
ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮಸ್ಥರು ಮತ್ತು ಅಕ್ಕಪಕ್ಕದ ನೆರಹೊರೆಯ ಗ್ರಾಮಸ್ಥರುಗಳು ಹಮ್ಮಿಕೊಂಡಿದ್ದ ಶ್ರೀ ಶಿವಲಿಂಗೇAದ್ರ ಸ್ವಾಮಿಗಳವರ 60ನೇ ವರ್ಷದ ಗುರುವಂದನ ಕಾರ್ಯಕ್ರಮವನ್ನು ಪಡಗೂರು ಮಠದಲ್ಲಿ ಏರ್ಪಡಿಸಿದರು. ಇದರ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಮತ್ತು ದಿವ್ಯ ಸಮ್ಮುಖವನ್ನ ಪರಮಪೂಜ್ಯ ನಿರಂಜನ ಪ್ರಣವ ಸ್ವರೂಪಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರು ಸಿದ್ದಗಂಗಾ ಕ್ಷೇತ್ರ ತುಮಕೂರು ಇವರು ಮತ್ತು ಅಧ್ಯಕ್ಷತೆಯನ್ನ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ಅರಮನೆ ರಾಜ ವಂಶಸ್ಥರು ಮೈಸೂರು ಮತ್ತು ದಿವ್ಯ ಉಪಸ್ಥಿತಿ ತಾಲೂಕಿನ ಹಾಗೂ ಜಿಲ್ಲೆಯ ವಿವಿಧ ಮಠದಪೂಜ್ಯರುಗಳು ಭಾಗಿಯಾಗಿದ್ದರು.
ಕ್ಷೇತ್ರದ ಶಾಸಕರಾದ ಎಚ್ ಎಂ ಗಣೇಶ್ ಪ್ರಸಾದ್ ಮಾತನಾಡಿ ಅಡವಿ ಮಠದ ಪೂಜ್ಯರಿಗೆ 60 ವರ್ಷ ಕಳೆದಿದೆ ಅಂದರೆ ಅವರು ಮಠಕ್ಕೆ ಮಾಡಿರುವ ಸೇವೆ ಮತ್ತು ಜನರ ನಡುವೆ ಮತ್ತು ಭಕ್ತರಗಳಿಗೆ ಮಾಡಿರುವ ಕೆಲಸಗಳು ಅನನ್ಯ ಮತ್ತು ನಮ್ಮಂತ ಕಿರಿಯ ಶಾಸಕರುಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ತಾಲೂಕಿನ ಹಾಗೂ ಜಿಲ್ಲೆಯ ಮಠಾಧಿಪತಿಗಳು ಉಪಸ್ಥಿತರಿದ್ದರು. ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ಬಂದ0ತಹ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಗ್ರಾಮಸ್ಥರು ಏರ್ಪಡಿಸಿದ್ದರು.
ಸದಾನಂದ ಕನ್ನೆಗಾಲ

More Stories
ವಿಕಲಚೇತನ ಮಕ್ಕಳಿಗೆ ಕಸ್ಟಮೈಸ್ ವೀಲ್ ಚೇರ್ ವಿತರಣೆ
ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಆಯ್ದ ಸರಕಾರಿ ಶಾಲೆಗಳಿಗೆ ಎಲೆಕ್ಟ್ರಾನಿಕ್ ಉಪಕರಣ ವಿತರಣೆ