September 16, 2024

Bhavana Tv

Its Your Channel

ಬೆಂಗಳೂರಿನ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ಗೆ ಸಿದ್ದರಾಗಿ, ಲಕ್ಷ್ಮಿ ಬಸವರಾಜ ರಿಂದ ಕುರುಬ ಸಮಾಜದವರಲ್ಲಿ ಮನವಿ

ಬಾದಾಮಿ: ಸಂಚಾರಿ ಕುರಿಗಾಹಿ ಮಹಿಳೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದ ಆರೋಪಿಗಳನ್ನು ಸರಕಾರ ಬಂಧಿಸಿ ಕಠಿಣ ಕ್ರಮ ಜರುಗಿಸುವ ಸಲುವಾಗಿ ಬೆಂಗಳೂರಿನ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ಗೆ ಸಿದ್ದರಾಗಿ ಎಂದು ಲಕ್ಷ್ಮಿ ಬಸವರಾಜ ಪೊಲೀಸ್ ಪಾಟೀಲ್ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಮಹಿಳಾ ರಾಜ್ಯ ಅಧ್ಯಕ್ಷರು ಕುರುಬ ಸಮಾಜದವರಲ್ಲಿ ಮನವಿ ಮಾಡಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಯ ಸಂಚಾರಿ ಕೂರಿಗಾಹಿ ಮಹಿಳೆ ಲಕ್ಷ್ಮಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವಾನ್ನು ತೀವ್ರವಾಗಿ ಖಂಡಿಸಿ, ಸರಕಾರ ಈ ಪ್ರಕರಣಕ್ಕೆ ಸಂಭAದಪಟ್ಟ ಆರೋಪಿಗಳನ್ನು ಕೂಡಲೇ ಬಂಧಿಸಿ ಕೊಲೆಗೆ ಇಡಾದ ಮಹಿಳೆಯ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಟ್ಟು ಮುಂದೆ ಆಗುವ ಇಂಥ ಪ್ರಕರಣಕ್ಕೆ ಸರಕಾರ ಕೊಡುವ ಶಿಕ್ಷೆ ರಾಜ್ಯದಲ್ಲಿನ ಅತ್ಯಾಚಾರಿಗಳಿಗೆ ಎಚ್ಚರಿಕೆಯ ಗಂಟೆ ಆಗಬೇಕು ಈ ಪ್ರಕರಣ. ಕುರುಬ ಸಮಾಜದ ಎಲ್ಲ ಬಾಂಧವರು ರಾಜ್ಯಾದ್ಯಂತ ದಿನಾಂಕ 22/03/2022 ರಂದು ಬೆಂಗಳೂರಿನ ವಿಧಾನಸೌಧ ದ ಎದುರು ಉಗ್ರ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳವಂತೆ ಲಕ್ಷ್ಮಿ ಬಸವರಾಜ ಪೊಲೀಸ್ ಪಾಟೀಲ್ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಮಹಿಳಾ ರಾಜ್ಯ ಅಧ್ಯಕ್ಷ ರು ಮನವಿ ಮಾಡಿದ್ದಾರೆ.

ವರದಿ:- ರಾಜೇಶ್.ಎಸ್ ದೇಸಾಯಿ

error: