April 19, 2024

Bhavana Tv

Its Your Channel

೫ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಅಭಿಯಾನ ಡಾ ಸತ್ಯನಾರಾಯಣ ರೆಡ್ಡಿ ಇಂದು ಚಾಲನೆ,

ಬಾಗೇಪಲ್ಲಿ:- ತಾಲ್ಲೂಕಿನಾದ್ಯಂತ ಸೋಮವಾರ ವಿಶೇಷ ಕೋವಿಡ್ ಲಸಿಕಾ ಮೇಳವು ಬಾಗೇಪಲ್ಲಿ ಪಟ್ಟಣದಲ್ಲಿ ಒಟ್ಟು ೫ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ನಡೆಯುತ್ತದ್ದು ೧೮ ವರ್ಷಕ್ಕಿಂತ ಹೆಚ್ಚು ವಯಸ್ಸಿನ ಆದ್ಯತಾ ವಲಯ ಗುಂಪಿನ ಫಲಾನುಭವಿಗಳಿಗೆ, ಮುಂಚೂಣಿ ಕಾರ್ಯಕರ್ತರಿಗೆ, ದುರ್ಬಲರಿಗೆ ಹಾಗೂ ೪೪ ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಸುಮಾರು ೫ ಸಾವಿರ ಜನರಿಗೆ ಲಸಿಕೆ ಹಾಕುವ ಗುರಿ ಇದೆ ಎಂದು ತಾಲೂಕು ಅರೋಗ್ಯ ಅಧಿಕಾರಿ ಡಾ.ಸತ್ಯನಾರಾಯಣ ರೆಡ್ಡಿ ಹೇಳಿದರು.
ತಾಲೂಕು ಆರೋಗ್ಯ ಕಲ್ಯಾಣ ಇಲಾಖೆ ವತಿಯಿಂದ ಬಾಗೇಪಲ್ಲಿ ಪಟ್ಟಣದ ಪುರಸಭೆ, ಬಾಲಕಿಯರ ಶಾಲೆ ಹಿಂಭಾಗ ಖಾಸಗಿ ಶಾಲೆ ,ಗೂಳೂರು ರಸ್ತೆಯಲ್ಲಿ ಇರುವ ಪುರಸಭೆ ಕಟ್ಟಡದಲ್ಲಿ ಹಾಗೂ ಸರ್ಕಾರಿ ಬಾಲಕಿಯರ ಶಾಲೆ ಸೇರಿದಂತೆ ಒಟ್ಟು ೫ ಲಸಿಕಾ ಕೇಂದ್ರಗಳಲ್ಲಿ ಹಾಗೂ ಸಾರ್ವಜನಿಕ ಆರೋಗ್ಯ ಕೇಂದ್ರಲ್ಲಿ ಬೆಳಿಗ್ಗೆ ೧೦ರಿಂದ ಸಂಜೆ ೪ ಗಂಟೆಯವರೆಗೆ ಲಸಿಕಾ ಅಭಿಯಾನ ನಡೆಯಲಿದೆ ಎಂದು ಬಾಗೇಪಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸತ್ಯನಾರಾಯಣ ರೆಡ್ಡಿ ಅವರು ಪತ್ರಿಕೆಗೆ ಮಾಹಿತಿ ಹಂಚಿಕೊ0ಡಿದ್ದಾರೆ.

ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕು ತಹಶಿಲ್ದಾರ್ ಡಿ. ಎ.ದಿವಾಕರ್ ,ಕೈಗಾರಿಕಾ ವಿಸ್ತೀರ್ಣಾಧಿಕಾರಿ ಮೆಹಬೂಬ್ ಬಾಷಾ,ಪುರಸಭೆ ಮುಖ್ಯ ಕಾರ್ಯನಿರ್ಹಣಾಧಿಕಾರಿ ಶ್ರೀಮತಿ ಪಂಕಜಾರೆಡ್ಡಿ, ಪುರಸಭೆ ಉಪಾಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಎ.ನಂಜುoಡಪ್ಪ, ಶ್ರೀನಿವಾಸ ರೆಡ್ಡಿ ,ಜಬೀವುಲ್ಲಾ ,ಆರೋಗ್ಯ ಹಿರಿಯ ಅಧಿಕಾರಿ ಸುಭಾನ್ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.
ವರದಿ ; ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ.

error: