July 26, 2021

Bhavana Tv

Its Your Channel

ಸ್ಪಂದನ ಪಿ.ಯು ವಿಜ್ಞಾನ ಕಾಲೇಜು ಶೇ ೧೦೦ ಫಲಿತಾಂಶ

ಇಳಕಲ್ : ಸ್ಪಂದನ ವಿದ್ಯಾವಧ೯ಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಸ್ಪಂದನ ಪಿ.ಯು ವಿಜ್ಞಾನ ಕಾಲೇಜಿನ ದ್ವಿತೀಯ ಪಿಯು ಫಲಿತಾಂಶ ಶೇ ೧೦೦ ರಷ್ಟಾಗಿದೆ ಎಂದು ಕಾಲೇಜಿನ ಪ್ರಾಚಾಯ೯ರಾದ ಅಮರೇಶ ಬಿ ಕೌದಿ ತಿಳಿಸಿದ್ದಾರೆ.
ಕಾಲೇಜಿನ ೨೨೬ ವಿದ್ಯಾಥಿ೯ಗಳಲ್ಲಿ ೨೨೬ ವಿದ್ಯಾಥಿ೯ಗಳು ಪಾಸಾಗಿದ್ದು, ೯೭ ವಿದ್ಯಾಥಿ೯ಗಳು ಅತ್ಯುತ್ತಮ ಶ್ರೇಣಿ, ೧೨೮ ವಿದ್ಯಾಥಿ೯ಗಳು ಪ್ರಥಮ ಶ್ರೇಣಿ, ಒಬ್ಬ ವಿದ್ಯಾಥಿಯುÄ ದ್ವಿತೀಯ ಶ್ರೇಣಿ ಪಾಸಾಗಿದ್ದಾರೆ.
ಸಂತೋಷಕುಮಾರ ವಡ್ಡರ ೫೯೪/೬೦೦ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಶೇಕಡಾ ೯೯ ಆಗಿರುತ್ತದೆ. ಗುರುರಾಜ ಯು ವರದಪ್ಪನವರ ೫೯೨ ಅಂಕ ಪಡೆದು ೯೮.೬೦% ದ್ವಿತೀಯ ಸ್ಥಾನ ಪಡೆದಿದ್ದಾನೆ. ಕಾವ್ಯಾಂಜಲಿ ಮೇಟಿ ೫೮೯ ಅಂಕ ಪಡೆದು ೯೮.೧೬% ತೃತೀಯ ಸ್ಥಾನ ಪಡೆದಿದ್ದಾಳೆ.
ನೂರಕ್ಕೆ ನೂರು ಅಂಕಗಳನ್ನು ಕನ್ನಡ ವಿಷಯದಲ್ಲಿ ೬೭ ಇಂಗ್ಲೀಷ ವಿಷಯದಲ್ಲಿ ೦೪ ಹಿಂದಿ ವಿಷಯದಲ್ಲಿ ೦೨ ಭೌತಶಾಸ್ತç ವಿಷಯದಲ್ಲಿ ೩ ರಸಾಯನಶಾಸ್ತç ವಿಷಯದಲ್ಲಿ ೦೪ ಗಣಿತಶಾಸ್ತç ವಿಷಯದಲ್ಲಿ ೦೬ ಜನ ವಿದ್ಯಾಥಿ೯ಗಳು, ಹಾಗೂ ಜೀವಶಾಸ್ತç ವಿಷಯದಲ್ಲಿ ಒಬ್ಬ ವಿದ್ಯಾಥಿ೯ ಪಡೆದಿದ್ದಾರೆ.
ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಕೊಟ್ಟ ವಿದ್ಯಾಥಿ೯ಗಳಿಗೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ರವಿ ಎಲ್ ಅರಸಿದ್ದಿ, ಬಸವರಾಜ ಸಿ ತುಂಬಗಿ, ಮತ್ತು ವೀರೇಶ ಬಾಚೇನಹಳ್ಳಿಯವರು ಹಾಗೂ ಕಾಲೇಜಿನ ಉಪನ್ಯಾಸಕ ವೃಂದ ಮತ್ತು ಭೋಧಕೇತರರು ಶುಭ ಹಾರೈಸಿದ್ದಾರೆ

ವರದಿ: ವಿನೋದ ಬಾರಿಗಿಡದ ಇಳಕಲ್

error: