April 16, 2024

Bhavana Tv

Its Your Channel

ವಿ. ಕೃ. ಗೋಕಾಕರ ಜೀವನ ಮತ್ತು ಸಾಹಿತ್ಯದ ಬಗೆಗೆ ಉಪನ್ಯಾಸ ಕಾರ್ಯಕ್ರಮ

ಲೇಖಕಿ ಡಾ. ಸಂಧ್ಯಾ ಹೆಗಡೆ ದೊಡ್ಡಹೊಂಡ ಅವರಿಂದ ‘ಗೋಕಾಕರ ಕಾದಂಬರಿಗಳು ಮತ್ತು ಸೃಜನಶೀಲತೆ’ ಎಂಬ ವಿಷಯದ ಕುರಿತು ಉಪನ್ಯಾಸ.

ಬೆಂಗಳೂರು ; ದಿನಾಂಕ 23/04/2023 ಭಾನುವಾರದಂದು ಆರ್. ಟಿ. ನಗರ ಬೆಂಗಳೂರಿನಲ್ಲಿ ಶಿವರಾಮ ಕಾರಂತ ವೇದಿಕೆ ಮತ್ತು ವಿ. ಕೃ. ಗೋಕಾಕ್ ವಾಙ್ಮಯ ಟ್ರಸ್ಟ್’ನ ಸಹಯೋಗದಲ್ಲಿ ವಿ. ಕೃ. ಗೋಕಾಕರ ಜೀವನ ಮತ್ತು ಸಾಹಿತ್ಯದ ಬಗೆಗೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿ. ಕೃ. ಗೋಕಾಕರ ಪುತ್ರ ನಿವೃತ್ತ ಐಎಎಸ್ ಅಧಿಕಾರಿಗಳಾದ ಅನಿಲ್ ಗೋಕಾಕ್ ಅವರು ತಮ್ಮ ತಂದೆಯ ಜೀವನ ಮತ್ತು ಆದರ್ಶಗಳ ಬಗ್ಗೆ ಅರ್ಥಪೂರ್ಣವಾಗಿ ಹಾಗೂ ಭಾವಪೂರ್ಣವಾಗಿ ಮಾತನಾಡಿದರು. ಲೇಖಕಿ ಡಾ. ಸಂಧ್ಯಾ ಹೆಗಡೆ ದೊಡ್ಡಹೊಂಡ ಅವರು ‘ಗೋಕಾಕರ ಕಾದಂಬರಿಗಳು ಮತ್ತು ಸೃಜನಶೀಲತೆ’ ಎಂಬ ವಿಷಯದ ಕುರಿತು ನಲವತ್ತೈದು ನಿಮಿಷಗಳ ಕಾಲ ನೀಡಿದ ಉಪನ್ಯಾಸ ಸಹೃದಯರ ಮನ ತಣಿಸಿತು. ಅವರು ಮಾತನಾಡಿ ಗೋಕಾಕರ ಕಾದಂಬರಿಗಳೆAದರೆ ಅಪಾರ ಅನುಭವದ ಲೋಕ, ಒಬ್ಬ ವ್ಯಕ್ತಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಿಭಿನ್ನ ರೀತಿಯ ಪಾತ್ರಗಳನ್ನು ಸೃಷ್ಟಿಸಿಸಲು ಸಾಧ್ಯವೇ ಎಂಬಷ್ಟು ಆಶ್ಚರ್ಯ ಹುಟ್ಟಿಸುತ್ತವೆ. ಹತ್ತು ಪಿಹೆಚ್. ಡಿ. ಆಗುವಷ್ಟು ಸಾಮಗ್ರಿಗಳು ಇದರಲ್ಲಿವೆ. ಓದುಗರಿಗೆ ಓದುವ ಸರ್ವ ಸುಖವನ್ನೂ ಕೊಡಬಲ್ಲ ಇಂತಹ ಕೃತಿಗಳನ್ನು ಕೊಟ್ಟಿರುವುದಕ್ಕೆ ಕನ್ನಡ ಜನತೆ ಕೃತಜ್ಞರಾಗಿರಬೇಕು, ಮತ್ತು ಅವರ ಕಾದಂಬರಿಗಳನ್ನು ಮರು ಓದಿಗೆ ದಕ್ಕಿಸಿಕೊಳ್ಳುವ ಅವಕಾಶ ಕಲ್ಪಿಸಿಕೊಳ್ಳಬೇಕಾಗಿದೆ’ ಎಂದರು. ಶ್ರೀಮತಿ ದೀಪಾ ಫಡ್ಕೆ ಅಧ್ಯಕ್ಷತೆ ವಹಿಸಿ ‘ಕನ್ನಡ ಜನತೆಯ ಮೇಲೆ ಗೋಕಾಕ್ ಅವರ ಋಣಭಾರವಿದೆ’ ಎಂದರು. ಈ ಸಂದರ್ಭದಲ್ಲಿ ಚಂದ್ರಶೇಖರ ಚಡಗ ಅವರು ಅಗಲಿದ ವಿಜ್ಞಾನಿ, ಲೇಖಕ ಸಿ. ಎಸ್. ಸತ್ಯ ಅವರನ್ನು ನೆನೆಸಿಕೊಂಡು ಶೃದ್ಧಾಂಜಲಿ ಅರ್ಪಿಸಿದರು. ಅಭಿನವದ ನ. ರವಿಕುಮಾರ್ ಅವರು ಸ್ವಾಗತಿಸಿದರು. ಶಿವಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.

error: