April 26, 2024

Bhavana Tv

Its Your Channel

ತೋಟದ ಹಾಗೂ ನರೇಗಾ ಕಾರ್ಮಿಕರನ್ನು ಸೇರಿದಂತೆ ೧೪೪ ವಲಯಗಳ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಯೋಜನೆಯಡಿಯಲ್ಲಿ ನೊಂದಣಿ

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

ಬೆಂಗಳೂರು : ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಗೌರವಾನ್ವಿತ ಸದಸ್ಯರಾದ ಟಿ.ಡಿ.ರಾಜೇಗೌಡ ಅವರು ತೋಟದ ಕಾರ್ಮಿಕರಿಗೆ ಸರಕಾರಿ ಸೌಲಭ್ಯಗಳನ್ನು ನೀಡುವ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದರು.ಸದಸ್ಯರು ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ ಅವರು ರಾಜ್ಯದಲ್ಲಿ ತೋಟದ ಕಾರ್ಮಿಕರು , ನರೇಗಾ ಕಾರ್ಮಿಕರು ಸೇರಿದಂತೆ ೧೪೪ ವಲಯಗಳ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರನ್ನಾಗಿ ಗುರುತಿಸಿ ಇ- ಶ್ರಮ ಯೋಜನೆ ಅಡಿಯಲ್ಲಿ ನೋಂದಣಿ ಮಾಡಲಾಗುವುದು.ರಾಜ್ಯದಲ್ಲಿ ೧.೬೫ ಕೋಟಿ ಜನರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ದೇಶದಲ್ಲೇ ಅತಿ ಹೆಚ್ಚು ಕಾರ್ಮಿಕರನ್ನು ನೊಂದಾಯಿಸಿದ ಕೀರ್ತಿ ರಾಜ್ಯಕ್ಕೆ ಸಲ್ಲುವಂತೆ ಮಾಡಲಾಗುವುದು ಎಂದರು.

error: