April 20, 2024

Bhavana Tv

Its Your Channel

ಅಂಚೆ ಕಾರ್ಡಿನಲ್ಲಿ ಕನ್ನಡ ಕೈ ಬರಹ

ಬೆಂಗಳೂರು:- ಭಕ್ತಿ ಕಾವ್ಯ ಯಾನ ಬೆಂಗಳೂರು (ಇದು ರಾಷ್ಟ್ರಮಟ್ಟದಲ್ಲಿ) ಅಂಚೆ ಕಾರ್ಡಿನಲ್ಲಿ ಕನ್ನಡ ಕೈ ಬರಹ
ಎಂಬ ವಿನೂತನ ಸ್ಪರ್ಧೆಯನ್ನು 5,6,7ಮತ್ತು 8,9,10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸುತ್ತಿದೆ.
ಸ್ಪರ್ಧಿಗಳು ಭಕ್ತಿ ಕಾವ್ಯ ಯಾನ ನೀಡಿದ ಕವನದ ಸಾಲುಗಳನ್ನೇ ಅಂಚೆ ಕಾರ್ಡಿನಲ್ಲಿ ಬರೆದು
ಶಾಲಾ ಮುಖ್ಯಸ್ಥರ ಸಹಿ ಮತ್ತು ಶಾಲೆಯ ದೃಢೀಕರಣ ಪತ್ರದೊಂದಿಗೆ ಭಕ್ತಿ ಕಾವ್ಯ ಯಾನದ ಆಯೋಜಕರ ವಿಳಾಸಕ್ಕೆ ಕಳುಹಿಸಬೇಕು.

ಒಂದೇ ಶಾಲೆಯಿಂದ ಹಲವು ಸ್ಪರ್ಧಿಗಳಿದ್ದರೆ ಎಲ್ಲ ಸ್ಪರ್ಧಿಗಳ ಅಂಚೆ ಕಾರ್ಡನ್ನು ಒಂದೇ ಲಕೋಟೆಯಲ್ಲಿಟ್ಟು ಶಾಲಾ ಮುಖ್ಯಸ್ಥರೇ ಕಳುಹಿಸಬಹುದು. ಆದರೆ ಸ್ಪರ್ಧಿಗಳ ಹೆಸರು ಮತ್ತು ವಿಳಾಸ ಹಾಗೂ ದೂರವಾಣಿ ಸಂಖ್ಯೆ ಕಾರ್ಡಿನ ಹಿಂಭಾಗದಲ್ಲಿರಬೇಕು.

5,6,7 ನೇ ತರಗತಿಯ ವಿದ್ಯಾರ್ಥಿಗಳು ಬರೆಯಬೇಕಾದ ಸಾಲುಗಳು:-
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಈ ನಾಲ್ಕು ಸಾಲು ಅಂಚೆ ಕಾರ್ಡಿನ ಮುಂಭಾಗದಲ್ಲಿ ಬರೆದು ಹಿಂಭಾಗದಲ್ಲಿ ಸ್ಪರ್ಧಿ ತನ್ನ ಹೆಸರು ವಿಳಾಸ, ದೂರವಾಣಿ ಸಂಖ್ಯೆಯ ಜೊತೆ ಶಾಲಾ ಮುಖ್ಯಸ್ಥರ ಸಹಿ ಹಾಗೂ ಶಾಲಾ ಮೊಹರು ಇರಬೇಕು.

8,9,10 ನೇ ತರಗತಿಯ ವಿದ್ಯಾರ್ಥಿಗಳು ಬರೆಯಬೇಕಾದ ಸಾಲುಗಳು:-
ದೈವಕೃಪೆಜವನಿಕೆಯಮರೆಗೊಂ
ಡೈವರುಳಿದರು ಮೇಲೆ ಸಾತ್ಯಕಿ
ದೈವದೊಡಹುಟ್ಟಿದನಲೇ ತಾನಿಲ್ಲ‌ ಶಿಬಿರದಲಿ
ದೈವಬಲವಿನಿತಕ್ಕೆ ಕೇಳ್ ನೀ
ರ್ದೈವಬಲನಿಶ್ಶೇಷವಿನಿತೇ
ದೈವವೆತ್ತಿದ ಛಲದ ವಾಸಿಗೆ ರಾಯ ಕೇಳೆಂದ

ಈ ಆರು ಸಾಲುಗಳನ್ನು ಅಂಚೆ ಕಾರ್ಡಿನ ಮುಂಭಾಗದಲ್ಲಿ ಬರೆದು ಹಿಂಭಾಗದಲ್ಲಿ ಸ್ಪರ್ಧಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯ ಜೊತೆ ಶಾಲಾ ಮುಖ್ಯಸ್ಥರ ಸಹಿ ಹಾಗೂ ಶಾಲಾ ಮೊಹರು ಇರಬೇಕು.

ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಿತರಿಗೆ ಸ್ಮರಣಿಕೆ , ಕೃತಿ ಬಹುಮಾನ ಮತ್ತು ಪ್ರಶಂಸಾ ಪತ್ರವನ್ನು ನೀಡಲಾಗುತ್ತದೆ. ನಿರ್ಣಾಯಕರ ಮೆಚ್ಚುಗೆ ಪಡೆದ ಬರಹಗಳಿಗೆ ಪುಸ್ತಕ ಬಹುಮಾನ ಮತ್ತು ಪ್ರಶಂಸಾ ಪತ್ರವನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆವ ಮಕ್ಕಳ ಸಮ್ಮೇಳನದಲ್ಲಿ ನೀಡಲಾಗುತ್ತದೆ.
ಒಂದೇ ಶಾಲೆಯಿಂದ ಹಲವು ಸ್ಪರ್ದಿಗಳು ಭಾಗವಹಿಸಿದರೆ ಆ ಶಾಲೆಗೆ ಉತ್ತಮ ಪ್ರೋತ್ಸಾಹಕ ಶಾಲೆ ಎಂಬ ಪ್ರಶಸ್ತಿಯನ್ನು ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.

ಬರಹ ತಲುಪಲು ಕೊನೆಯ ದಿನಾಂಕ:- 8/3/2022
ಸ್ಪರ್ಧಿಗಳು ಕಳುಹಿಸಬೇಕಾದ ವಿಳಾಸ
ಜಯಶ್ರೀ ರಾಜು 822, 5ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಎಂ.ಸಿ.ಬಡಾವಣೆ, ವಿಜಯನಗರ,
ಬೆಂಗಳೂರು- 560040

ಹೆಚ್ಚಿನ ಮಾಹಿತಿಗಾಗಿ 7411201233 ನಂಬರ್ ಗೆ ಸಂಪರ್ಕಿಸಲು ಸಂಘಟಕರು ಕೋರಿದ್ದಾರೆ.

error: