September 16, 2024

Bhavana Tv

Its Your Channel

ಮಂಚಹಳ್ಳಿ ಗ್ರಾಮದ ೩೦ಕ್ಕೂ ಹೆಚ್ಚು ಯುವಕರು ರಾಷ್ಟ್ರೀಯ ಪಕ್ಷಗಳನ್ನು ತೊರೆದು ಜೆಡಿಎಸ್ಗೆ ಸೇರ್ಪಡೆ

ಗುಂಡ್ಲುಪೇಟೆ: ತಾಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ಗ್ರಾಮದ ಮುಖಂಡರುಗಳು ಮತ್ತು ಯುವಕರುಗಳು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಅಭ್ಯರ್ಥಿ ಕಡಬೂರು ಮಂಜುನಾಥ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ನಂತರ ಮಾತನಾಡಿದ ಕಡಬೂರು ಮಂಜುನಾಥ್ ನಮ್ಮ ಕರ್ನಾಟಕದಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದಾದರೂ ಸರ್ಕಾರವಿದ್ದರೆ ಅದು ಕುಮಾರಸ್ವಾಮಿಯವರ ಸರ್ಕಾರ ಹಾಗಾಗಿ ರೈತರು ನಿರ್ಗತಿಕರು ಕೂಲಿ ಕಾರ್ಮಿಕರು ಯುವಕರಿಗೆ ನಿರುದ್ಯೋಗಿಗಳಿಗೆ ಎಲ್ಲರಿಗೆ ನಮ್ಮ ಸರ್ಕಾರದಲ್ಲಿ ಸೌಲತ್ತುಗಳನ್ನು ನೀಡಿದ್ದಾರೆ ಎಂದರು, ಈ ಸಂದರ್ಭದಲ್ಲಿ ಮಂಚಳ್ಳಿ ಗ್ರಾಮದ ಮಣಿಕಂಠ ಕೇಬಲ್ ಮನಿ, ವಸಂತ್ ನಂಜನಾಯಕ, ಅಂಗಡಿ ರಾಜೇಶ್ ,ಪ್ರಭು ,ನಾಗೇಂದ್ರ, ಮಂಜು ,ದೊಡ್ಡ ಸ್ವಾಮಿ ನಾಯಕ್, ಜಗದೀಶ್, ಚಿಕ್ಕ ಸಿದ್ದನಾಯಕ ,ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರುಗಳಾದ, ಹುಲಸಗುಂದಿ ಮುತ್ತಣ್ಣ, ಕಂದೇ ಗಾಲ ಪ್ರಸಾದ್, ಹೊಸೂರು ಪ್ರದೀಪ್, ಭಾಚಹಳ್ಳಿ ಮನಿ, ಇನ್ನು ಮುಂತಾದವರು ಇದ್ದರೂ.
ವರದಿ : ಸದಾನಂದ ಕಣ್ಣೆಗಾಲ

error: