April 25, 2024

Bhavana Tv

Its Your Channel

ಚೆಂಡು ಹೂ ಸಂಸ್ಕರಣ ಘಟಕದ ವಿಷಯಕ್ಕೆ ಸಂಬOಧಿಸಿದOತೆ ರೈತ ಸಂಘ ಮತ್ತು ರೈತರಲ್ಲಿ ಪರ ವಿರೋಧದ ಪ್ರತಿಭಟನೆ

ಗುಂಡ್ಲುಪೇಟೆ:- ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಗ್ರಾಮದ ಬಳಿ ಇರುವ ಚೆಂಡು ಹೂ ಸಂಸ್ಕರಣ ಘಟಕದ ವಿಷಯಕ್ಕೆ ಸಂಬoಧಿಸಿದoತೆ ರೈತ ಸಂಘ ಮತ್ತು ರೈತರಲ್ಲಿ ಪರ ವಿರೋಧದ ಪ್ರತಿಭಟನೆ ಶುರುವಾಗಿದೆ..

ತಾಲೂಕಿನ ಕಗ್ಗಳದಹುಂಡಿ ಗ್ರಾಮದ ಬಳಿ ಕಾರ್ಯನಿರ್ವಹಿಸುತ್ತಿರುವ ಚೆಂಡು ಹೂ ಸಂಸ್ಕರಣ ಘಟಕದಿಂದ ಸುತ್ತಲಿನಾ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಇಷ್ಟೇ ಅಲ್ಲದೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ ಈ ಹಿನ್ನೆಲೆಯಲ್ಲಿ ಚೆಂಡು ಹೂ ಸಂಸ್ಕರಣ ಘಟಕವನ್ನು ಸ್ಥಗಿತಗೊಳಿಸುವಂತೆ ರಾಜ್ಯ ರೈತ ಸಂಘದ ಸದಸ್ಯರು ಮುಖಂಡರಾದ ಕಡಬೂರು ಮಂಜುನಾಥ್ ಮತ್ತು ಕುಂದಕೆರೆ ಸಂಪತ್ತು ಅವರೊಟ್ಟಿಗೆ ಹಲವು ಬಾರಿ ಪ್ರತಿಭಟನೆ ನಡೆಸಿದ ಬಳಿಕ ತಾತ್ಕಾಲಿಕವಾಗಿ ೧೫ ದಿನಗಳ ಕಾಲ ಕೆಲಸ ನಿಲ್ಲಿಸುವಂತೆ ತಾಲೂಕು ಆಡಳಿತ ಸೂಚನೆ ನೀಡಿತ್ತು ಇದಾದ ಬಳಿಕ ಮತ್ತೆ ಕಾಲಾವಧಿ ಮುಗಿದ ಬಳಿಕ ಮತ್ತೆ ತನ್ನ ಕಾರ್ಯಚಟುವಟಿಕೆಯನ್ನು ಆರಂಭಿಸಿದ ಕಾರ್ಖಾನೆ ವಿರುದ್ದ ಅಸಮಧಾನಗೊಂಡ ರೈತ ಸಂಘ ಸದಸ್ಯರು ಕಾರ್ಖಾನೆ ಆಡಳಿತ ಸಿಬ್ಬಂದಿ ಮತ್ತು ಚೆಂಡು ಮಲ್ಲಿಗೆ ಕಂಪನಿ ಸ್ಥಳೀಯ ಪ್ರತಿನಿಧಿಗಳ ಸಭೆ ಕರೆದು ಚರ್ಚೆ ನಡೆಸಿ ಕಾರ್ಖಾನೆಯಿಂದಾಗುವ ದುಷ್ಪರಿಣಾಮಗಳ ಕುರಿತು ವಿವರಣೆ ನೀಡಿದರೂ ಸಹ ಕಿವಿಗೊಡದ ಆಡಳಿತ ಸಿಬ್ಬಂದಿಗಳಿಗೆ ಸ್ಥಳದಿಂದ ಘೇರಾವ್ ಹಾಕಿದ ರೈತ ಸಂಘ ಸದಸ್ಯರು ಪ್ರವಾಸಿ ಮಂದಿರದ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ ಸರ್ಕಾರ ಮತ್ತು ಕಾರ್ಖಾನೆ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿದರು..
ಸಂಚಾರದ ವ್ಯತ್ಯಯ ಉಂಟಾದ ಪರಿಣಾಮ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ ರು.. ..

ವರದಿ .ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ ತಾಲೂಕು

error: