April 25, 2024

Bhavana Tv

Its Your Channel

ರಾಜಧಾನಿಯಲ್ಲಿ ಬಿಡುಗಡೆಗೊಂಡ ‘ಹೊನ್ನಾವರದ ಕವಿತೆಗಳು’ ; ಹೊನ್ನಾವರ ತಾಲೂಕು ಕ.ಸಾ.ಪ ಕಾರ್ಯಕ್ಕೆ ಶ್ಲಾಘನೆ

ಬೆoಗಳೂರು: ಪ್ರೋ.ನಾಗರಾಜ ಹೆಗಡೆ ಅಪಗಾಲ ಮತ್ತು ಪ್ರೋ. ಪ್ರಶಾಂತ ಮೂಡಲಮನೆ ಅವರ ಸಂಪಾದಕತ್ವದಲ್ಲಿ ಮೂಡಿಬಂದ “ಹೊನ್ನಾವರದ ಕವಿತೆಗಳು” ಕವನ ಸಂಕಲನ ನಮ್ಮ ರಾಜ್ಯದಲ್ಲೇ ವಿನೂತನವಾದದ್ದು ಹೊಸಗನ್ನಡ ಕಾವ್ಯದ ಒಂದು ಶತಮಾನದ ಮೂರು ತಲೆಮಾರಿನ ಕವಿಗಳನ್ನು ಪ್ರತಿನಿಧಿಸುತ್ತಿರುವ ಈ ಸಂಕಲನಕ್ಕೆ ಐತಿಹಾಸಿಕವಾಗಿ ಮಹತ್ವರ ಸ್ಥಾನವಿದೆ ಎಂದು ಕ.ಸಾ.ಪ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ ಮನು ಬಳಿಗಾರ ಅಭಿಪ್ರಾಯಪಟ್ಟರು.
ಅವರು ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕçತಿ ಇಲಾಖೆಯ ನಿರ್ದೇಶಕರಾದ ಮಾನ್ಯ ಎಸ್.ರಂಗಪ್ಪ ಅವರೊಂದಿಗೆ ‘ಹೊನ್ನಾವರದ ಕವಿತೆಗಳು’ ಎನ್ನುವ ಪ್ರಾತಿನಿಧಿಕ ಕವನ ಸಂಕಲವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸರ್ಕಾರದ ಅನುದಾನವನ್ನು ನೆಚ್ಚಿಕೊಳ್ಳದೇ ಸಂಪನ್ಮೂಲ ಕ್ರೋಢಿಕರಿಸಿ ಕ್ರಿಯಾತ್ಮಕವಾಗಿ ಹೇಗೆಲ್ಲಾ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಹೊನ್ನಾವರ ತಾಲೂಕಾ ಕ.ಸಾ.ಪ ಉತ್ತಮ ನಿದರ್ಶನವಾಗಿದೆ. ನಮ್ಮ ಅವಧಿಯಲ್ಲಿ ಸಿದ್ಧಗೊಂಡ ಈ ಚಾರಿತ್ರಿಕ ಹೊತ್ತಗೆ ಕಾವ್ಯ ಪರಂಪರೆಯ ಅಭ್ಯಾಸಗಳಿಗೆ , ಸಂಶೋಧಕರಿಗೆ ಇದು ದಿಕ್ಸೂಚಿಯಾಗಬಲ್ಲದು . ಈ ಹೊತ್ತಿಗೆಯಲ್ಲಿ ಪ್ರಕಟಗೊಳ್ಳುತ್ತಿರುವ ಎಲ್ಲ ಕವಿಗಳಿಗೆ ಮತ್ತು ಇದಕ್ಕೆ ಮಾರ್ಗದರ್ಶನ ನೀಡಿದ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ವಿಶೇಷ ಅಭಿನಂದನೆಗೆ ಅರ್ಹರು ಎಂದರು.
ಸAಪಾದಕ ಮಂಡಳಿಯ ಪರವಾಗಿ ಉಪಸ್ಥಿತರಿದ್ದ ಹೊನ್ನಾವರ ತಾಲೂಕಿನವರೇ ಆದ ಡಾ ಸಂಧ್ಯಾ ಹೆಗಡೆ ದೊಡ್ಡಹೊಂಡ ಮಾತನಾಡಿ ಸ್ಥಳಿಯವಾಗಿ ಕನ್ನಡ ನಾಡಿನ ಸಾಂಸ್ಕçತಿಕ ಚರಿತ್ರೆಯನ್ನು ಸಾಹಿತ್ಯಿಕ ಪರಿಭಾಷೆಯಲ್ಲಿ ದಾಖಲಿಸುವ ಇಂತಹ ಪ್ರಯತ್ನಗಳು ಶ್ಲಾಘನೀಯವಾದದ್ದು ಇಂತಹ ಪ್ರಯತ್ನವನ್ನು ಮುಂದುವರಿಸಿ ಹೊನ್ನಾವರದ ಸಮಗ್ರ ಸಾಹಿತ್ಯವನ್ನು ದಾಖಲಿಸುವ ಕಾರ್ಯವಾಗಬೇಕು ಇವು ನಾಳೆಯ ಸುಧೀರ್ಘ ಪಯಣದ ಎಳೆಯರಿಗೆ ಆತ್ಮವಿಮರ್ಶೆಯ ಹೆಜ್ಜೆಗಳಾಗಿಲೆಂಬುದು ನಮ್ಮ ಆಶಯ ಎಂದರು.
ಅಭಿನವರ ನ. ರವಿಕುಮಾರ್ ಮಾತನಾಡಿ ಕಳೆದ ೫ ವರ್ಷಗಳಲ್ಲಿ ಹೊನ್ನಾವರದ ಕ.ಸಾ.ಪ ಗುಣಾತ್ಮಕ ಮತ್ತು ಮೌಲ್ಯಾ ಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಿ ಅದು ಅಭಿನವರ ಸಹಯೋಗದಲ್ಲಿ ಹಮ್ಮಿಕೊಂಡ “ಅಮೃತ ಪುಸ್ತಕಾಲಯ’ ದಂತ ಯೋಜನೆಗಳು ರಾಜ್ಯದಲ್ಲೆಯೇ ವಿಶಿಷ್ಠವಾದದ್ದು ಮತ್ತು ನಾಗರಾಜ ಹೆಗಡೆ ಅಪಗಾಲ ಮತ್ತು ಅವರ ಕ.ಸಾ.ಪ ಬಳಗ ಇಂತಹ ಕೆಲಸ ಮುಂದುವರಿಸಲು ನಮ್ಮ ಸಹಕಾರ ಯಾವತ್ತು ಇರುತ್ತದೆ ಎಂದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಹಾಗೂ ಪ್ರಸ್ತುತ ಕ.ಸಾ.ಪ. ಆಡಳಿತಾಧಿಕಾರಿ ಮಾನ್ಯ ಎಸ್ ರಂಗಪ್ಪ ನವರು ಉಪಸ್ಥಿತರಿದ್ದರು..

error: