April 25, 2024

Bhavana Tv

Its Your Channel

ಬೆಂಗಳೂರು ಪೊಲೀಸರ ಕಾರ್ಯಾಚರಣೆ; ಒಡಿಶಾದಿಂದ ಬರುತ್ತಿದ್ದ ಡ್ರಗ್ಸ್. ರಹಸ್ಯ ಗುಂಡಿಯಲ್ಲಿ 13.50 ಕ್ವಿಂಟಲ್ ಗಾಂಜಾ!

ಬೆಂಗಳೂರು: ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಬೆಂಗಳೂರು ಪೊಲೀಸರು, ಪ್ರಕರಣವೊಂದರ ಬೆನ್ನುಬಿದ್ದು ಕಲಬುರ್ಗಿಯ ಕುರಿ ಸಾಕಾಣಿಕಾ ಕೇಂದ್ರದ (ಫಾರ್ಮ್‌) ರಹಸ್ಯ ಗುಂಡಿಯಲ್ಲಿ ಬಚ್ಚಿಟ್ಟಿದ್ದ 13.50 ಕ್ವಿಂಟಲ್ 300 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಗುರುವಾರ ನಾಲ್ವರನ್ನು ಬಂಧಿಸಿದ್ದಾರೆ.

ಗಾಯತ್ರಿನಗರದ ಜ್ಞಾನಶೇಖರ್ (37), ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸಿದ್ದುನಾಥ್ ಲಾವಟೆ (22), ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ನಾಗನಾಥ್ (39) ಹಾಗೂ ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಚಂದ್ರಕಾಂತ್ (34) ಬಂಧಿತರು.

‘ಆಟೊ ಚಾಲಕ ಜ್ಞಾನಶೇಖರ್, ಶೇಷಾದ್ರಿಪುರದ ವಿ.ವಿ. ಗಿರಿ ಕಾಲೊನಿಯ ಮೈದಾನದಲ್ಲಿ ಇತ್ತೀಚೆಗೆ ಗಾಂಜಾ ಮಾರುತ್ತಿದ್ದ. ಆತ ನನ್ನು ಬಂಧಿಸಿ 2 ಕೆ.ಜಿ 100 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿತ್ತು. ಆತ ನೀಡಿದ್ದ ಮಾಹಿತಿಯಿಂದಲೇ ಗಾಂಜಾ ಮಾರಾಟ ಜಾಲ ಪತ್ತೆ ಮಾಡಲಾಗಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದರು.

ಕಾದು ಹಿಡಿದ ಪೊಲೀಸರು: ‘ಬೆಂಗಳೂರಿ ನಲ್ಲಿ ಕೆಲ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಜ್ಞಾನಶೇಖರ್, ಮತ್ತೊಬ್ಬ ಆರೋಪಿ ಸಿದ್ದುನಾಥ್ ಲಾವಟೆ ಎಂಬಾತನ ಬಳಿ ಗಾಂಜಾ ಖರೀದಿಸಿ ತರುತ್ತಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಇನ್‌ಸ್ಪೆಕ್ಟರ್‌ ಎಂ.ಎಲ್.ಕೃಷ್ಣಮೂರ್ತಿ ನೇತೃತ್ವದ ತಂಡ, ಸೆ. 6ರಂದು ಮಾದ
ನಾಯಕನಹಳ್ಳಿ ಬಳಿ ಸಿದ್ದುನಾಥ್‌ನನ್ನು ಬಂಧಿಸಿತ್ತು’ ಎಂದು ಅನುಚೇತ್‌ ಹೇಳಿದರು.

error: