾಯಿ ಕೆಡವಿ ಹೊತ್ತೊಯ್ಯುವ ದಂಧೆ ನಡೆದಿದೆ ಎಂದು ಸ್ಥಳೀಯರು ಈ ಸಂದರ್ಭದಲ್ಲಿ ಅವರನ್ನು ತಡೆದು ವಾಗ್ವಾದ ನಡೆಸಿದ ಘಟನೆ ನಡೆದಿದೆ. ಇಷ್ಟೇ ಅಲ್ಲದೆ ತೋಟಗಾರಿಕೆ ಇಲಾಖೆ ಸಿಬ್ಬಂದಿ ಟೆಂಡರ್ ಮಾಡದೆ ತೆಂಗಿನಕಾಯಿ 4 ಲೋಡ ಮಾರಿರುತ್ತಾನೆ ಸರ್ಟಿಫ್ಯ್ ಆಗದೆ ತೆಂಗಿನ ಸಸಿ ಮಾರಾಟ ಮಾಡಿದ್ದು,2 ಕೊಳವೆಬಾವಿ ಇದ್ದರು ಅದರ ಮೆಟರಿಯಲ್ ಮಾರಾಟ ಮಾಡಿದ್ದಾರೆ .ಟೆಂಡರ್ ಕೊಡುವುದರಿಂದ ಸ್ಥಳಿಕರಿಗೆ ಇದರಿಂದ ಉದ್ಯೋಗ ಕೂಡ ಸಿಕ್ಕಿ ಜೀವನೋಪಾಯಕ್ಕೆ ಅನುಕೂಲ ಆಗುತ್ತಿತ್ತು ಈಗ ತೋಟಗಾರಿಕೆ ಯವರೇ ತಾವೇ ಈ ಕೆಲಸ ಮಾಡುತ್ತಿದ್ದು ಬೇಲಿಯೇ ಎದ್ದು ಹೊಲ ಮೇಯ್ದರೆ ಕಾಯುವವರು ಯಾರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆಂಗಿನಕಾಯಿ ಮರದಿಂದ ಕೀಳುವ ವೇಳೆಯಲ್ಲಿಯೇ ಸ್ಥಳೀಯರು ವಾಹನವನ್ನು ತಡೆಹಿಡಿದು ನಿಲ್ಲಿಸಿದ್ದಾರೆ. ಹಾಗಾದರೆ ಈ ಇಲಾಖೆಗೆ ಹೇಳುವವರು ಕೇಳುವವರು ಯಾರು ಇಲ್ಲವೇ ಕೂಡಲೇ ಈ ಘಟನೆಯ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ತಾಲೂಕಾ ಆಡಳಿತ ಸೂಕ್ತ ಕಠಿಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: