April 19, 2024

Bhavana Tv

Its Your Channel

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ: ಮೇ.24ರಿಂದ ಪರೀಕ್ಷೆ ಆರಂಭ

ಬೆಂಗಳೂರು; ನಿನ್ನೆಯಷ್ಟೇ ಎಸ್​ಎಸ್​ಎಲ್​ಸಿ ಪರೀಕ್ಷಾ ದಿನಾಂಕ ಪ್ರಕಟಿಸಿದ್ದ ಶಿಕ್ಷಣ ಇಲಾಖೆ ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ. 2020 – 21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ಪಟ್ಟಿ ಪ್ರಕಟಿಸಲಾಗಿದ್ದು, ಮೇ 24 ರಿಂದ ಜೂನ್ 10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ನೆನ್ನೆ ಸುದ್ದಿಗೋಷ್ಠಿ ನಡೆಸಿದ್ದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಎಸ್​ಎಸ್​ಎಲ್​ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದ್ದರು. ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದ್ದಾರೆ.

ಪಿಯುಸಿ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ:-

  • ಮೇ 24 -ಭೌತಶಾಸ್ತ್ರ, ಇತಿಹಾಸ
  • ಮೇ 26- ಮೈನಾರಿಟಿ ಲ್ಯಾಂಗ್ವೇಜಸ್
  • ಮೇ 26 – ಲಾಜಿಕ್, ಹೋಮ್​ ಸೈನ್ಸ್, ಗಣಿತ
  • ಮೇ 27 – ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಮ್ಯಾಥ್ಸ್
  • ಮೇ 28 – ಉರ್ದು ಮತ್ತು ಸಂಸ್ಕೃತ
  • ಮೇ 29 – ಪೊಲಿಟಿಕಲ್​ ಸೈನ್ಸ್
  • ಜೂನ್​ 1- ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ
  • ಜೂನ್​ 3 – ಹಿಂದಿ
  • ಜೂ.4 – ಅರ್ಥಶಾಸ್ತ್ರ
  • ಜೂನ್​ 5 – ಕನ್ನಡ
  • ಜೂನ್​ 7 – ಇಂಗ್ಲಿಷ್
  • ಜೂನ್​ 8 – ಬ್ಯೂಟಿ ಮತ್ತು ವೆಲ್​ನೆಸ್​
  • ಜೂ.9 – ಸಮಾಜಶಾಸ್ತ್ರ
  • ಜೂನ್ 10- ಜಿಯೋಗ್ರಫಿ
error: