April 24, 2024

Bhavana Tv

Its Your Channel

ಚಿತ್ರಾವತಿಯನ್ನು ವಿಚಿತ್ರಾವತಿಯನ್ನಾಗಿಸುವುದು ಬೇಡ!.

ಬಾಗೇಪಲ್ಲಿ: ಬರನಾಡೆಂದೆ ಖ್ಯಾತಿಯಾಗಿರುವ ಬಾಗೇಪಲ್ಲಿ ತಾಲ್ಲೂಕಿನಲ್ಲಿ ನೀರಿನದ್ದೆ ಬಹು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬೇಸಿಗೆ ಬಂತೆoದರೆ ಬಿಂದಿಗೆಗಳಿಡಿದು ಪ್ರತಿಭಟನೆ ಮಾಡುವ ನಾರಿಯರದ್ದೆ ಸದ್ದು ಮತ್ತು ಸುದ್ದಿಯೂ ಹೌದು. ಏಕೆಂದರೆ ಈ ಭಾಗದಲ್ಲಿ ಯಾವುದೇ ಜೀವಂತ ನದಿಗಳು ಹರಿಯುತ್ತಿಲ್ಲ. ಏನಿದ್ದರೂ ಉತ್ತಮವಾಗಿ ಮಳೆಯಾದರೆ ಮಾತ್ರ ನೀರಿನ ಹರಿವು ಕಾಣಿಸುವ ಬಯಲುಸೀಮೆ ರಾಯಲಸೀಮೆಯ ಗಡಿಭಾಗ. ಇಂತಹ ಪರಿಸ್ಥಿತಿ ಇದ್ದರೂ ಈ ಭಾಗದ ಆಡಳಿತಗಳು ಮಾತ್ರ ಜಲಸಂರಕ್ಷಣೆಯ ಬಗ್ಗೆ ಗಂಭೀರತೆ ತೋರುವುದೇ ಇಲ್ಲ. ಜಲಮೂಲಗಳಾದ ಕೆರೆ, ಕುಂಟೆ, ಕಾಲುವೆಗಳು ಅಕ್ರಮ ಒತ್ತುವರಿ, ಮರಳು,ಮಣ್ಣು ಗಣಿಗಾರಿಕೆಗಳಿಂದಾಗಿ ಕಂದಕಗಳಾಗಿ ಪರಿಣಮಿಸುವೆ.

ತಾಲ್ಲೂಕಿನ ಏಕ ಮಾತ್ರ ನದಿ ಚಿತ್ರಾವತಿ. ಈ ನದಿಯು ಪಟ್ಟಣದ ಏಟುಗಡ್ಡಪಲ್ಲಿ ಸಮೀಪ ಆಂಧ್ರಪ್ರದೇಶದ ಕಡೆಗೆ ಹರಿದು ಹೋಗುತ್ತದೆ. ಈ ಪಟ್ಟಣದ ಸೇತುವೆಯ ಕೆಳಗಿನ ನದಿಪಾತ್ರವು ಕಸದಿಂದ ತುಂಬಿ, ಗಬ್ಬು ವಾಸನೆ ಹೊಡೆಯುತ್ತಿದೆ. ಇದರಿಂದಾಗಿ ನಾಗರೀಕರಿಗೆ ಕಿರಿಕಿರಿ ಉಂಟಾಗಿದೆ. ಎಷ್ಟೇ ಗಬ್ಬು ವಾಸನೆ ಬಂದರೂ ಪರವಾಗಿಲ್ಲ ನಮ್ಮ ಕಸ ಸುರಿಯುವುದು ಮಾತ್ರ ನದಿ ಪಾತ್ರೆಗೆ ಎಂಬAತಹ ನಾಗರೀಕರು. ನಾವೇನು ಮಾಡಲಿ ಜನರಿಗೆ ಬುದ್ದಿ ಇಲ್ಲ ಎನ್ನುವಂತಹ ಆಡಳಿತದಲ್ಲಿನ ಅಧಿಕಾರಿಗಳು. ಹೀಗಾಗಿಯೇ ಯಾರೇ ಬಂದರೂ ನಾವು ಬದಲಾಗಲ್ಲ ಎಂಬAತೆ ಜನ,ಜನಪ್ರತಿನಿಧಿಗಳು ತಮ್ಮ ಸ್ವಾರ್ಥ ಸಾಧನೆಯಲ್ಲಿ ಮಗ್ನರಾಗಿದ್ದಾರೆ.

ನದಿ ಪಾತ್ರಕ್ಕೆ ಪಟ್ಟಣದ ನಿವಾಸಿಗಳು ತ್ಯಾಜ್ಯವನ್ನು ಸುರಿಯದಂತೆ ನದಿ ದಡದಲ್ಲಿ ಪುರಸಭೆಯು ಸೂಚನಾ ಫಲಕಗಳನ್ನು ಅಳವಡಿಸಿ ವಿಶೇಷ ಕಾರ್ಯಕ್ರಮಗಳ ಮೂಲಕ ನದಿಯನ್ನು ಸ್ವಚ್ಛವಾಗಿಡಲು ಪ್ರಾಧಾನ್ಯತೆ ನೀಡಬೇಕು. ಹಾಗೇಯೆ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಬೇಕೆಂದು ಡಿವೈಎಫ್‌ಐನ ಮುಖಂಡ ಐವಾರಪಲ್ಲಿ ಹರೀಶ್ ರವರು ಒತ್ತಾಯಿಸಿದರು.

ವರದಿ ಗೋಪಾಲ ರೆಡ್ಡಿ ಬಾಗೇಪಲ್ಲಿ

error: