September 16, 2024

Bhavana Tv

Its Your Channel

ಅಪ್ಪುವಿನ ಹುಟ್ಟುಹಬ್ಬದ ಪ್ರಯುಕ್ತ ಬಾದಾಮಿ ತಾಲೂಕಾ ಆಸ್ಪತ್ರೆಯಲ್ಲಿ ಊಟದ ವ್ಯವಸ್ಥೆ

ಬಾದಾಮಿ :-ಅಪ್ಪುವಿನ ಹುಟ್ಟುಹಬ್ಬದ ಪ್ರಯುಕ್ತ ಬಾದಾಮಿ ತಾಲೂಕಾ ಆಸ್ಪತ್ರೆಯಲ್ಲಿ ಊಟದ ವ್ಯವಸ್ಥೆ ಮಾಡಿಸಿ ಅಪ್ಪುವಿನ ಮಾರ್ಗದರ್ಶನವನ್ನು ಅಳಿಲು ಸೇವೆ ಮಾಡುವ ಮುಖಾಂತರ ಸೇವೆ ಸಲ್ಲಿಸಿದ ಬಾದಾಮಿಯ ನವೀನ ಬೊ0ಬ್ಲೆ ಹಾಗೂ ಆನಂದ ಅಂಬಿಗೇರ ಯುವಕರು.

ಅಪ್ಪುವಿನ ಹುಟ್ಟುಹಬ್ಬದ ಪ್ರಯುಕ್ತ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ನ ರೋಗಿಗಳು ಹಾಗೂ ರೋಗಿಗಳ ಜೊತೆಗಾರರು ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಗೂ ಊಟದ ವ್ಯವಸ್ಥೆ ಯನ್ನ ಬಾದಾಮಿಯ ಅಪ್ಪಟ ಅಪ್ಪುವಿನ ಅಭಿಮಾನಿಗಳಾದ ನವೀನ ಬೊಂಬ್ಲೇ ಮತ್ತು ಆನಂದ ಅಂಬಿಗೇರ ಅಪ್ಪುವಿನ ಹುಟ್ಟುಹಬ್ಬದ ಆಚರಣೆಯನ್ನು ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಿ ಅಪ್ಪುವಿನ ಮಾರ್ಗದರ್ಶನದ ಅಳಿಲು ಸೇವೆ ಮಾಡುವುದರ ಮುಖಾಂತರ ಅಭಿಮಾನ ಮೆರೆದು ಸಾರ್ಥಕ ಹುಟ್ಟುಹಬ್ಬ ಮಾಡಿದ ತೃಪ್ತಿಯ ಲ್ಲೀ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿ ಅಪ್ಪುವಿನ ಭಾವಚಿತ್ರಕ್ಕೆ ನಮನ ಸಲ್ಲಿಸಿದರು…

ಇದೇ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ! ರೇವಣಸಿದ್ದಪ್ಪ ಆಸ್ಪತ್ರೆಗೆ ಬಂದಿರುವ ಸಾರ್ವಜನಿಕರಿಗೆ ಊಟ ಬಡಿಸುವ ದರ ಮೂಲಕ ಚಾಲನೆ ನೀಡಿದರು. ಇನ್ನುಳಿದಂತೆ ತಾಲೂಕಾ ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: