March 29, 2024

Bhavana Tv

Its Your Channel

ಕಾಗವಾಡ ಮತ ಕ್ಷೇತ್ರದ ಶಾಸಕ ಜವಳಿ ಸಚಿವ ಶ್ರೀಮಂತ ಪಾಟೀಲ, ಸಂಸದ ಅಣ್ಣಾಸಾಬ ಜೊಲ್ಲೆ ಪತ್ರಿಕಾ ಮಾದ್ಯಮದಲ್ಲಿ ಪ್ರಚಾರಕ್ಕೆ ಮಾತ್ರ ಸೀಮಿತ-ಕಾಂಗ್ರೇಸ್ ಆರೋಪ

ಅಥಣಿ : ಮಹಾಮಾರಿ ಕರೋನ ದಲ್ಲಿ ಸಿಲುಕಿ ಬಡಜನ ಪರಿಸ್ಥಿತಿ ಗಂಭೀರತೆ ಪಡೆಯುತ್ತಿದ್ದಾರೆ ಆದರೆ ಕಾಗವಾಡ ಮತ ಕ್ಷೇತ್ರದ ಶಾಸಕರು ಜವಳಿ ಸಚಿವರಾದ ಶ್ರೀಮಂತ ಪಾಟೀಲರು ಈ ಭಾಗದ ಸಂಸದರಾದ ಅಣ್ಣಾಸಾಬ ಜೊಲ್ಲೆ ಅವರು ಪತ್ರಿಕಾ ಮಾದ್ಯಮದಲ್ಲಿ ಪ್ರಚಾರಕ್ಕೆ ಸೀಮಿತರಾಗಿ ಅಧಿಕಾರಿಗಳ ಸಭೆಯಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ .

ಮಾಧ್ಯಮದ ಜೊತೆ ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ಮಾತನಾಡಿ ಎಲ್ಲಾ ಕ್ಷೇತ್ರದಲ್ಲಿ ಶಾಸಕರು ಸಂಸದರು ಬಡ ಜನರಿಗೆ ಆಹಾರ ಧಾನ್ಯ ಹಂಚಿಕೆ ಮಾಡುತಿದ್ದಾರೆ ನಮ್ಮ ಕಾಗವಾಡ ಕ್ಷೇತ್ರದ ಇಬ್ಬರು ಪ್ರತಿನಿಧಿಗಳು ಇದ್ದರು ಜನರಿಗೆ ಆಹಾರ ಕಿಟ್ಟ ಹಂಚುವದು ಅಷ್ಟೆ ಅಲ್ಲಾ ಜನರು ಇದ್ದಾರೆ ಇಲ್ಲಾ ಅನ್ನುವದು ನೋಡುವ ಮಾನವೀಯತೆ ದೃಷ್ಟಿ ಇವರಲ್ಲಿ ಇಲ್ಲಾ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅಥಣಿ ಮತಕ್ಷೇತ್ರದಲ್ಲಿ ಸುಮಾರು ಒಂದು ತಿಂಗಳಿನಿAದ ಬಡ ಜನರಿಗೆ ಆಹಾರ ಧಾನ್ಯ ಹಂಚಿಕೆಯನ್ನು ಮಾಡುತ್ತಿರುವ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರ ಸೇವೆಯನ್ನು ನೋಡಿ ಕಾಗವಾಡ ಮತಕ್ಷೇತ್ರದ ಶಾಸಕರಾದ ಶ್ರೀಮಂತ ಪಾಟೀಲ ನಾಚಿಕೆ ಪಡಬೇಕು ಎಂದು ಹೇಳಿದರು.

ಈ ಕ್ಷೇತ್ರದ ಬಡ ಜನರಿಗೆ ಹಂಚಲು ಇವರ ಹತ್ತಿರ ಹಣ ಇಲ್ಲಾ ಜನರಗಿಂತ ಇವರೆ ಬಡವರು ಆಗಿದ್ದರೆ ಕೇವಲ ಚುನಾವಣೆಯಲ್ಲಿ ಹಣ ಹಂಚಿಕೆಯಲ್ಲಿ ಶ್ರೀಮಂತಿಕೆ ತೋರಿಸುತ್ತಾರೆ ಆದರೆ ಅತಿವೃಷ್ಟಿ ಅನಾವೃಷ್ಟಿ ಕರೋನ್ ದಂತ ಸಂಕಷ್ಟದಲ್ಲಿ ಸಿಲಿಕಿರುವ ಜನರಿಗೆ ಸಹಾಯ ಮಾಡಲು ಅಸಮರ್ಥ ಇದ್ದಾರೆ ಎಲ್ಲಾ ಜನರು ಇವರಿಗೆ ಆಹಾರ ಕಿಟ್ಟ ಒದಗಿಸುವದು ಅನಿವಾರ್ಯತೆ ಒದಗಿದೆ ಎಂದು ಕಿಡಿ ಕಾರಿದ್ದಾರೆ.

ಬಡ ಜನರಿಗೆ ಹಂಚಿಕೆ ಮಾಡಲು ಆಗದಿದ್ದರೂ ಸರಕಾರ ನಮ್ಮ ರಕ್ಷಣೆಗಾಗಿ ದುಡಿಯುತ್ತಿರುವ ಪೊಲೀಸ್ ಸಿಬ್ಬಂದಿ ,ಪತ್ರಿಕಾ ಮಾಧ್ಯಮದವರಿಗೆ ,ಆಶಾ ಕಾರ್ಯಕರ್ತರಿಗೆ ,ಅಂಗನವಾಡಿ ಕಾರ್ಯಕರ್ತರಿಗೆ ,ಅರೋಗ್ಯ ಇಲಾಖೆ ,ಗ್ರಾಮ ಪಂಚಾಯತ ಇಲಾಖೆ ಹಾಗೂ ಇನ್ನುಳಿದ ಇಲಾಖೆಯ ಸಿಬ್ಬಂದಿಗಳಿಗೆ ಸಹಾಯ ಸಹಕಾರ ಜೊತೆ ಆಹಾರ ಧಾನ್ಯ ವನ್ನು ಒದಗಿಸಿ ಮಾನವೀಯತೆ ಆದರೂ ಮೆರೆಯಿರಿ ಎಂದು ಒತ್ತಾಯಿಸಿದ್ದಾರೆ .

ಈ ಸಂದರ್ಭದಲ್ಲಿ ಮುಖಂಡರಾದ ಗ್ರಾಮ ಪಂಚಾಯತ ಸದಸ್ಯ ಸಂತೋಷ ಕಲ್ಲೋತ್ತಿ , ನಾಯ್ಕುಬಾ ಶಿಂದೆ,ಸಿದರಾಯ ತೋಡಕರ,ಅಸ್ಲಾಂ ಮುಲ್ಲಾ ,ವಿಷ್ಣು ಕಾಂಬಳೆ ,ವಿಶ್ವನಾಥ ಭಂಡಾರೆ ,ಉದಯ ಅವಳೆ,ಪಂಡರಿನಾಥ ಭಂಡಾರೆ ,ಸಿದ್ದುಬಾ ಭಂಡಾರೆ ,ಅಮರ ಗಾಡಿವಡ್ಡರ ಮುಂತಾದವರು ಉಪಸ್ಥಿತರಿದ್ದರು
ವರದಿ ; ಮಹೇಶ ಶರ್ಮಾ, ಬೆಳಗಾವಿ

error: