April 19, 2024

Bhavana Tv

Its Your Channel

ಸೋಮವಾರ ಜೂನ್೨೧ ರಿಂದ ವ್ಯಾಕ್ಸಿನ್ ಮೇಳ:- ಡಾ.ಇಂದಿರಾ ಆರ್.ಕಬಾಡೆ

ಬಾಗೇಪಲ್ಲಿ:- ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ೧೮ ವರ್ಷ ಮೇಲ್ಪಟ್ಟವರಿಗೆ ಜೂನ್.೨೧ರ ಸೋಮವಾರದಿಂದ ಲಸಿಕಾ ಅಭಿಯಾನ ಆರಂಭವಾಗಲಿದೆ. ಈ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ೪೫ ಸಾವಿರ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಂತೆ ಅವರು, ಜೂನ್.೨೧ರ ಸೋಮವಾರದಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಮೇಳ ನಡೆಸಲಾಗುತ್ತಿದೆ. ೧೮ ರಿಂದ ೪೫ ವರ್ಷ ವಳಗಿನವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು ೪೫ ಸಾವಿರ ಜನರಿಗೆ ಲಸಿಕೆ ನೀಡೋ ಗುರಿಯನ್ನು ಹೊಂದಲಾಗಿದೆ ಪ್ರತಿಯೊಬ್ಬ ನಾಗರಿಕರು ತಪ್ಪದೇ ಲಸಿಕೆ ಪಡೆಯುವ ಮೂಲಕ ಕರೋನ ರೋಗದಿಂದ ವಿಮುಕ್ತಿ ಪಡೆಯೋಣ ಎಂದು ಹೇಳಿದರು

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ಹತ್ತಿರವಿರುವ ಉದ್ಯಾನವನ, ಸಮುದಾಯ ಭವನ, ಪುರಸಭೆ, ಪಾಲಿಕೆಯ ವಾರ್ಡ್ ಕಚೇರಿ, ಆಟದ ಮೈದಾನ ಸೇರಿದಂತೆ ಹೋಬಳಿ ಮಟ್ಟದಲ್ಲಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹೆಚ್ಚು ಸ್ಥಳಾವಕಾಶವಿರುವ ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಅಲ್ಲಿಯೂ ಕೋವಿಡ್ ಲಸಿಕೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು
ಇದರ ಮಧ್ಯೆಯೂ ೨ನೇ ಡೋಸ್ ಲಸಿಕೆ ಪಡೆಯೋರಿಗೆ ಯಾವುದೇ ಸಮಸ್ಯೆ ಇಲ್ಲ ಎಂದರು.

ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸತ್ಯನಾರಾಯಣ ರೆಡ್ಡಿ, ತಾಲೂಕು ತಹಶಿಲ್ದಾರ್ ಡಿ. ಎ.ದಿವಾಕರ್ ,ಮುಸ್ತಕ್,ಹಿರಿಯ ಆರೋಗ್ಯ ಅಧಿಕಾರಿ ಸರಸ್ವತಮ್ಮ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ ; ಗೋಪಾಲ ರೆಡ್ಡಿ, ಬಾಗೇಪಲ್ಲಿ

error: