November 30, 2023

Bhavana Tv

Its Your Channel

ಎನ್‌ಪಿಎಸ್ ರದ್ದು ಮಾಡಿ ಓಪಿಎಸ್ ಜಾರಿಗೆ ತರುವಂತೆ ತಾಲೂಕಿನ ವಿವಿಧ ಇಲಾಖೆಯ ಸರ್ಕಾರಿ ಇಲಾಖೆಯ ನೌಕರರ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಎನ್‌ಪಿಎಸ್ ರದ್ದು ಮಾಡಿ ಓಪಿಎಸ್ ಜಾರಿಗೆ ತರುವಂತೆ ತಾಲೂಕಿನ ವಿವಿಧ ಇಲಾಖೆಯ ಸರ್ಕಾರಿ ಇಲಾಖೆಯ ನೌಕರರು ಪ್ರತಿಭಟನೆ ನಡೆಸಿದರು,

ಗುಂಡ್ಲುಪೇಟೆ ಪಟ್ಟಣದ ಗುರು ಭವನದ ಮುಂದೆ ಜಮಾಯಿಸಿದ್ದ ಸುಮಾರು 400ಕ್ಕೂ ಹೆಚ್ಚು ತಾಲೂಕಿನ ವಿವಿಧ ಇಲಾಖೆಯ ನೌಕರರಗಳು ಕೇಂದ್ರ ಸರ್ಕಾರ ಜಾರಿಗೆ ತಂದಿರುವAತಹ ಎನ್‌ಪಿಎಸ್ ಪಿಂಚಣಿ ಪದ್ಧತಿಯನ್ನು ರದ್ದು ಮಾಡಿ ಓಪಿಎಸ್ ಪಿಂಚಣಿ ಪದ್ಧತಿಯನ್ನು ಜಾರಿಗೆ ತರುವಂತೆ ಒತ್ತಾಯಿಸುವ ಮೂಲಕ ಸೋಮವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪಟ್ಟಣದ ಊಟಿ ಸರ್ಕಲ್ ನಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು ,
ತದನಂತರ ಪಟ್ಟಣದ ಶಾಸಕರ ಕಚೇರಿಗೆ ತೆರಳಿದಂತಹ ಪ್ರತಿಭಟನಗಾರರು ಕ್ಷೇತ್ರದ ಶಾಸಕ ಸಿ ಎಸ್ ನಿರಂಜನ್ ಕುಮಾರ್ ಅವರ ಸಮ್ಮುಖದಲ್ಲಿ ಮುಂದೆ ಬರಲಿರುವ ಬೆಳಗಾವಿ ಅಧಿವೇಶನದಲ್ಲಿ ಎನ್ ಪಿ ಎಸ್ ರದ್ದು ಮಾಡಿ ಓಪಿಎಸ್ ಜಾರಿಗೆ ತರುವಂತೆ ಇದರ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ತಾಲೂಕಿನ ಸರ್ಕಾರಿ ನೌಕರರಿಗೆ ಸ್ಪಂದಿಸುವAತೆ ತಮ್ಮ ಮನವಿ ಪತ್ರಗಳನ್ನು ಸಲ್ಲಿಸಿದರು.
ಪ್ರತಿಭಟನೆ ಯಲ್ಲಿ ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಶಿವಕುಮಾರ್ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು

ವರದಿ: ಸದಾನಂದ ಕನ್ನೇಗಾಲ

error: