March 29, 2024

Bhavana Tv

Its Your Channel

ಮಾನವ ಜನ್ಮ ದೊಡ್ಡದು ಹುಚ್ಚಪ್ಪಗಳಿರಾ ಇದ ಹಾನಿ ಮಾಡಲುಬೇಡಿ- ದಾಸರ ವಾಣಿ ಮರೆಯಬೇಡಿ; ಆರ್.ಆರ್.ಸಂದಿಮನಿ ಗುರುಗಳು

ಇಳಕಲ್‌ನ ಹೆಸರಾಂತ ಬಿಇಡಿ ಮಹಾವಿದ್ಯಾಲಯದಲ್ಲಿ ೨೦೨೦-೨೧ ನೇ ಶೈಕ್ಷಣಿಕ ವರ್ಷದ ಬಿಇಡಿ ವಿದ್ಯಾರ್ಥಿಗಳ ಉದ್ಘಾಟನಾ ಮತ್ತು ವ್ಯಸನಮುಕ್ತ ದಿನಾಚರಣೆಗೆ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಡಾ.ಜಿ ಮಲ್ಲಯ್ಯ ಹಾಗೂ ಮುಖ್ಯ ಅತಿಥಿಯಾಗಳಾದ ಆರ್.ಆರ್.ಸಂದಿಮನಿ ಹಾಗೂ ಎಸ್. ವಿ. ಎಂ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಬಿಜ್ಜಲ್ ಉಪಾಧ್ಯಕ್ಷರಾದ ಸಿ.ಸಿ. ಸಾಲಿಮಠ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಅನ್ನಪೂರ್ಣ ಎಸ್.ಮಠ ಮತ್ತು ಉಪಪ್ರಾಚಾರ್ಯರಾದ ಡಾ.ಸಿ.ಎಸ್.ಬಂಡ್ರಗಲ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿರಿದ್ದರು.

ಡಾ.ಜಿ ಮಲಯ್ಯ ಪ್ರಾಚಾರ್ಯರು ವಿದ್ಯಾರ್ಥಿಗಳ ಕುರಿತು ಮಾತುಗಳನ್ನ ಹೇಳಿದರು.
ತನ್ನದೆ ಆದ ಭವ್ಯ ಇತಿಹಾಸ ಹೊಂದಿದ ಈ ಮಹಾವಿದ್ಯಾಲಯದಲ್ಲಿ ತಾವು ವೃತ್ತಿ ಶಿಕ್ಷಣ ಪಡೆಯಲು ಪುಣ್ಯ ಮಾಡಿದ್ದೀನಿ, ಪದವಿಯನ್ನಪೂರೈಹಿಸಿ ಬಿಇಡಿ ಗೆ ಕಾಲಿಟ್ಟಿರಿ ನಿಮ್ಮ ಜೀವನ ಉಜ್ವಲವಾಗಲಿ.
ಕಾಲೇಜಿನ ಹೆಸರು ಎಲ್ಲೆಡೆ ರಾರಾಜಿಸಲಿ. ಕಲಿಸಿದ ಗುರುಗಳನ್ನ ಮರೆಯಬೆಡಿ. ತಾವು ತಮ್ಮ ವೃತ್ತಿ ಜೀವನದಲ್ಲಿ ಎಲ್ಲಾ ಮಕ್ಕಳನ್ನ ಸಮಾನವಾಗಿ ಕಾಣಬೇಕು. ಒಬ್ಬ ಶಿಕ್ಷಕನಾಗಲು ನಿರಂತರ ಓದಿನಲ್ಲಿ ತನ್ನನ್ನ ತೊಡಗಿಸಿಕೊಳ್ಳಬೆಕು. ಶಿಕ್ಷಕರಲ್ಲಿ ಕ್ರಿಯಾಶೀಲ ಚಟುವಟಿಕೆ ಅಗತ್ಯ, ದಿನನಿತ್ಯ ಶಿಕ್ಷಕರು ಹಲವಾರು ಚಟುವಟಿಕೆಗಳಿಂದ ತಾನು ಗುರುತಿಸಿಕೊಳ್ಳಬೇಕು.ಗುರು ಎಂದರೆ ತಂಗಾಳಿ,ಭಕ್ತಿ, ಮುಕ್ತಿ,ಮಾರ್ಗ,ಆಲೋಚನೆ, ಅಭಿಪ್ರಾಯ, ಹಲವಾರು ಹೆಸರುಗಳನ್ನ ನೀವು ಪಡೆಯಿರಿ
ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

ದಾಸರು ಹೇಳುವ ಹಾಗೆ ಮಾನವ ಜನ್ಮ ದೊಡ್ಡದು ಹುಚ್ಚಪ್ಪಗಳಿರಾ ಇದನ್ನ ಹಾನಿಮಾಡಲು ಬೇಡಿ.ಮನುಷ್ಯ ಜನ್ಮಕ್ಕೆ ಬರೊದು ಒಂದು ದೊಡ್ಡ ಸೌಭಾಗ್ಯ ಇದನ್ನ ಯಾವುದೊ ಚಟಗಳನ್ನ ಹಚ್ಚಿಕೊಂಡು, ಯಾವುದೊ ವ್ಯಸನಗಳಿಗೆ ಒಳಗಾಗಿ ಹಾಳುಮಾಡಿಕೊಂಡು ನೀನು ಹಾಳಾಗದಲ್ಲದೆ ನಿನ್ನ ನಂಬಿದವರನೆಲ್ಲ ಹಾಳಾಗುತ್ತಾರೆ. ಮನುಷ್ಯ ಜನ್ಮ ಬಹಳ ದೊಡ್ಡದು.ಇದನ್ನ ಸಾರ್ಥಕ ಮಾಡಿಕೊ ಅದಕ್ಕೊಂದು ಅರ್ಥಕೊಡು.
ನೀ ಮತ್ತೆ ಹುಟ್ಟಿಬರಲಿಕ್ಕೆ ಹುಲ್ಲಲ್ಲ, ನೀ ಮಾನವನಾಗಿ ಹುಟ್ಟಿದ್ದು ನಿನ್ನ ಸೌಭಾಗ್ಯ, ಎಂದು ದಾಸರು ಹೆಳುವ ಹಾಗೆ ನಾವು ಒಳ್ಳೆಯ ಮಾರ್ಗದಲ್ಲಿ ನಡೆಯೋಣ

ಇಳಕಲ್ ಮಠದ ಪೂಜ್ಯ ಶ್ರೀ ಡಾ!!ಮಹಾಂತ ಅಪ್ಪಗುಳ ಇಡಿ ನಾಡಿನಲ್ಲಿ ಅವರನ್ನ ನಡೆದಾಡುವ ದೇವರೆಂದು ನಾವು ಒಪ್ಪಿಕೊಳ್ಳಬೇಕು ಕಾರಣ ಅವರ ಒಂದು ಒತ್ತಿಗೆಯನ್ನ ಅಧ್ಯಯನ ಮಾಡಿದಾಗ ನಮಗೆ ತಿಳಿಯುತ್ತದೆ.
ಅವರು ಮಾಡಿದ ಮೊದಲ ಕೈಂಕರ್ಯ ಅಂದರೆ ಮೊದಲು ನಿಮ್ಮ ಚಟಗಳನ್ನ ನನ್ನ ಜೋಳಿಗೆಗೆ ಹಾಕಿ ಎಂದು ಹೇಳುವರು. ಮಠದ ಸ್ವಾಮಿಗಳು ಮಠದ ಆಸ್ತಿಯನ್ನ ಮಾರಿಕೊಂಡು ಬೆಂಚಕಾರಿನಲ್ಲಿ ಅಡ್ಡಾಡುವುದನ್ನ ನಾವೆಲ್ಲರೂ ನೋಡಿದ್ದೆವೆ. ಆದರೆ ಈ ಮಹಾ ಸ್ವಾಮಿಗಳು ಹಾಗೆ ಮಾಡಲಿಲ್ಲ. ಅವರು ಜೋಳಿಗೆಯನ್ನ ಇಡಿದುಕೊಂಡು ವ್ಯಕ್ತಿಯ ಮನೆಗೆ ಹೋಗಿ ನಿಮ್ಮ ದುಶ್ಚಟಗಳನ್ನ ಈ ಜೋಳಿಗೆಯೊಳಗಡೆ ಹಾಕಿ ನೀನು ಒಳ್ಳೆಯವನಾಗು ಎನ್ನುವಂತೆ ಸಾರಿದರು.

ಜನ್ಮದಿನವನ್ನ ವ್ಯಸನಮುಕ್ತ ದಿನವನ್ನಾಗಿ ಮಾಡಿ ಎಂದು ಸಂದೇಶ ನೀಡಿದರು ಹಾಗೂ ರಾಜ್ಯ ಸರಕಾರವು ಕೂಡ ರಾಜ್ಯದಲ್ಲಿ ಅಗಸ್ಟ್ ೧ನ್ನು ವ್ಯಸನಮುಕ್ತ ದಿವಸವನ್ನಾಗಿ ಘೋಷಿಸಿತು.

ವರದಿ. ವಿನೋದ ಬಾರಿಗಿಡದ ಭಾವನಾ ಟಿವಿ ಇಳಕಲ್

error: