March 29, 2024

Bhavana Tv

Its Your Channel

ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ : ವಿಜಯಲಕ್ಷ್ಮಿ ಪಾಟೀಲ

ಇಳಕಲ್: ಸಮಗ್ರ ಕೃಷಿ ಪದ್ಧತಿ ಒಂದು ದಿನದ ತರಬೇತಿಯಲ್ಲಿ ಕೆ.ಎಫ್.ಆರ್.ಸಿ ಉಪನ್ಯಾಸಕರಾದ ವಿಜಯಲಕ್ಷ್ಮಿ ಪಾಟೀಲ್ ಅವರು ಮಾತನಾಡಿ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ವ್ಯವಸಾಯ ಮಾಡಿರಿ , ಸಮಗ್ರ ಕೃಷಿಯ ಬಗ್ಗೆ ವಿವರವಾಗಿ ಎಲ್ಲರ ಮನಮುಟ್ಟುವಂತೆ ಆಡು ಭಾಷೆಯಲ್ಲಿ ತರಬೇತಿ ನೀಡಿದರು ಮತ್ತು ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.

ಯಾವ ರೀತಿ ಅಣಬೆ ಬೆಳೆಯಬೇಕು ಅದರಿಂದ ಆರೋಗ್ಶಕ್ಕೆ ಏನೆಲ್ಲಾ ಫಲಕಾರಿಯಾಗುತ್ತದೆ, ಅಜೋಲಾ ವನ್ನು ಯಾವ ರೀತಿ ಬೆಳಿಬೇಕು ,ಜೇನು ಸಾಕಾಣಿಕೆ ,ಹೈನು ಗಾರಿಕೆ ಮಾಡುವವರಿಗೆ ಹಾಲು ಮತ್ತು ಹಾಲಿನಲ್ಲಿನ ಫ್ಯಾಟ್ ಪ್ರಮಾಣ ಹೇಗೆ ಹೆಚ್ಚು ಮಾಡಬೇಕು . ಸೆಣಬು ಬೆಳೆಯೋದರಿಂದ, ದ್ವೀ ದಳ ಧಾನ್ಶಗಳನ್ನ ಬೆಳೆಯೋದರಿಂದ ಹೊಲಗಳ ಫಲವತ್ತತೆ ಹೆಚ್ಚುತ್ತದೆ ಅಂತ ಆಡು ಭಾಷೆಯಲ್ಲಿಯೇ ವಿವರವಾಗಿ ರೈತರ ಮನ ಮುಟ್ಟುವ ಹಾಗೆ ತಿಳಿಸಿದರು.

ಕೃಷಿಯೇತರ ಚಟುವಟಿಕೆಗಳಾದ ಕುರಿಸಾಕಾಣಿಕೆ ಆಡುಸಾಕಾಣಿಕೆ ಕೋಳಿ ಮತ್ತು ಮೀನು ಸಾಕಣಿಕೆಯ ಬಗ್ಗೆ ವಿವರವಾಗಿ ತಿಳಿಸಿ,
ಮಹಿಳಾ ಸ್ವ ಸಹಾಯ ಸಂಘದವರಿಗೆ ಸರಕಾರದಿಂದ ಕೆಲವೊಂದು ಇಲಾಖೆಗಳಿಂದ ಧನ ಸಹಾಯ ದೊರೆಯುತ್ತದೆ ಅದರ ಸದುಪಯೋಗ ಪಡೆದು ಕೊಂಡು ಮಹಿಳಾ ಎಸ್.ಎಚ್ . ಜಿ .ಗಳನ್ನು ಸದೃಡವಾಗಿ ಬೆಳೆಸಿಕೊಳ್ಳಿ ಎಂದು ಶ್ರೀಮತಿ ವಿಜಯಲಕ್ಷ್ಮಿ ಪಾಟೀಲ ಹೇಳಿದರು.

ರೈತರಿಗೆ ಉಚಿತ ತರಬೇತಿ ಕೊಡಲಾಗುತ್ತದೆ ತಾವೆಲ್ಲರು ಬಂದು ತರಬೇತಿ ಪಡೆದುಕೊಂಡು ಅದರ ಸದ್ಬಳಕೆ ಮಾಡಿಕೊಳ್ಳಿ ಮತ್ತು ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳಬೇಡಿರಿ ಕೃಷಿ ಹೊಂಡ ಸರಕಾರದಿಂದ ರೈತರಿಗೋಸ್ಕರ ಮಾಡಿಕೊಟ್ಟಿದೆ ಅದರಿಂದ ರೈತರಿಗೆ ಮತ್ತು ದನಕರುಗಳಿಗೆ ನೀರಿನ ವ್ಯವಸ್ಥೆಯಾಗಿದೆ ಮತ್ತು ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದು ರೈತರನ್ನು ಉದ್ದೇಶಿಸಿ ಹೇಳಿದರು .

ವರದಿ:- ವಿನೋದ ಬಾರಿಗಿಡದ

error: