March 29, 2024

Bhavana Tv

Its Your Channel

ವಿಷಮುಕ್ತ ಆಹಾರ ರೋಗಮುಕ್ತ ಜೀವನ- ಶಶಿಕುಮಾರ್

ಗುಂಡ್ಲುಪೇಟೆ . ತಾಲೂಕಿನ ಮಾದಾಪಟ್ಟಣ ಬೌಂಡ್ರಿ ಹತ್ತಿರ ಹೊಸದಾಗಿ ನಿರ್ಮಾಣವಾಗಿರುವ ಪಲಸಿರಿ ನ್ಯಾಚುಲರ್ಸ್ ಗೋ ಆಧಾರಿತ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆ ಯನ್ನು ಡಾ. ದೀಪಕ್ ಅವರು ಉದ್ಘಾಟನೆ ಮಾಡಿದರು . ರೈತ ಯುವಕರಾದ ಶಶಿಕುಮಾರ್ ಮಾತನಾಡಿ ವಿಷಮುಕ್ತ ಆಹಾರ ರೋಗಮುಕ್ತ ಜೀವನವೆಂಬ ಪರಿಕಲ್ಪನೆಯನ್ನು ವಿನೂತನವಾಗಿ ರೈತರಿಂದ ಬೆಳೆದ ಸಾವಯವ ಪದಾರ್ಥಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಒಂದು ಜಾಗೃತಿ ಇದಾಗಿದೆ. ಎಂದರು..

ಡಾ. ದೀಪಕ್ ಮಾತನಾಡಿ ಸಾವಯವ ಕೃಷಿಯೆಂದರೆ ನೈಸರ್ಗಿಕವಾಗಿ ಕೊಟ್ಟಿಗೆ ಗೊಬ್ಬರವನ್ನ ಉಪಯೋಗಿಸಿ ರೈತರು ಬೆಳೆದಿರುವ ಪದಾರ್ಥಗಳನ್ನು ಉಪಯೋಗಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ .ಇವತ್ತಿನ ದಿನಗಳಲ್ಲಿ ಹಣವನ್ನು ಬೇಗ ಸಂಪಾದನೆ ಮಾಡಬೇಕೆನ್ನುವ ಆಸೆಯಿಂದ ನಾವು ಭೂಮಿಗೆ ವಿಷವನ್ನು ಸಿ೦ಪಡಿಸುತ್ತಿದ್ದೇವೆ. ಹಾಗಾಗಿ ನಾವು ಈಗ ಆಹಾರ ತಿನ್ನುವುದು ಸಂಪೂರ್ಣ ವಿಷವಾಗಿದೆ ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸಾವಯವ ಕೃಷಿ ಮಾಡಬೇಕು ಎಂದು ರೈತರಿಗೆ ಈ ಮೂಲಕ ತಿಳಿಸಿದರು

ನಂಜುOಡಸ್ವಾಮಿ (ಟಿ. ಸ್ವಾಮಿ) ರೈತ ಮುಖಂಡ ಬೆಟ್ಟದಮಾದಹಳ್ಳಿ ಮಾತನಾಡಿ ಸಾವಯವ ಉತ್ಪನ್ನ ಕೃಷಿಯನ್ನು ಉಳಿಸಿ ಬೆಳೆಸಬೇಕು ಮತ್ತು ನಮ್ಮ ಮಕ್ಕಳು ಮೊಮ್ಮಕ್ಕಳ ಆಗಿರಬಹುದು ಮುಂದಿನ ದಿನಗಳಲ್ಲಿ ಏಳಿಗೆ ಹೆಸರು ಇರುವುದಿಲ್ಲ. ಹಾಗೂ ನಾವು ತಿನ್ನುವ ಆಹಾರ ಸಂಪೂರ್ಣ ವಿಷ ವಾಗಿದ್ದು ಆದ್ದರಿಂದ ನಾವು ಸಾವಯವ ಕೃಷಿಯನ್ನು ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ರಾಸಾಯನಿಕಹೈಬ್ರಿಡ್ ಪದಾರ್ಥಗಳು ಸಿಗುತ್ತದೆ ಅದನ್ನು ಬಳಸಿದ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಆರೋಗ್ಯ ವಂತೂಸಿಗುವುದಿಲ್ಲ ಅದನ್ನು ಗಮನದಲ್ಲಿಟ್ಟುಕೊಂಡು ನಾವು ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದರು ..

ಈ ಸಂದರ್ಭದಲಿ ಮಾದಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆದ ಡಾ. ದೀಪಕ್ , ವಸಂತ, ಡಾ. ಯೋಗೇಶ್ ಕೆ .ವಿ .ಕೆ. ಹರದನಹಳ್ಳಿ, ನಂಜುಂಡಸ್ವಾಮಿ ಬೆಟ್ಟದ ಮಾದಳ್ಳಿ,ಶಶಿಕುಮಾರ್ ದೊಡ್ಡತುಪ್ಪೂರ್ ಯುವ ರೈತ, ರಾಜೇಶ್ವರಿ, ವಸಂತ ಅಮೃತ ಭೂಮಿ, ಗೀತಾ ,ಭೂಮಿಕ, ಪುಷ್ಪ ನರ್ಸ್ ಇನ್ನು ಮುಂತಾದವರು ಉಪಸ್ಥಿತರಿದ್ದರು

ವರದಿ ಸದಾನ೦ದಾ ಕನ್ನೆಗಾಲ ಗುಂಡ್ಲುಪೇಟೆ

error: