April 24, 2024

Bhavana Tv

Its Your Channel

ಸಪ್ತಕ’ದ ೧೫ನೇ ವಾರ್ಷಿಕೋತ್ಸವ ಸಂಭ್ರಮ; ಸತತ ಮೂರು ಭಾನುವಾರಗಳಂದು ಸಂಗೀತ ಮೆರವಣಿಗೆ

ಬೆಂಗಳೂರು : ಶುದ್ಧ ಶಾಸ್ತ್ರೀಯ ಸಂಗೀತ ಹಾಗೂ ಸಾಂಸ್ಕೃತಿಕ/ಸಾಹಿತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ನಗರದ ಸಪ್ತಕ ಸಂಸ್ಥೆಯು ತನ್ನ ೧೫ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೆಲವು ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಕರೋನಾ ಕಾರಣದಿಂಗಾಗಿ ಸ್ತಬ್ಧವಾಗಿದ್ದ ಸಮೂಹದಲ್ಲಿ ಕಲೆತು ಬೆರೆತು ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ಇದೀಗ ಮರುಚಾಲನೆ ಪಡೆಯುತ್ತಿರುವುದು ಖುಷಿಯ ವಿಷಯವಾಗಿದೆ.

ಇದೇ ಸಂದರ್ಭದಲ್ಲಿ, ಸತತವಾಗಿ ಮೂರು ಭಾನುವಾರಗಳಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಇದೇ ಅಕ್ಟೋಂಬರ್ ೩೧, ನವೆಂಬರ್ ೭ ಮತ್ತು ನವೆಂಬರ್ ೧೪ರಂದು ನಡೆಯಲಿದೆ.

ಮೊದಲಿಗೆ, ೧೫-೧೦-೨೦೨ರ ಸಂಜೆ ನಡೆಯುವ ‘ಸಂಗೀತ ಸಂಭ್ರಮ’ದಲ್ಲಿ ಸಪ್ತಕದ ಸ್ಥಾಪಕರು ಹಾಗೂ ಸಾರಥಿಯೂ ಆದ ಜಿ ಎಸ್ ಹೆಗಡೆ ಅವರು ಕೊರೊನಾ ಸಂಕಷ್ಟ ಕಾಲದಲ್ಲಿ ತಮ್ಮ ನೆನಪಿನ ಸುರುಳಿಯಿಂದ ಬಿಚ್ಚಿದ ಅಕ್ಷರ ಸರಮಾಲೆಯಾದ “ಜೀವನ ಪಥ ನೆನಪಿನ ರಥ” ಪುಸ್ತಕ ಹೊರಬರುತ್ತಿದೆ. ಆ ದಿನ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೆಸರಾಂತ ಕಿರುತೆರೆ ನಿರ್ದೇಶಕರು ಹಾಗೂ ಲೇಖಕರಾದ ಟಿ.ಎನ್.ಸೀತಾರಾಂ ಅವರು ಈ ಪುಸ್ತಕದ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಮಲ್ಲೇಶ್ವರಂ ಕ್ಷೇತ್ರದ ಶಾಸಕರು ಹಾಗೂ ಉನ್ನತ ಶಿಕ್ಷಣ ಮಂತ್ರಿಯವರಾದ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಶ್ರೀ ಮಹಾಬಲೇಶ್ವರ ಎಂ.ಎಸ್, ಎಂ.ಡಿ ಮತ್ತು ಸಿ.ಇ.ಒ. ಕರ್ನಾಟಕ ಬ್ಯಾಂಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಇದೇ ದಿನ, ಪಂಡಿತ ಪ್ರವೀಣ ಗೋಡಖಿಂಡಿ ಅವರ ಕೊಳಲು ಮತ್ತು ಪಂಡಿತ ಜಯತೀರ್ಥ ಮೇವುಂಡಿ ಅವರ ಗಾಯನದ ಜುಗಲ್ ಬಂಧಿ ನಡೆಯಲಿದೆ.

ಎರಡನೆಯದಾಗಿ, ೦೬-೧೧-೨೦೨೧ರಂದು ಮಲ್ಲೇಶ್ವರದ ಹವ್ಯಕ ಸಭಾಭವನದಲ್ಲಿ ‘ಸುಶ್ರಾವ್ಯ ಸಂಜೆ ನಡೆಯುತ್ತದೆ.
ಮುಂಬೈನಲ್ಲಿರುವ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಹಿಂದೂಸ್ತಾನಿ ಗಾಯಕ ಧನಂಜಯ ಹೆಗಡೆ ಅವರು ಸಂಗೀತ ಕಾರ್ಯಕ್ರಮದಲ್ಲಿ (ಸಂಜೆ ೪:೦೦ಕ್ಕೆ ಆರಂಭ) ಶ್ರೋತೃಗಳನ್ನು ರಂಜಿಸಲಿದ್ದಾರೆ.
ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ ಬೆಳಗಾವಿಯ ಹಿರಿಯ ಪತ್ರಕರ್ತರಾದ ಲಕ್ಷ್ಮೀನಾರಾಯಣ ಶಂಭು ಶಾಸ್ತಿç ಮತ್ತು ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ಟ ಅವರನ್ನು ಸನ್ಮಾನಿಸಲಾಗುತ್ತದೆ.

ಇದೇ ವೇಳೆ, ತಾಳಮದ್ದಳೆ ಸುಧನ್ವ ಮೋಕ್ಷವನ್ನು ಕೂಡ ಆಯೋಜಿಸಲಾಗಿದೆ. ದಂತಳಿಗೆ ಅನಂತ ಹೆಗಡೆ ಅವರ ಭಾಗವತಿಕೆ, ಅನಂತ ಪದ್ಮನಾಭ ಪಾಠಕ್, ಪುಣೆ. ಅವರ ಮದ್ದಳೆಯೊಂದಿಗೆ ಇನ್ನಿತರ ಪ್ರಸಿದ್ದ ಯುವ ಅರ್ಥಧಾರಿಗಳು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಮೂರನೆಯದಾಗಿ, ೧೪-೧೧-೨೦೨೧ರಂದು ಮಲ್ಲೇಶ್ವರದ ಕೆನರಾ ಯೂನಿಯನ್‌ನಲ್ಲಿ ನಡೆಯುವ ಸ್ತರ ಸಂಜೆ' ಯಲ್ಲಿ ಹಾನಬಿ ಕಾರ್ತಿಕ್ ಹೆಗಡೆ ಅವರ ಗಾಯನ ಮತ್ತು ಪಂ.ರವೀAದ್ರ ಯಾವಗಲ್ ಹಾಗೂ ವಿದ್ವಾನ್ ಆನೂರ ಅನಂತಕೃಷ್ಣ ಶರ್ಮ ಅವರ 'ತಬಲಾ ಮೃದಂಗ ಜುಗಲ್ ಬಂದಿ ಇರುತ್ತದೆ. ಕಾರ್ಯಕ್ರಮದ ಭಾಗವಾಗಿ ಪಂ.ರವೀAದ್ರ ಯಾವಗಲ್ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಶ್ರೀ ಎಸ್.ರಂಗಪ್ಪ ಅವರುಸಪ್ತಕ ದ ಪರವಾಗಿ ಸನ್ಮಾನಿಸಲಿದ್ದಾರೆ.

ಈ ಮೂರೂ ಕಾರ್ಯಕ್ರಮಗಳಿಗೆ ಪ್ರವೇಶ ಉಚಿತವಾಗಿದ್ದು, ಯಾವುದೇ ಟಿಕೆಟ್ ಆಗಲೀ, ಪ್ರವೇಶ ಧನವಾಗಲೀ ಇರುವುದಿಲ್ಲ.

error: