March 28, 2024

Bhavana Tv

Its Your Channel

5 ಆಸ್ಪತ್ರೆಗಳಿಗೆ ನೋಟಿಸು ಕೊಟ್ಟ ತಾಲೂಕಾ ವೈದ್ಯಾಧಿಕಾರಿ.

ಅಥಣಿ : ಖಾಸಗಿ ವಾಹಿನಿಯು ಪ್ರಕಟಿಸಿದ ಖಾಸಗಿ ಆಸ್ಪತ್ರೆಗಳಿಂದ ರೋಗದ ಭೀತಿಯಲ್ಲಿ ಅಥಣಿ ಜನರು..! ಎಂಬ ಸುದ್ದಿ ನೋಡಿ ತಾಲೂಕಾ ವೈದ್ಯಾಧಿಕಾರಿ ಡಾ ಬಸಗೌಡ ಕಾಗೆ ಅವರು ಅಥಣಿ ತಾಲೂಕಿನ ಕೊಕಟನೂರು ಗ್ರಾಮಕ್ಕೆ ಭೇಟಿ ನೀಡಿ ಎಲ್ಲೆಂದರಲ್ಲಿ ಬೀಸಾಡಿದ್ದ ಆಸ್ಪತ್ರೆಯ ತ್ಯಾಜ್ಯವನ್ನು ನೋಡಿ ಗ್ರಾಮದ ಐದು ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಅವರಿಂದ ಮಾಹಿತಿ ಕೇಳಿರುವ ಘಟನೆ ಜರುಗಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಮಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಕೊಕಟನೂರ ಗ್ರಾಮದ ಸರ್ಕಾರಿ ಪದವಿ ಮಹಾವಿದ್ಯಾಲಯ, ಸರ್ವೆ ನಂಬರ 410 ರಲ್ಲಿ ಬೇಕಾಬಿಟ್ಟಿಯಾಗಿ ಬೀಸಾಕಿದ್ದ, ಸರಿಯಾಗಿ ನಿರ್ವಹಣೆ ಮಾಡದ ಆಸ್ಪತ್ರೆಯ ತ್ಯಾಜ್ಯವನ್ನು ಗಮನಿಸಲಾಗಿ ಅದು ಖಾಸಗಿ ಆಸ್ಪತ್ರೆಯಿಂದ ಬಂದಿರುವುದು ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ, ಅದರಿಂದ ಇಲ್ಲಿನ 5 ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಬಯೋಮೇಡಿಕಲ್ ವೇಸ್ಟ್ ಮ್ಯಾನೇಜಮೆಂಟ್ ಅವರ ದಾಖಲಾತಿಯನ್ನು ತಂದುಕೊಡಲು ಅವರಿಗೆ ನೋಟಿಸು ಕೊಟ್ಟಿದ್ದೆನೆ. ಜೊತೆಗೆ ಅಲ್ಲಿನ ಇತರೆ ನ್ಯೂನ್ಯತೆಗಳನ್ನು ಆದಷ್ಟು ಬೇಗನೆ ಸರಿಪಡಿಸಿಕೊಳ್ಳಲು ತಿಳಿಸಿದ್ದೆನೆ. ಅವರಿಗೆ ನೋಟಿಸು ಕೊಟ್ಟಿದ್ದು ಅದರ ಮೂಲಕ ನಾವು ಉತ್ತರ ಪಡೆದುಕೊಂಡು ಮುಂದಿನ ಕ್ರಮ ಜರುಗಿಸುತ್ತೆವೆ, ಹೀಗೆ ತಾಲೂಕಿನಾದ್ಯಂತ ನಾವು ಎಲ್ಲ ಆಸ್ಪತ್ರೆಗಳನ್ನು ಪರಿಶೀಲನೆ ಮಾಡ್ತೀವಿ ಹಾಗೂ ಅವರಿಗೆ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ತೀವಿ ಎಂದು ಹೇಳಿದರು.
ತಾಲೂಕ ಅಧಿಕಾರಿಗಳು ಹೇಳಿದಂತೆ ತಾಲೂಕಿನ ಆಸ್ಪತ್ರೆ ಮತ್ತು ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ರೋಗಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ಸಿಗುತ್ತದೆಯೊ ಕಾದು ನೋಡಬೇಕು.

ವರದಿ: ಮಹೇಶ ಶರ್ಮ ಅಥಣಿ

error: