April 25, 2024

Bhavana Tv

Its Your Channel

ರಾಜ್ಯದಲ್ಲಿ ೩ ಸಾವಿರ ಗಡಿಯತ್ತಾ ಸಾಗಿದ ಕೊರೋನಾ ಸಂಖ್ಯೆ; ಕೊರೋನಾ ರಣಕೇಕೆ ಇಂದು ೧೪೧ ಮಂದಿಯಲ್ಲಿ ಸೋಂಕು ದೃಢ

ಬೆಂಗಳೂರು; ರಾಜ್ಯದಲ್ಲಿ ಒಂದೇ ದಿನ ಮತ್ತೆ ೧೪೧ ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ ೨,೯೨೨ಕ್ಕೆ ಏರಿಕೆಯಾಗಿದೆ. ಬೀದರ್ ಜಿಲ್ಲೆಯಲ್ಲಿ ಕೊರೋನದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ ೪೯ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ೧೪೧ ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ. ಕಳೆದ ಕೆಲ ದಿನದಿಂದ ನೂರಕ್ಕಿಂತ ಅಧಿಕ ಜನರನ್ನ ಟಾರ್ಗೆಟ್ ಮಾಡಿ ತನ್ನ ವಿಕೃತಿ ಮೆರೆಯುತ್ತಿರುವ ಕ್ರೂರಿ ಕೊರೋನಾ ಇಂದು ರಾಜ್ಯದಲ್ಲಿ ಒಟ್ಟು ೧೪೧ ಮಂದಿಯಲ್ಲಿ ಕಾಣಿಸಿಕೊಂಡಿದೆ. ಇಂದು ದಾಖಲಾದ ಸೋಂಕಿತರ ಜಿಲ್ಲಾವಾರು ಪಟ್ಟಿಯಲ್ಲಿ ಯಾದಗಿರಿ ೧೮ ,ಬೀದರ್ ೧೦, ಬಾಗಲಕೋಟೆ ೩, ಕೋಲಾರ ೫, ಉಡುಪಿ ೧೩ ,ದಕ್ಷಿಣ ಕನ್ನಡ ೧೪, ಬೆಂಗಳೂರು ೩೩, ವಿಜಯಪುರ ೧೧, ಹಾಸನ ೧೩, ಶಿವವೊಗ್ಗ ೪,ದಾವಣಗೆರೆ ೪,ಉತ್ತರ ಕನ್ನಡ ೨,ಮೈಸೂರು ೨,ಕಲಬುರಗಿ ೨, ಚಿತ್ರದುರ್ಗ ೧,ಬೆಳಗಾವಿ ೧, ತುಮಕೂರು ೧, ಬೆಂಗಳೂರು ಗ್ರಾಮಾಂತರ ೧, ಹಾವೇರಿ ೪,ಧಾರವಾಡ ೨ ಸೋಂಕು ದೃಢಪಟ್ಟಿದೆ
ಒಟ್ಟಾರೆ ರಾಜ್ಯದಲ್ಲಿ ೨,೯೨೨ ಕೊರೋನ ಸೋಂಕಿತರ ಪೈಕಿ ೯೯೭ ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ ೧೦೩ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ ೪೯ ಮಂದಿ ಸೋಂಕಿನಿ0ದ ಸಾವನ್ನಪ್ಪಿದ್ದು, ೧೮೭೪ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

error: