March 28, 2024

Bhavana Tv

Its Your Channel

ಡಿಸಿಎಂ.ಸವದಿ ಅವರ ಮನವಿಗೆ ಸದಪಂದಿಸಿದ ಡಾ. ಸುಧಾಕರ್

ಅಥಣಿ : ಡಾ ಸುಧಾಕರ ತಕ್ಷಣ ಸ್ಪಂದಿಸಿ ಆನಂದ ಕುಳಲಿ ಅವರ ಚಿಕಿತ್ಸೆಗೆ ಬೆಂಗಳೂರಿನಲ್ಲಿ ಅಗತ್ಯವಾದ ಸೌಲಭ್ಯವನ್ನು ಕಲ್ಪಿಸಿಕೊಟ್ಟು ತಮ್ಮ ಕಾಳಜಿ ಮತ್ತು ಕರ್ತವ್ಯಪ್ರಜ್ಞೆಯನ್ನು ಸಾಬೀತುಪಡಿಸಿದ್ದಾರೆ.
ಸವದಿ ಅವರ ಸಕಾಲಿಕ ಸ್ಪಂದನೆ ಯಿಂದಾಗಿ ತೀವ್ರ ಆತಂಕದಲ್ಲಿದ್ದ ಕುಳಲಿ ಅವರ ಕುಟುಂಬವು ಈಗ ನಿಟ್ಟುಸಿರು ಬಿಡುವಂತಾಗಿದೆ.

ಹೀಗೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ತಮ್ಮ ಕುಟುಂಬದವರನ್ನು ಉಳಿಸಲು ಮುಂದಾಗಿ ಪ್ರಯತ್ನಿಸಿದ್ದಕ್ಕೆ ಕುಳಲಿ ಅವರ ಕುಟುಂಬದವರು ಸವದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು

ಅಥಣಿ ತಾಲೂಕ ಪಂಚಾಯಿತಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಆನಂದ ಮಹದೇವ ಕುಳಲಿ ಎಂಬವರು ಕೋವಿಡ್ ಮತ್ತು ಬ್ಲ್ಯಾಕ್ ಫಂಗಸ್ ರೋಗಕ್ಕೆ ತುತ್ತಾಗಿ ಮಹಾರಾಷ್ಟ್ರದ ಮಿರಜ್ ನ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೆಣಸಾಡುತ್ತಿರುವ ಸುದ್ದಿ ತಿಳಿದ ತಕ್ಷಣ ಡಿಸಿಎಂ ಲಕ್ಷ್ಮಣ ಸವದಿ ಅವರು ಈ ವ್ಯಕ್ತಿಯನ್ನು ಬೆಂಗಳೂರಿಗೆ ಕರೆಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಲ್ಲದೆ, ಇದಕ್ಕೆ ತಗಲುವ ಎಲ್ಲಾ ಖರ್ಚುವೆಚ್ಚಗಳನ್ನು ತಾವೇ ವಹಿಸಿಕೊಂಡು ಮಾನವೀಯತೆ ಮೆರೆದಿದ್ದಾರೆ.

ಆನಂದ ಕುಳಲಿ ಅವರು ಬಡ ಉದ್ಯೋಗಿಯಾಗಿದ್ದು, ಕೆಲ ದಿನಗಳ ಹಿಂದೆ ಈ ಭಯಾನಕ ರೋಗಕ್ಕೆ ಈಡಾಗಿ ಮೀರಜ್ ಆಸ್ಪತ್ರೆಗೆ ಸೇರಿದ್ದರೂ ಅಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ಸಿಗದೇ ಕಂಗಾಲಾಗಿದ್ದರು.

ಇದನ್ನು ತಿಳಿದ ತಕ್ಷಣ ಸವದಿಯವರು ಆರೋಗ್ಯ ಸಚಿವರಾದ ಡಾ. ಸುಧಾಕರ್ ಅವರನ್ನು ಸಂಪರ್ಕಿಸಿ, ರೋಗಿಯ ಜೀವ ಉಳಿಸಿಕೊಳ್ಳಲು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗುತ್ತಿರುವ ಬ್ಲ್ಯಾಕ್ ಫಂಗಸ್ ವಿಶೇಷ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡುವಂತೆ ಕೋರಿದ್ದಾರೆ, ಅಷ್ಟೇ ಅಲ್ಲದೆ ಈ ಚಿಕಿತ್ಸೆಗೆ ಅಗತ್ಯವಾದ ವೆಚ್ಚವನ್ನು ತಾವೇ ಸ್ವತ: ಭರಿಸುವುದಾಗಿಯೂ ತಿಳಿಸಿದರೂ.

error: