September 16, 2024

Bhavana Tv

Its Your Channel

ವಿವಿಧ ಸಂಘಟನೆಗಳಿOದ ಭಜರಂಗದಳದ ಕಾರ್ಯಕರ್ತ ಹರ್ಷನಿಗೆ ಶ್ರದ್ಧಾಂಜಲಿ

ಬಾದಾಮಿ:-ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಭಜರಂಗದಳದ ಹಿಂದೂ ಕಾರ್ಯಕರ್ತ ಹರ್ಷ ಅವರ ಭೀಕರ ಹತ್ಯೆಯನ್ನು ಖಂಡಿಸಿ ಶ್ರೀ ರಾಮ ಸೇನೆ,, ವಿಶ್ವಹಿಂದೂ ಪರಿಷತ್ ಹಾಗೂ ಸಮಸ್ತ ಹಿಂದೂ ಸಂಘಟನೆಗಳು ಬಾದಾಮಿ ನಗರದ ಪಿ.ಎಲ್.ಡಿ.ಬ್ಯಾಂಕ್ ಆವರಣದಿಂದ ಮೇಣದಬತ್ತಿ ಬೆಳಗಿಸಿ ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿ ಶ್ರೀ ಹರ್ಷ ಅಮರ ಹೇ ಎನ್ನುವ ಕೂಗು ಚಾಲುಕ್ಯರ ಕೋಟೆ ಕೊತ್ತಲಾಗಳಿಗೆ ಪ್ರತಿಧ್ವನಿಸುವ ಹಾಗೆ ಇತ್ತು… ಹಾಗೇ ಘೋಷಣೆ ಕೂಗುತ್ತ ಉದ್ಧಟತನ ಮೆರೆದವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ವೃತ್ತವನ್ನೂ ಹಾಯ್ದು ವೀರ ಪುಲಕೇಶಿ ವೃತ್ತದಲ್ಲಿ ಕೆಲಹೊತ್ತು ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗುತ್ತ ಹರ್ಷ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

. ಸ್ಥಳಕ್ಕೆ ಆಗಮಿಸಿದ ತಾಲೂಕಾ ತಹಶೀಲ್ದಾರ ಸುಹಾಸ ಇಂಗಳೆ ಅವರಿಗೆ ಮನವಿ ಸಲ್ಲಿಸಿ ಉದ್ಧಟತನ ಮೆರೆಯತ್ತಿರುವ ಎಸ್.ಡಿ.ಪಿಐ , ಪಿಎಫ್‌ಐ , ಸಿಎಫ್‌ಐ ಇಂತಹ ಸಂಘಟನೆಗಳನ್ನು ಕೂಡಲೇ ಬ್ಯಾನ್ ಮಾಡಿ ಕರ್ನಾಟಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಬೇಕು ಎಂದು ರಾಜ್ಯ ಹಾಗೇ ಕೇಂದ್ರ ಸರಕಾರಗಳನ್ನು ಒತ್ತಾಯಿಸಿದರು.

ಹರ್ಷ ಅವರ ಕೊಲೆ ಆರೋಪಿಗಳನ್ನು ಅತೀ ಶೀಘ್ರದಲ್ಲೇ ಬಂಧಿಸಿ ಕಾನೂನು ರೀತಿ ಕಠಿಣ ಶಿಕ್ಷೆ ಆಗಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು. ಮತ್ತು ಹಿಂದೂ ಕಾರ್ಯಕರ್ತರ ರಕ್ಷಣೆಗೆ ಹಾಗೂ ಸಮಸ್ತ ಹಿಂದೂಗಳ ರಕ್ಷಣೆಗೆ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳು ಸೂಕ್ತ ಕಾನೂನುಗಳನ್ನು ಜಾರಿಗೆ ತಂದು ಸಮಾಜದಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಹಕ್ಕೊತ್ತಾಯ ಮಾಡಿದರು.

ವರದಿ:- ರಾಜೇಶ್.ಎಸ್ ದೇಸಾಯಿ ಬಾದಾಮಿ

error: