April 24, 2024

Bhavana Tv

Its Your Channel

ಕರೋನಾಗೆ ಇಂದು ಶುಕ್ರದೆಸೆ: ಮಧ್ಯಾಹ್ನದ ಹೆಲ್ತ್ ಬುಲೆಟಿನ್ ನಲ್ಲೇ ಕೊರೊನಾ ಶಾಕ್, ಇಂದು ಒಂದೇ ದಿನ ೧೭೮ ಸೋಂಕು ಪ್ರಕರಣ ಪತ್ತೆ

ಬೆಂಗಳೂರು : ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕರೋನಾ ಆರ್ಭಟ ಮುಂದುವರೆದಿದ್ದು ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ದ್ವೀಶತಕದ ಸಮೀಪ ಬಂದಿದೆ. ರಾಜ್ಯದಲ್ಲಿ ಇಂದು ಮಧ್ಯಾಹ್ನದ ಹೆಲ್ತ ಬುಲೆಟಿನ್‌ನಲ್ಲಿ ೧೭೮ ಜನರಿಗೆ ಹೊಸ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೨೭೧೧ಕ್ಕೆ ಏರಿಕೆಯಾಗಿದೆ. ಇವರಲ್ಲಿ ೮೬೯ ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ ೧೭೯೩ ಆಗಿದೆ.
ರಾಯಚೂರು ನಿವಾಸಿಗಳಿಗೆ ಬಿಗ್ ಶಾಕ್.
ಇಂದು ಕರೋನಾ ಆರ್ಭಟ ರಾಯಚೂರು ನಿವಾಸಿಗಳ ಬಿಗ್ ಶಾಕ್ ನೀಡಿದ್ದು ಮಧ್ಯಾಹ್ನದ ವೇಳೆಗೆ ಅರ್ಧ ಶತಕದಾಟಿದೆ. ಜಿಲ್ಲಾವಾರು ಹೊಸ ಸೊಂಕಿತರ ಪಟ್ಟಿ ಈ ರೀತಿ ಇದೆ. ರಾಯಚೂರು – ೬೨, ಉಡುಪಿ – ೧೫, ಬೆಂಗಳೂರು ನಗರ – ೧೦, ಬೆಂಗಳೂರು ಗ್ರಾಮಂತರ – ೧, ಮಂಡ್ಯ-೦೨, ಶಿವಮೊಗ್ಗ -೦೧, ಮೈಸೂರು -೦೨, ದಾವಣಗೆರೆ -೦೪, ಯಾದಗರಿ-೬೦, ಧಾರವಾಡ-೦೧, ಚಿಕ್ಕಬಳ್ಳಾಪುರ- ೦೪, ಚಿತ್ರದುರ್ಗ-೦೧, ಕಲಬುರ್ಗಿ-೧೫ ಮತ್ತು ಕೊರೋನಾ ಸೋಂಕು ತಗಲುವ ಮೂಲಕ ಇಂದು ೧೭೮ ಜನರಿಗೆ ಕೊರೋನಾ ದೃಢಪಟ್ಟಿದೆ. ಅಲ್ಲದೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೨೭೧೧ಕ್ಕೆ ಏರಿಕೆಯಾದ್ರೇ, ೮೬೯ ಜನ ಕೊರೋನಾ ಸೋಂಕಿತರು ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತ ಸಕ್ರೀಯ ಸೊಂಕಿತರ ಸಂಖ್ಯೆ ೧೬೫೦ ಆಗಿದೆ.

error: