April 23, 2024

Bhavana Tv

Its Your Channel

ಕಲಾದ್ಯಾನ ಆರ್ಟ್ ಗ್ಯಾಲರಿ ಬೆಂಗಳೂರು ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಅನೇಕ ಕಲಾವಿದ್ಯಾರ್ಥಿಗಳ ಕಲಾ ಪ್ರದರ್ಶನ

ಬೆಂಗಳೂರು: ಭಟ್ಕಳ ತೆರ್ನಮಕಿ ನಿವಾಸಿ ಆದ ಪ್ರಖ್ಯಾತ ಕಲಾವಿದರು ಆದ ಉಮೇಶ್ ನಾಯ್ಕ ಅವರ ಕನಸಿನ ಕೂಸು ಆದ ಅನೇಕ ಕಲಾ ಚಟುವಟಿಕೆಗಳಿಗೆ ಮಾದರಿಯಾದಗಿದ ಕಲಾದ್ಯಾನ ಆರ್ಟ್ ಗ್ಯಾಲರಿ ಬೆಂಗಳೂರು ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಅನೇಕ ಕಲಾವಿಧ್ಯಾರ್ಥಿಗಳ ಕಲಾ ಪ್ರದರ್ಶನವನ್ನು ನಡೆಯಿತು.
ಕಾರ್ಯವನ್ನು ಕರ್ನಾಟಕದ ಶ್ರೇಷ್ಠ ಕಲಾವಿದರಾದ ಚಂದ್ರನಾಥ ಆಚಾರ್ಯ ಉದ್ಘಾಟಿಸಿದರು.
ನಂತರ ಮಾತನಾಡಿ ಅವರು ಆರ್ಟ್ ಗ್ಯಾಲರಿಯನ್ನು ಉತ್ತಮ ರೀತಿಯಲ್ಲಿ ಉಮೇಶ್ ನಾಯ್ಕ ಅವರು ನಡೆಸುತ್ತಿದ್ದು ಕರ್ನಾಟಕದ ಉತ್ತಮ ಕಲಾಶಾಲೆಯಲ್ಲಿ ಕಲಾದ್ಯಾನ ಆರ್ಟ್ ಗ್ಯಾಲರಿ ಒಂದಾಗಿದೆ.೧೫ಜನ ಕಲಾವಿದರ ಕಲಾ ಕೃತಿಗಳು ಉತ್ತಮವಾಗಿ ಮೂಡಿ ಬಂದಿದೆ


ಕಲಾವಿದರ ಕಲಾಕೃತಿಗಳು ಉತ್ತಮವಾಗಿ ಮೂಡಿಬಂದಿದೆ ಉಮೇಶ್ ನಾಯ್ಕ ಅವರು ಕಾಶ್ಮೀರಿ ಪೈರ್ ಕಲಾಕೃತಿಯ ಉತ್ತಮವಾಗಿ ಮೂಡಿಬಂದಿದೆ ರುದ್ರಾಕ್ಷಿ  ಮಾಲೆ ಬೀಳುತ್ತಿರುವ ದೃಶ್ಯ ಉತ್ತಮವಾಗಿ ಕಲಾಕೃತಿಯಲ್ಲಿ ಸೆರೆಯಾಗಿದೆ ಹೀಗೆ ಸಾವಿರಾರು ಕಲಾವಿದರು ಬೆಳಕಿಗೆ ಬರಲಿ ಎಂದು ಹಾರೈಸಿದರು.
ಕಾರ್ಯಕ್ರಮ ಮುಖ್ಯ ಅತಿಥಿಗಳಾದ ಗಣಪತಿ ಹೆಗ್ಡೆ ಮಾತನಾಡಿ ಕಲಾವಿದರಾಗುವವರಿಗೆ ಕಲಾಜ್ಞಾನ ಆರ್ಟ್ ಗ್ಯಾಲರಿ ಉತ್ತಮ ಎಂದರು.ಕಲಾ ಪ್ರದರ್ಶನದಲ್ಲಿ ಅನೇಕ ಕಲಾವಿದರು ಆಗಮಿಸಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ನಾಡಿನ ಕಲಾವಿದರಾದ ಎ ಎನ್ ಪ್ರಕಾಶ್, ಶಂಕರ್ ಕಡಲ್ ಕುಂಟ್ಲಾ, ರವಿ ಎಸ್ ಕೋಟೆಗದ್ದೆ,ಹಾಗೂ ಬೆಂಗಳೂರಿನ ಅನೇಕ ಕಲಾವಿದರು ಸೇರಿದಂತೆ ಮುಂತಾದವರು
ಉಪಸ್ಥಿತರಿದ್ದರು.

error: