April 24, 2024

Bhavana Tv

Its Your Channel

ದಕ್ಷಿಣ ಪದವೀಧರರ ವೇದಿಕೆ ಮತ್ತು ಪದವಿದರರ ಸಂವಾದ ಕಾರ್ಯಕ್ರಮಕ್ಕೆ ಚಾಲನೆ

ಗುಂಡ್ಲುಪೇಟೆ: ಗುಂಡ್ಲುಪೇಟೆ ದಕ್ಷಿಣ ಪದವೀಧರರ ವೇದಿಕೆ ಮತ್ತು ಪದವಿದರರ ಸಂವಾದ ಕಾರ್ಯಕ್ರಮಕ್ಕೇ ಚಲನಚಿತ್ರ ನಟ ನೆನಪಿರಲಿ ಪ್ರೇಮ್ ಮತ್ತು ಎನ್.ಎಸ್. ವಿನಯ್ ದೀಪ ಬೆಳಗುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿ ದ ಚಲನಚಿತ್ರ ನಟ ಪ್ರೇಮ್ ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ದಕ್ಷಿಣ ಪದವೀಧರರ ಸಂವಾದ ಕಾರ್ಯಕ್ರಮದ ಕೇಂದ್ರ ಬಿಂದುವಾಗಿರುವ ಎನ್ ಎಸ್ ವಿನಯ್, ನಮ್ಮ ಗೆಳೆಯರು ಅವರು ದಕ್ಷಿಣ ಪದವೀಧರರ ವೇದಿಕೆಯ ಅಧ್ಯಕ್ಷರು ಕೂಡ ಹಾಗಾಗಿ ದಕ್ಷಿಣ ಪದವೀಧರರ ಕ್ಷೇತ್ರಕ್ಕೆ ಮೈಸೂರು ಹಾಸನ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆ ಗಳಲ್ಲಿ ಬರುವ ಎಲ್ಲಾ ಪದವಿದರರು ಇದ್ದು. ಪದವೀಧರ ರು ಎನ್ರೋಲ್ಲ್ಮೆಂಟ್ ಮೊದಲು ಮಾಡಿಸಬೇಕು. ಹಾಗಿದ್ದಲ್ಲಿ ಮಾತ್ರ ನಿಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯ ಎಂದರು. ಎನ್ ಎಸ್ ವಿನಯ್ ರವರು ಸಂಸ್ಥಾಪಕರು. ದಕ್ಷಿಣ ಪದವೀಧರರ ವೇದಿಕೆಯ ಅಧ್ಯಕ್ಷರು ಮಾತನಾಡಿ ಈ ನಾಲ್ಕು ಜಿಲ್ಲೆಯಿಂದ ೬ ಲಕ್ಷ ಪದವೀಧರರು ಇದ್ದಾರೆ. ನಾಲ್ಕು ಜಿಲ್ಲೆಗಳಿಗೆ ಬರುವ ಎಲ್ಲಾ ತಾಲೂಕುಗಳಲ್ಲಿ ಪದವೀಧರರು ಇದ್ದಾರೆ .ಅವರಿಗೆ ಉಚಿತವಾಗಿ ಒಂದು ಲಕ್ಷದ ವರಗೆ ವಿಮಾ ಸೌಲಭ್ಯವನ್ನು ನಾವು ಬದುಕಿರುವ ತನಕ ಕಟ್ಟಿಕೊಂಡು ಬರುತ್ತೇನೆ ಎಂದು ಈ ಕಾರ್ಯಕ್ರಮದ ಮೂಲಕ ಭರವಸೆ ನೀಡಿದರು.

ನಂತರ ಗುಂಡ್ಲುಪೇಟೆ ತಾಲೂಕು ದಕ್ಷಿಣ ಪದವೀಧರರು ಪದವೀಧರ ರ ಕ್ಷೇತ್ರದ ಅಧ್ಯಕ್ಷರಾದ ಎನ್ ಎಸ್ ವಿನಯ್ ಮತ್ತು ನಟ ಪ್ರೇಮ್ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಪದವೀಧರ ವೇದಿಕೆ ಸಂಸ್ಥಾಪಕರಾದ ಎನ್ ಎಸ್ ವಿನಯ್, ಚಲನಚಿತ್ರ ನಟರಾದ ಪ್ರೇಮ್, ಗುಂಡ್ಲುಪೇಟೆ ತಾಲೂಕಿನ ಪದವೀಧರ ರು, ಶಿಕ್ಷಕರುಗಳು ವಿದ್ಯಾರ್ಥಿಗಳು ಹಾಜರಿದ್ದರು

ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

error: