March 29, 2024

Bhavana Tv

Its Your Channel

ಸುಳ್ಳು ವದಂತಿ ನಂಬಿದ್ದ ಜನತೆ: ಲಸಿಕೆ ಪಡೆಯಲು ಹಿಂದೇಟು ಹಾಕಿದ್ದ ಹಳ್ಳಿ ಮಂದಿ: ಮನವೊಲಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ

ಬಾಗೇಪಲ್ಲಿ:- ಅಪಪ್ರಚಾರಗಳಿಗೆ ಕಿವಿಗೊಟ್ಟು ಕೋವಿಡ್ ಲಸಿಕೆ ಪಡೆಯಲು ನಿರಾಕರಿಸಿದ್ದ ಗ್ರಾಮಸ್ಥರನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಇಂದಿರಾ ಆರ್.ಕಬಾಡೆ, ತಾಲೂಕು ತಹಶಿಲ್ದಾರ್ ಡಿ. ಎ.ದಿವಾಕರ್ ಹಾಗೂ ಆರೋಗ್ಯ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಮನವೊಲಿಸಿ ಲಸಿಕೆ ಹಾಕಿಸಿರುವ ಘಟನೆ ಬಾಗೇಪಲ್ಲಿ ತಾಲ್ಲೂಕು ಗೂಳೂರು ಹೋಬಳಿ ವ್ಯಾಪ್ತಿಯ ಪಾರ್ವತಿಪುರ (ಸಿದ್ದಪ್ಪಲ್ಲಿ) ತಾಂಡದಲ್ಲಿ ವರದಿಯಾಗಿದೆ.

ಸುಳ್ಳು ವದಂತಿ ನಂಬಿದ್ದ ಜನತೆ :- ಲಸಿಕೆ ಪಡೆದುಕೊಂಡರೆ ಮದ್ಯಪಾನ ಬಿಡಬೇಕು, ಲಸಿಕೆ ತೆಗೆದುಕೊಂಡವರು ಕೆಲವರು ಸತ್ತು ಹೋಗಿದ್ದಾರೆ, ಪಾರ್ಶ್ವವಾಯು ಬರುವುದಂತೆ, ಪುರುಷಾರ್ಥ ಕಳೆದುಕೊಳ್ಳುವ ಸಾಧ್ಯತೆ ಮೊದಲಾದ ವದಂತಿಗಳನ್ನು ನಂಬಿ ಗೂಳೂರು ಹೋಬಳಿ ಪಾರ್ವತಿಪುರ ಹಳ್ಳಿಗಳ ಜನ ಲಸಿಕೆ ಕೇಂದ್ರಗಳಿಗೆ ಆಗಮಿಸಿ ಪಡೆಯಲು ಹಿಂದೇಟು ಹಾಕಿದ್ದರು.
ಈ ಮಾಹಿತಿಯನ್ನು ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಇಂದಿರಾ ಆರ್.ಕಬಾಡೆ ಇಂದು ಸ್ವತಃ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಲು ಜನತೆ ಮನವೊಲಿಸಿ ಯಶಸ್ವಿಯಾಗಿದ್ದಾರೆ.
ತದನಂತರ ಮಾತನಾಡಿದ ಡಾ.ಇಂದಿರಾ ಆರ್ ಕಬಾಡೆ ಕೋವಿಡ್ ಸೋಂಕು ಈಗಾಗಲೇ ಎರಡನೇ ಅಲೆ ಜನರನ್ನು ಹೈರಾಣಾಗಿಸಿದೆ. ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಜನ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಳ್ಳಿ ಜನ ಲಸಿಕೆ ಹಾಕಿಸಿಕೊಳ್ಳಲು ಬರುತ್ತಿಲ್ಲ. ನಗರ ಪ್ರದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಆದರೆ ಹಳ್ಳಿಗಳಲ್ಲಿ ಬೆರಳಿಕೆ ಜನ ಮಾತ್ರ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಹಳ್ಳಿ ಜನ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಲಸಿಕೆಯಿಂದ ಸಮಸ್ಯೆ ಆದೀತು ಎನ್ನುವ ಕಾರಣವಂತೆ. ಇನ್ನು ಹೊಲದಲ್ಲಿ ದುಡಿಯಲು ಹೋಗುತ್ತಾರೆ ಲಸಿಕೆ ಹಾಕಿಸಿಕೊಂಡರೇ ಮೈ ಕೈ ನೋವು, ಜ್ವರ ಬರುತ್ತೇ ಹೇಗೇ ಎನ್ನುವ ಅಪನಂಬಿಕೆಯಿAದ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟಿಗೆ ಕಾರಣವೆನ್ನುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕು ತಹಶಿಲ್ದಾರ್ ಡಿ. ಎ.ದಿವಾಕರ್, ಬಾಗೇಪಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸತ್ಯನಾರಾಯಣ ರೆಡ್ಡಿ,ಹಾಗೂ ಆರೋಗ್ಯ ಸಿಬ್ಬಂದಿ ಹಾಜರಿದ್ದರು.

ವರದಿ ಗೋಪಾಲ ರೆಡ್ಡಿ ಬಾಗೇಪಲ್ಲಿ

error: