March 27, 2024

Bhavana Tv

Its Your Channel

ಹಿಂದೂ- ಮುಸ್ಲಿಂರ ಸೌಹಾರ್ದ ಸಂಗಮ ಸೈಸವಲಿ ದರ್ಗಾ.

ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಜಿಲ್ಲೆಯ ಹಿಂದೂ- ಮುಸ್ಲಿಂರ ಸೌಹಾರ್ದ ಸಂಗಮ ಸೈಸವಲಿ ದರ್ಗಾ ಭಕ್ತರ ಮೇಲೆ ಸದಾ ಆಶೀರ್ವಾದಗಳನ್ನು ಇಟ್ಟಿರುವ ಸೂಫಿ ಪರಂಪರೆಯ ತಾಣವಾಗಿದೆ.

ತಾಲೂಕಿನ ಮಾರಗಾನಕುಂಟೆ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ದೇವಿಕುಂಟೆ ಗ್ರಾಮದ ಸೈಸವಲಿ ದರ್ಗಾ. ಇದು ಹಿಂದೂ ಮುಸ್ಲಿಂ ಸಮಾನತೆ ಸಾರುವ ಒಂದು ಧಾರ್ಮಿಕ ತಾಣವಾಗಿದೆ. ಭಕ್ತರು ಶುಕ್ರವಾರ ದಿನದಂದು ಪೂಜೆ ಮಾಡಿ ತಮ್ಮ ಬೇಡಿಕೆಗನ್ನು ಈಡೇರಿಸಲಿ ಎಂದು ಸೈಸವಲಿ ತಾತನಿಗೆ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯ ಹಿಂದಿನಿAದಲೂ ನಡೆದು ಬಂದಿದೆ.

ಪ್ರತಿವರ್ಷ ಬಹಳ ವಿಜೃಂಭಣೆಯಿAದ ಖವ್ವಾಲಿ (ಗಂಧ)ವನ್ನು ನಡೆಸುತ್ತಾರೆ. ಆ ದಿನದಂದ ಖವ್ವಾಲಿಗೆ ಸುತ್ತಮುತ್ತಲಿನ ಜಿ.ಚೆರ್ಲೊಪಲ್ಲಿ, ತಿಮ್ಮಂಪಲ್ಲಿ, ಪಿಚ್ಚಲವಾರಪಲ್ಲಿ, ಮಾರಗಾನಕುಂಟೆ, ಹೊನ್ನಂಪಲ್ಲಿ, ಮಾಡಪಲ್ಲಿ, ಕೊತ್ತಕೋಟೆ, ಜಿಲ್ಲಾಲಪಲ್ಲಿ ಸೇರಿದಂತೆ ಹತ್ತಾರು ಗ್ರಾಮಗಳ ಜನರು ಸೇರುತ್ತಾರೆ. ಇಲ್ಲಿ ಖಾಜ ಸಬ್ ಎಂಬ ಅಜಾರತ್ ಸೈಸವಳಿಯವರಿಗೆ ಸೇವೆಯಲ್ಲಿ ನಿರತರಾಗಿದ್ದರು. ಈಗ ಅಲ್ಲಾಭಾಕಾಶ್ ಸೈಸವಳಿ ಸೇವೆಯಲ್ಲಿ ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ.

ದರ್ಗಾಗೆ ವಿವಿಧ ಗ್ರಾಮ,ಪಟ್ಟಣ ಪ್ರದೇಶಗಳಿಂದ ಬರುತ್ತಾರೆ. ಅಪರಿಚಿತರಾಗಲಿ ಅಥವಾ ಈ ಮಾರ್ಗವಾಗಿ ರಾತ್ರಿ ವೇಳೆ ಬರುವ ಸಂಚಾರಿಗಳಿಗೆ ಸೈಸವಳಿ ದರ್ಗಾ ಆಶ್ರಯವಾಗಿದೆ. ಸೈಸವಾಲಿ ತಾತರವರು ಜನರ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿAದ ಭಕ್ತರಲ್ಲಿ ಜನಪ್ರಿಯತೆಯಾಗಿದೆ.

ನಮ್ಮ ಊರಿನ ಹಿನ್ನೆಲೆಯಲ್ಲಿ ಸೈಸವಲಿ ತಾತ ಬಗ್ಗೆ ರಾಜೇಶ್ ಕುಮಾರ್ ಹೀಗೆ ವಿವರಿಸಿದ್ದಾರೆ:

ದೇವಿಕುಂಟೆ ಬಳಿಯ ಅಕ್ಕಮ್ಮ ಬೆಟ್ಟದ” ಇಟ್ಟಿಗೆ ದುರ್ಗ ಕೋಟೆ “ಇಲ್ಲಿ ೧೮ನೆಯ ಶತಮಾನದಲ್ಲಿ ಇಸ್ಮಾಯಿಲ್ ಷಾ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿ ಒಬ್ಬ ಧರ್ಮ ಸಂತ,ದಿವ್ಯ ಶಕ್ತಿಯನ್ನು ಬಲ್ಲವರಾದ ಸೂಫಿ ಸಂತ ಸೈಸವಳಿ ತಾತ ಎಂಬ ವ್ಯಕ್ತಿ ಇದ್ದರು.

ಇವರಿಗೆ ಇಬ್ಬರು ಶಿಷ್ಯರು ಇದ್ದರೂ ಯುದ್ದದಲ್ಲಿ ಸೈಸವಳಿ ತಲೆಯನ್ನು ಶತ್ರುಗಳು ಕತ್ತರಿಸಿದರು ಅದು ಬಂದು ಬೆಟ್ಟದಿಂದ ಜಲಪಾತದ ಕೆಳಗೆ ಬಿದ್ದಿತ್ತು ಎಂದು ಹಿರಿಯರು ತಿಳಿಸುತ್ತಾರೆ. ದೇವಿಕುಂಟೆಯ ಅಜಾರತ್ ರವರ ಮುಂಜಾನೆ ಕನಸಲ್ಲಿ ಈ ಘಟನೆ ಚಿತ್ರಣ ಮಾಹಿತಿಯಿಂದ ಮುಂಜಾನೆ ಎದ್ದು ಜಲಪಾತ ಬಳಿ ಹೋದರೆ. ಪೊದೆಯಲ್ಲಿ ತಲೆ ಇದನ್ನು ನಂಬಲಾಗದAತಹ ಸತ್ಯವಾಗಿತ್ತು. ಆ ಕತ್ತರಿಸಲ್ಪಟ್ಟ ತಲೆಯನ್ನು ತಂದು ದೇವಿಕುಂಟೆ ಬಳಿ ಸಮಾಧಿ ಮಾಡಬೇಕು ಎಂದು ಹೇಳಿದರು. ಅದಕ್ಕೆ ಇಲ್ಲಿಗೆ ತಂದು ಸಮಾಧಿ ಮಾಡಿದ್ದಾರೆ. ಅವರು ಹೇಳಿದ ಹಾಗೆ ಇದು ಒಂದು ಧಾರ್ಮಿಕ ಸ್ಥಳವಾಗಿದೆ.

ಸೈಸವಳಿ ದರ್ಗಾದಲ್ಲಿ ಮೂರು ಗೋರಿಗಳಿವೆ. ಈ ದರ್ಗಾದ ಬಳಿಯ ದೊಡ್ಡ ಬೇವಿನ ಮರವಿದ್ದು, ಆ ಮರ ಜೀವಂತವಾಗಿರುಷ್ಟು ಕಾಲ ಸೈಸವಾಲಿ ತಾತನ ಪ್ರಭಾವ ಜೀವಂತ ಎಂದು ಹಿರಿಯ ಅಜರತ್ ರವರು ಹೇಳುತ್ತಾರೆ.

ಇಲ್ಲಿನ ಸುತ್ತ ಮುತ್ತಲಿನ ಗ್ರಾಮಗಳ ಜನರು ಈ ಬೇವಿನ ಮರದಲ್ಲಿ ಹೂವು ಚೆನ್ನಾಗಿ ಬಿಟ್ಟಿರೆ ಬೆಳೆಗಳು ಉತ್ತಮವಾಗುತ್ತವೆ ಎಂದು ಜನರಲ್ಲಿ ನಂಬಿಕೆ ಇದೆ ಎನ್ನುತ್ತಾರೆ ಗ್ರಾಮದ ನಿವಾಸಿ ಡಿ.ಪಿ ಗೋಪಾಲ್ ರವರು ತಿಳಿಸಿದರು.

ದೇವಿಕುಂಟೆ ಗ್ರಾಮದಲ್ಲಿ ಸುಮಾರು ೮೦-೧೦೦ ಕುಟುಂಬಗಳ ಮನೆಗಳಿದ್ದು ಸುಮಾರು ೬೦೦ ಜನ ಸಾಂದ್ರತೆ ಇದ್ದು. ಹಿಂದೂ ಮುಸ್ಲಿಂರೂ ಸಮಾನತೆಯಿಂದ ಜೀವನ ನಡೆಸುತ್ತಾರೆ ಎನ್ನುತ್ತಾರೆ ಗ್ರಾಮದ ನಿವಾಸಿ ಡಿ.ಸಿ ಶ್ರೀನಿವಾಸ್.

ದರ್ಗಾ ಮುಂದೆ ಜನರಿಗೆ ಅನುಕೂಲವಾಗುವಂತೆ ಡ್ಯಾಂ ಸಹ ಕಟ್ಟಿದ್ದಾರೆ. ಜನರು ಬಂದು ಪೂಜೆ ಮಾಡಿಕೊಂಡು ಹೋಗುತ್ತಾರೆ. ಭಕ್ತರ ತಮ್ಮ ಆಕಾಂಕ್ಷೆಗಳ ಈಡೇರಿಕೆಗಳು ನೆರವೇರಿದರೆ ಅಂತಹ ವ್ಯಕ್ತಿಗಳು ಉಡುಗೊರೆ ರೂಪದಲ್ಲಿ ಅನ್ನದಾನ ವ್ಯವಸ್ಥೆ, ದರ್ಗಾಗೆ ಶೆಡ್ ,ಕುಡಿಯುವ ನೀರು, ವಿದ್ಯುತ್ ದೀಪಗಳ ವ್ಯವಸ್ಥೆ ಮುಂತಾದ ಜನಾನುಕೂಲ ಕಾರ್ಯಗಳನ್ನು ಮಾಡುತ್ತಾರೆ.

ಬೇಕಿದೆ ಕಾಯಕಲ್ಪ ; ಸೂಫಿ ಪರಂಪರೆಯ ಕೊಂಡಿಯಾಗಿದ್ದ ಸೈಸವಲಿ ತಾತ ನವರು ಹಿಂದೂ- ಮುಸ್ಲಿಂ ಎರಡು ಧರ್ಮದ ಸಮಾನತೆ ಸಂಕೇತ ಸೈಸವಲಿ ದರ್ಗಾವನ್ನು ವಕ್ಫ್ ಅಧಿಕಾರಿಗಳು ಎಚ್ಚೆತ್ತು ಅಭಿವೃದ್ಧಿ ಮಾಡಬೇಕಿದೆ ಎನ್ನುತ್ತಾರೆ ಡಿ. ಜಿ ಪವನ್ ಕಲ್ಯಾಣ್.

error: