September 15, 2024

Bhavana Tv

Its Your Channel

ಶ್ರೀ ಪರಮ ಪೂಜ್ಯ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ

ಬಾದಾಮಿ: ಮಹರ್ಷಿ ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ 3% ರಿಂದ 7.5% ವರೆಗೆ ಹೆಚ್ಚಳಕ್ಕೇ ಆಗ್ರಹಿಸಿ ಧರಣಿ ಸತ್ಯಾಗ್ರಹ, ಧರಣಿಯಲ್ಲಿ ಬಾದಾಮಿ ಮತಕ್ಷೇತ್ರದ ಜೆ.ಡಿ ಎಸ್ ಬಾಗಲಕೋಟೆ ಜಿಲ್ಲಾಧ್ಯಕ್ಷ ಹನುಮಂತ ಮಾವಿನ ಮರದ ಭಾಗಿಯಾಗಿದ್ದರು

ನಿನ್ನೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪರಮ ಪೂಜ್ಯ ಪ್ರಸನ್ನಾ ನಂದ ಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಜನಸಂಖ್ಯಾ ಆಧಾರದ ಮೇಲೆ 3% ಇಂದ 7.5% ವರೆಗೆ ಹೆಚ್ಚಳ ಮಾಡುವುದಕ್ಕಾಗಿ ನಿವೃತ್ತ ನ್ಯಾಯಮೂರ್ತಿ ಗಳಾದ ನಾಗಮೋಹಣ ದಾಸ ಆಯೋಗದ ವರದಿಯನ್ನು ಜಾರಿ ಮಾಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ನಡೆಸಿದ ಧರಣಿ ಸತ್ಯಾಗ್ರಹಕ್ಕೆ ಬಾದಾಮಿ ಮತಕ್ಷೇತ್ರದ ಜಾತ್ಯಾತೀತ ಜನತಾದಳ ದ ಬಾಗಲಕೋಟೆ ಜಿಲ್ಲಾಧ್ಯಕ್ಷ ಶ್ರೀ ಹಣಮಂತ ಮಾವಿನಮರ ದ ಹಾಗೂ ತಾಲೂಕಾ ಪದಾಧಿಕಾರಿಗಳು ಧರಣಿ ಸತ್ಯಾಗ್ರಹ ಬೆಂಬಲಿಸಿ ಆಯೋಗದ ವರದಿಯನ್ನು ಜಾರಿ ಮಾಡಲು ಆಗ್ರಹಿಸಲಾಯಿತು.

ಇದೇ ಸಂದರ್ಭದಲ್ಲಿ ನಿವೃತ್ತ ತಹಶೀಲ್ದಾರ ರಾದ ಶ್ರೀ ಭೀಮಪ್ಪ.ತಳವಾರ, ದೇವರಾಜ ಪಾಳೇಗಾರ,ಹುಚ್ಛೇಶ್.ಹದ್ದನ್ನವರ,,ಉಮೇಶ್ ಹಾದಿಮನಿ, ಸಂತೋಷ.ನಾಯನೇಗಲಿ,, ಪಾಂಡು ತಳವಾರ,ಭರಮಪ್ಪ ಪರಸನ್ನವರ,ಹಾಗೂ ಬಾದಾಮಿ ಮತಕ್ಷೇತ್ರದ ವಾಲ್ಮೀಕಿ ಸಮುದಾಯದ ಯುವ ಮುಖಂಡರು ಭಾಗವಹಿಸಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: