April 20, 2024

Bhavana Tv

Its Your Channel

ದೇಶದ ೫೦ ಕೋಟಿ ಜನರಿಗೆ ಕೋವಿಡ್ ಲಸಿಕೆ :- ಬಿಜೆಪಿ ಜಿಲ್ಲಾದ್ಯಕ್ಷ ರಾಮಲಿಂಗಪ್ಪ

ಬಾಗೇಪಲ್ಲಿ:- ದೇಶದ ೧೩೦ ಕೋಟಿ ಜನಸಂಖ್ಯೆ ಪೈಕಿ ಈವರೆಗೆ ೫೦ ಕೋಟಿ ಜನರಿಗೆ ಉಚಿತವಾಗಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಪಕ್ಷದ ಜಿಲ್ಲಾದ್ಯಕ್ಷ ರಾಮಲಿಂಗಪ್ಪ ಹೇಳಿದರು.

ಬಾಗೇಪಲ್ಲಿ ಪಟ್ಟಣದ ಆರ್ಯ ವೈಶ್ಯ ಕನ್ನಿಕಾ ಪರಮೇಶ್ವರಿ ಕಲ್ಯಾಣಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜುಲೈ ೧೮ರವರೆಗೆ ಶೇಕಡಾ ೪೫ ರಷ್ಟು ಜನರಿಗೆ ಮೊದಲ ಡೋಸ್ ನೀಡಿರುವುದು ಹೆಮ್ಮೆಯ ವಿಚಾರ. ಹಂತ ಹಂತವಾಗಿ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ. ಸಕಾರಾತ್ಮಕ ವಿಚಾರಗಳನ್ನು ಜನರಿಗೆ ತಿಳಿಸುವ ಕೆಲಸ ವಾಗಬೇಕು ಎಂದು ತಿಳಿಸಿದರು.

ಮುಂದಿನ ವಿಧಾನಸಭೆ ಚುನಾವಣೆ ೨೦೨೩ಕ್ಕೆ ನಡೆಯಲಿದೆ. ಅಲ್ಲಿಯವರೆಗೂ ಕಾಯದೆ ಈಗಿನಿಂದಲೇ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಕೇವಲ ಚುನಾವಣೆಗೆ ಯೋಚನೆ ಮಾಡದೇ ಸಂಘಟನೆಗೆ ಆದ್ಯತೆ ನೀಡಬೇಕು. ಕೋವಿಡ್ ಸಂದರ್ಭದಲ್ಲೂ ಬಾಗೇಪಲ್ಲಿ ಬಿಜೆಪಿ ಮಂಡಲ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚುನಾವಣೆ ಬಂದಾಗ ಮತ ಕೇಳುವುದು ಒಂದು ಭಾಗ. ಸೇವಾ ಸಂಘಟನೆ ಪಕ್ಷದ ಆಧಾರ ಸ್ತಂಭ. ಇದನ್ನು ಮುಂದುವರೆಸಿಕೊAಡು ಹೋಗಬೇಕು ಎಂದು ಸಲಹೆ ನೀಡಿ ಮುಂದಿನ ದಿನಗಳಲ್ಲಿ ಬಾಗೇಪಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಕಮಲದ ಪಕ್ಷದಿಂದ ಶಾಸಕರನ್ನು ವಿಧಾನ ಸಭೆಗೆ ಕಳುಹಿಸುವ ಮೂಲಕ ಕಮಲ ವನ್ನು ಅರಳಿಸಬೇಕು ಎಂದು ಹೇಳಿದರು.

ಬಾಗೇಪಲ್ಲಿ ತಾಲ್ಲೂಕು ಮಂಡಲಾದ್ಯಕ್ಷ ಆರ್ ಪ್ರತಾಪ್ ಮಾತನಾಡಿ ಏಳು ವರ್ಷಗಳಲ್ಲಿ ದೇಶದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಸಾಮಾನ್ಯ ಜನರ ಬದುಕನ್ನು ಹಸನಾಗಿಸುವ ಕೆಲಸವನ್ನು ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ಮಾಡಿದ್ದು, ಮುಂದಿನ ಅವಧಿಯಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಮೋದಿಯವರ ನೇತೃತ್ವದಲ್ಲಿ ಸರಕಾರ ರಚನೆಯಾಗುವುದು ಖಚಿತ. ಭಾರತವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರಬೇಕಾಗಿದೆ ಎಂದು ಬಾಗೇಪಲ್ಲಿ ತಾಲ್ಲೂಕು ಬಿಜೆಪಿ ಪಕ್ಷದ ಮಂಡಲಾದ್ಯಕ್ಷ ಆರ್ ಪ್ರತಾಪ್ ಹೇಳಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಬಿಜೆಪಿ ಪಕ್ಷದ ಮುಖಂಡ ಕೇಶವ ಪ್ರಸಾದ್ ಮಾತನಾಡಿ
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷದ ಸರ್ಕಾರ ಕೋವಿಡ್ ಬಂದ ಸಂದರ್ಭದಲ್ಲಿ ಎದೆಗುಂದದೆ ನಿಭಾಯಿಸಿ ವಿಶ್ವದಲ್ಲಿ ಉತ್ತಮ ನಾಯಕ ಎಂದು ಪಟ್ಟಕ್ಕೆ ಏರಿದ್ದಾರೆ ಎರಡನೇ ಅಲೆಯನ್ನು ನಿಭಾಯಿಸಿ ಮೂರನೇ ಅಲೆ ಬಾರದಂತೆ ಸೂಚನೆಗಳನ್ನು ತೆಗೆದುಕೊಂಡು ನಿಭಾಯಿಸಲು ಸಿದ್ದರಾಗಿದ್ದಾರೆ. ಕರೋನ ಸಂದರ್ಭದಲ್ಲಿ ನಮ್ಮ ದೇಶದ ವಿಜ್ಞಾನಿಗಳು ಎರಡು ಲಸಿಕೆ ತಯಾರಿಸಿ ಜನರಿಗೆ ನೀಡಲು ತಯಾರಿ ನಡೆಸಿದಾಗ ಇದರ ಬಗ್ಗೆ ಜನರಲ್ಲಿ ಇಲ್ಲ ಸಲ್ಲದ ಭಯ ಹುಟ್ಟಿಸಿ ಅಪಪ್ರಚಾರ ಮಾಡಿ ಸಂಶಯಾಸ್ಪದ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ವರ್ತಿಸಿದ್ದಾರೆ ಸಮಾಜಮುಖಿ ಕೆಲಸಗಳನ್ನು ಸಂಶಯಾಸ್ಪದವಾಗಿ ಬಿಂಬಿಸುವ ಕೆಲಸವನ್ನು ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ದೇಶದಿಂದಲೇ ಕಿತ್ತೊಗೆಯುವ ಸಂಕಲ್ಪವನ್ನು ಎಲ್ಲರೂ ಮಾಡಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕು ಮಂಡಲಾದ್ಯಕ್ಷ ಆರ್ ಪ್ರತಾಪ್,ಕೆ.ಡಿ.ಪಿ ಸದಸ್ಯರಾದ ಆರ್. ವೆಂಕಟೇಶ್, ಗುಡಿಬಂಡೆ ತಾಲ್ಲೂಕು ಮಂಡಲಾದ್ಯಕ್ಷ ಗಂಗಿರೆಡ್ಡಿ ಉಪಾಧ್ಯಕ್ಷ ಶ್ರೀನಿವಾಸ್, ಕೆ.ಡಿ.ಪಿ.ಸದಸ್ಯರಾದ ಪ್ರಭಾಕರ್ ರೆಡ್ಡಿ, ನಲ್ಲಪ್ಪರೆಡ್ಡಿಪಲ್ಲಿ ಗೋಪಾಲ,ಅಲ್ಪಸಂಖ್ಯಾತ ಅದ್ಯಕ್ಷ ಬಾಬಾಜಾನ್, ಗೂಳೂರು ರಂಗಾರೆಡ್ಡಿ, , ಮಂಜುಳಾ, ವೆಂಕಟಲಕ್ಷ್ಮಮ್ಮ, ಲಕ್ಷ್ಮೀ,ವನಜಾ,ರೂಪಾ.ಕೆ.ಎಂ.ರಮಾದೇವಿ,ಗAಗುಲಮ್ಮ,ರಮೇಶ್ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು

ವರದಿ ಗೋಪಾಲರೆಡ್ಡಿ ಬಾಗೇಪಲ್ಲಿ
ಚಿಕ್ಕಬಳ್ಳಾಪುರ

error: