April 25, 2024

Bhavana Tv

Its Your Channel

ಚಿನ್ನಗಿರವಿ ಇಟ್ಟು ಸಾಲ ಪಡೆದವರಿಗೆ ಗುಡ್ ನ್ಯೂಸ್ ..!!

ಬೆಂಗಳೂರು : ಚಿನ್ನಾಭರಣಗಳನ್ನು ಗಿರವಿ ಇಟ್ಟು ಸಾಲ ಪಡೆದ ರಾಜ್ಯ ಆಭರಣ ವರ್ತಕರ ಒಕ್ಕೂಟ ಗುಡ್ ನ್ಯೂಸ್ ನೀಡಲು ಮುಂದಾಗಿದ್ದು, ಎರಡರಿಂದ ಮೂರು ತಿಂಗಳ ಬಡ್ಡಿ ಮನ್ನಾ ಮಾಡಲು ಚಿಂತನೆ ನಡೆಸಿದೆ.


ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ೧ ಗ್ರಾಂ ಚಿನ್ನಕ್ಕೆ ಶೇ. ೭೫ ಸಾಲ ನೀಡಲಾಗುತ್ತದೆ. ವರ್ಷಕ್ಕೆ ಶೇ. ೮.೫ ರಿಂದ ಶೇ. ೧೪ ರವರೆಗೆ ಬಡ್ಡಿಯನ್ನು ಗ್ರಾಹಕ ರಿಂದ ವಸೂಲಿ ಮಾಡಲಾಗುತ್ತಿದೆ. ಇದೀಗ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡ್ಡಿ ಮನ್ನಾ ಮಾಡುವ ಮೂಲಕ ಗ್ರಾಹಕರ ಮೇಲಿನ ಹೊರೆಯನ್ನು ಸ್ವಲ್ಪ ಪ್ರಮಾಣ ದಲ್ಲಿ ತಗ್ಗಿಸಲು ಒಕ್ಕೂಟ ಮುಂದಾಗಿದೆ.ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ವಿವಿಧ ಕಾರಣಕ್ಕಾಗಿ ಚಿನ್ನಾಭರಣಗಳ ಅಂಗಡಿಗಳಲ್ಲಿ ಚಿನ್ನದ ಮೇಲೆ ಸಾಲ ಪಡೆದುಕೊಂಡಿದ್ದಾರೆ. ರಾಜ್ಯ ಆಭರಣ ವರ್ತಕರ ಸಂಘ ಈಗಾಗಲೇ ಚಿಂತನೆಯನ್ನು ನಡೆಸಿದ್ದು ಶೀಘ್ರದಲ್ಲಿಯೇ ನಿರ್ಧಾರ ಪ್ರಕಟಿಸಲಿದೆ ಎಂದು ಒಕ್ಕೂಟ ತಿಳಿಸಿದೆ.

error: