April 18, 2024

Bhavana Tv

Its Your Channel

ಗುಂಡ್ಲುಪೇಟೆ ತಾಲೂಕಿನ 9 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಗಾಗಿ ಪ್ರೊಜೆಕ್ಟರ್ ಕೊಡುಗೆ

ಗುಂಡ್ಲುಪೇಟೆ ತಾಲೂಕಿನ ಆಯ್ದ ಒಂಬತ್ತು ಸರ್ಕಾರಿ ಶಾಲೆಗಳಿಗೆ ಶ್ರೀಮತಿ ಲಕ್ಷ್ಮಿ ಮತ್ತು ಡಾಕ್ಟರ್ ಶಶಿಧರ್ ಹಾರೋಹಳ್ಳಿ ಇವರ ವತಿಯಿಂದ ಅನಿಕೇತನ ವೇದಿಕೆ.. ಬಿ .ಬಸಪ್ಪ ಮೆಮೋರಿಯಲ್ ಟ್ರಸ್ಟ್ ಹೆಗ್ಗಡ ಹಳ್ಳಿ ಗುಂಡ್ಲುಪೇಟೆ ತಾಲೂಕು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗುಂಡ್ಲುಪೇಟೆ ಇವರ ಸಹಯೋಗದೊಂದಿಗೆ ಸ್ಮಾರ್ಟ್ ಕ್ಲಾಸ್ ಗಾಗಿ ಪ್ರೊಜೆಕ್ಟರ್ ಗಳನ್ನು ವಿತರಣೆ ಮಾಡಿದರು.

ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುದರ ಮೂಲಕ ಚಾಲನೆ ನೀಡಲಾಯಿತು .ನಂತರ ಮಾತನಾಡಿದ ತಾಲೂಕು ದಂಡಾಧಿಕಾರಿ ಸಿ.ಜಿ. ರವಿಶಂಕರ್ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ಪ್ರೊಜೆಕ್ಟರ್ ಬಳಕೆ ಅನಿವಾರ್ಯ ಎಂದು ತಿಳಿಸಿದರು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಮಾತನಾಡಿ ಕಳೆದ ಮೂರು ವರ್ಷಗಳಿಂದ ಕೊರೋನಾ ಸಂದರ್ಭದಲ್ಲಿ ಬೋಧನಾ ವಿಧಾನ ಹಿನ್ನೆಲೆಯಲ್ಲಿ ಬಸಪ್ಪ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಈವರೆಗೆ ಒಟ್ಟು 68 ಶಾಲೆಗಳಿಗೆ ವಿವಿಧ ಸಂಸ್ಥೆಗಳ ಸಹಾಯದಿಂದ ಪ್ರೊಜೆಕ್ಟರ್ ಗಳನ್ನು ವಿತರಣೆ ಮಾಡಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಿಕ್ಷಕರಿಗೆ ತಿಳಿಸಿದರು .ನಂತರ ಬಸಪ್ಪ ಮೆಮೋರಿಯಲ್ ಟ್ರಸ್ಟ್ ನ ಅಮೃತ ಶಿವಪ್ರಸಾದ್ ಮಾತನಾಡಿ ನಮ್ಮ ಟ್ರಸ್ಟ್ ವತಿಯಿಂದ ಕಳೆದ 17 ವರ್ಷಗಳಿಂದ ತಾಲೂಕಿನ ವಿವಿಧ ಶಾಲೆಗಳಿಗೆ ನೋಟ್ ಬುಕ್ ಲ್ಯಾಪ್ಟಾಪ್ ಕರೋನ ಸಂದರ್ಭದಲ್ಲಿ ಆಸ್ಪತ್ರೆಯವರಿಗೆ ಔಷಧಿ ವಿತರಣೆ ಹಾಗೂ ಬೇಗೂರು ಮತ್ತು ಗುಂಡ್ಲುಪೇಟೆ ಪದವಿ ಪೂರ್ವ ಕಾಲೇಜುಗಳಿಗೆ ಕಂಪ್ಯೂಟರ್ ಲ್ಯಾಬ್ ಹಾಗೂ 68 ಶಾಲೆಗಳಿಗೆ ಪ್ರಾಜೆಕ್ಟರ್ ವಿತರಣೆ ಮಾಡಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಉಪಯೋಗ ಪಡೆದುಕೊಳ್ಳಬೇಕೆಂದು ಈ ಮೂಲಕ ತಿಳಿಸಿದರು ಈ ಸಂದರ್ಭದಲ್ಲಿ ಬಿ .ಆರ್ .ಸಿ. ಸರೋಜಾ , ಬಿ .ಆರ್ . ಪಿ. ಚಂದ್ರಶೇಖರ ಮೂರ್ತಿ ಹಾಗೂ ಶಾಲಾ ಶಿಕ್ಷಕರುಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಬಸಪ್ಪ ಮೆಮೋರಿಯಲ್ ಟ್ರಸ್ಟ್ನ ಅಮೃತ ಶಿವಪ್ರಸಾದ್ ರವರಿಗೆ ಶಿಕ್ಷಣ ಇಲಾಖೆಯ ವತಿಯಿಂದ ಸನ್ಮಾಸಿದರು.

ವರದಿ: ಸದಾನಂದ ಕನ್ನೆಗಾಲ

error: